rtgh

9144 ರೈಲ್ವೇ ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಆರಂಭ.! ನಿರೀಕ್ಷೆ ಮೀರಿದ ವೇತನ ಒಂದೇ ಕ್ಲಿಕ್‌ನಲ್ಲಿ ಅರ್ಜಿ ಸಲ್ಲಿಸಿ

Railway Recruitment Board (RRB)
Share

ಹಲೋ ಸ್ನೇಹಿತರೇ, ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ತಂತ್ರಜ್ಞರ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.  ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಇಲ್ಲಿದೆ ಉದ್ಯೋಗದ ಸಂಪೂರ್ಣ ವಿವರ.   

Railway Recruitment Board (RRB)

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ. ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ತಂತ್ರಜ್ಞರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಾರಿಯ ಒಂದೇ ಹಂತದಲ್ಲಿ ಪರೀಕ್ಷೆ ನಡೆಯಲಿದ್ದು. ಮಾರ್ಚ್ 8, 2024 ರಂದು ರೈಲ್ವೆ ನೇಮಕಾತಿ ಮಂಡಳಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ  ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. 

ಅರ್ಜಿ ಪ್ರಕ್ರಿಯೆ: 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಮಾರ್ಚ್ 09 ರಿಂದ ಆನ್‌ಲೈನ್ ಅರ್ಜಿ  ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅರ್ಹ & ಆಸಕ್ತ ಅಭ್ಯರ್ಥಿಗಳು  08ನೇ ಏಪ್ರಿಲ್ 2024ರವರೆಗೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

2024 ರ RRB ತಂತ್ರಜ್ಞರ ಅರ್ಜಿ ನಮೂನೆಯು ಪ್ರಾದೇಶಿಕ ರೈಲ್ವೆ ನೇಮಕಾತಿ ಮಂಡಳಿಗಳ (RRBs) ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರ್ಚ್ 9, 2024 ರಿಂದು ಏಪ್ರಿಲ್ 8, 2024 ರವರೆಗೆ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಅರ್ಜಿ ಸಲ್ಲಿಸಲು ಈ ಲಿಂಕ್ rrbapply.gov.in ಭೇಟಿ ನೀಡಿ.

9 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ: 

ಈ ನೇಮಕಾತಿ ಅಡಿಯಲ್ಲಿ ಒಟ್ಟು 9144 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು. ಈ ಪೈಕಿ 1092 ಹುದ್ದೆಗಳು ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ ಮತ್ತು 1092 ಹುದ್ದೆಗಳು ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ ಪೋಸ್ಟ್‌ನ್ನು ಒಳಗೊಂಡಿದೆ.  

ವೇತನ: ರೂ.19,900-20,200

ವಿದ್ಯಾರ್ಹತೆ: 

ಗ್ರೇಡ್ I ಸಿಗ್ನಲ್ ತಂತ್ರಜ್ಞ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬ್ಯಾಚುಲರ್ ಆಫ್ ಸೈನ್ಸ್ / ಬಿ.ಎಸ್ಸಿ. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಸಂಸ್ಥೆಯಿಂದ ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ ಉಪಕರಣಗಳಲ್ಲಿ ಪದವಿ ಹೊಂದಿರಬೇಕಾಗುತ್ತದೆ. 

ಟೆಕ್ನಿಷಿಯನ್ ಗ್ರೇಡ್-III ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಮೆಟ್ರಿಕ್ಯುಲೇಷನ್/SSLC ಜೊತೆಗೆ ITI & ವಿಜ್ಞಾನದಲ್ಲಿ ಬ್ಯಾಚುಲರ್ ಡಿಗ್ರಿ ಹೊಂದಿರಬೇಕಾಗುತ್ತದೆ .

ವಯೋಮಿತಿ: 

ಟೆಕ್ನಿಷಿಯನ್ ಗ್ರೇಡ್-1 ಹುದ್ದೆಗಳಿಗೆ ವಯೋಮಿತಿ 18 ವರ್ಷಕ್ಕಿಂತ ಹೆಚ್ಚಿರಬೇಕು & 36 ವರ್ಷಗಳಿಗಿಂತ ಕಡಿಮೆ ಇರಬೇಕಾಗುತ್ತದೆ. ಆದರೆ ಟೆಕ್ನಿಷಿಯನ್ ಗ್ರೇಡ್-III ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ 18 ರಿಂದ 33 ವರ್ಷಗಳ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓ‌ಬಿ‌ಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಇತರೆ ವಿಷಯಗಳು

CBSE 10ನೇ ತರಗತಿ ಪರೀಕ್ಷೆಗೆ ಮಾರ್ಗಸೂಚಿ ಬಿಡುಗಡೆ!!

ಮೋದಿ ‌₹78,000 ಸಬ್ಸಿಡಿ ವಿದ್ಯುತ್.! ಅಪ್ಲೇ ಮಾಡಿ, ಫ್ರೀ ಕರೆಂಟ್‌ ಪಡೆದು KEB ಗೆ ಮಾರಾಟ ಮಾಡಿ


Share

Leave a Reply

Your email address will not be published. Required fields are marked *