rtgh
Headlines

ಪುಣ್ಯಕ್ಷೇತ್ರಗಳ ಯಾತ್ರಿಗಳಿಗೆ ಸಿಹಿಸುದ್ದಿ: ಸರ್ಕಾರದಿಂದ ಸಹಾಯಧನ ಹೆಚ್ಚಳ!

Punya Kshetralu
Share

ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಹೋಗುವ ಯಾತ್ರಾರ್ಥಿಗಳಿಗೆ ಸಹಾಯಧನದ ಪಾವತಿ ಮುಂತಾದ ಆಡಳಿತವನ್ನು ಸರಳೀಕರಣಗೊಳಿಸಿರುವ ರಾಜ್ಯದ ಮುಜರಾಯಿ ಇಲಾಖೆಯು, ಸರ್ಕಾರಿ ಕಚೇರಿಗಳ ಅಲೆದಾಟವನ್ನು ತಪ್ಪಿಸಿದೆ.

Punya Kshetralu

ಯಾತ್ರಾರ್ಥಿಗಳಿಗೆ ನೀಡಲಾಗುವಂತಹ ಸಹಾಯಧನದ ಪಾವತಿಯನ್ನು ಮತ್ತಷ್ಟು ಸರಳೀಕೃತಗೊಳಿಸಲಾಗಿದ್ದು, ಹಲವುವಾರು ನಿಬಂಧನೆ ಹಾಗೂ ಕಚೇರಿಗಳಿಗೆ ತಡಕಾಡುವ ವ್ಯವಸ್ಥೆಗೆ ಬ್ರೇಕ್ ಅನ್ನು ಹಾಕುವ ಮೂಲಕವಾಗಿ ಮುಜರಾಯಿ ಇಲಾಖೆಯ ಯಾತ್ರಾರ್ಥಿಗಳಿಗೆ ಮತ್ತಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ.

ಹೊಸ ವಿಧಾನ ಹೇಗೆ?

ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿಯನ್ನು ಮಾಡಿಕೊಂಡು, ಜಿಯೋಲೊಕೇಶನ್‌ ‌ಎನ್ನುವ ಮಾಹಿತಿಯನ್ನು ಪೂರ್ಣಗೊಳಿಸಬೇಕು.

ಸೆಲ್ಫಿ ಒಳಗೊಂಡಿರುವಂತಹ ಫೋಟೋವನ್ನು ಅಪ್‌ಲೋಡ್ ಮಾಡುವ ಮೂಲಕವೇ ಯಾತ್ರಾ ಸ್ಥಳದಲ್ಲಿ ಯಾತ್ರಾರ್ಥಿಗಳ ಉಪಸ್ಥಿತಿಯನ್ನು ಖಚಿತಪಡಿಸಬೇಕು.

ಇದನ್ನೂ ಸಹ ಓದಿ; ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಫೋನ್ ಬಳಕೆ ಬ್ಯಾನ್!!

ಫೋಟೋದ ಹಿಮ್ಬಾಗದಲ್ಲಿ ದೇವಾಲಯದ ಪ್ರಮುಖವಾದ ಸ್ಥಳವನ್ನು ಕಾಣುವಂತೆ ಅಪ್‌ಲೋಡ್ ಮಾಡಬೇಕು.

ಪ್ರವರ್ಗ ಸಿ ದೇವಾಲಯದ ಅರ್ಚಕರು / ನೌಕರರು ಹಾಗೂ ಅವರ ಕುಟುಂಬದ ಒಬ್ಬರಿಗೆ ಒಟ್ಟು 2400 ಜನಕ್ಕೆ ವರ್ಷದಲ್ಲಿ 1 ಬಾರಿ ಉಚಿತವಾಗಿ ಕಾಶಿ ಯಾತ್ರೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಚಾರ್ ಧಾಮ್ ಯಾತ್ರೆಗೆ 30,000 ರೂಪಾಯಿ, ಕೈಲಾಸ ಮಾನಸ ಸರೋವರದ ಯಾತ್ರೆಗೆ 20,000 ರೂಪಾಯಿ ಮತ್ತು ಕಾಶಿ ಯಾತ್ರೆಯಲ್ಲಿ ಗಯಾ ಸೇರಿಸಿ 5,000 ರೂಪಾಯಿ.

ಹಾಗೂ ರೈಲು ಮೂಲಕವಾಗಿ ಯಾತ್ರೆ ಕೈಗೊಳುವ ಯಾತ್ರಾರ್ಥಿಗಳಿಗೆ 5000 ರೂಪಾಯಿಂದ 7500 ಕ್ಕೆ ಸಹಾಯಧನವನ್ನು ಹೆಚ್ಚಿಸಲಾಗಿದೆ.

ಒಟ್ಟು 30,000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಮಾತು ತಪ್ಪಿದ ‘ಗ್ಯಾರಂಟಿ’ ಸರ್ಕಾರ! ಗೃಹಲಕ್ಷ್ಮಿ ಹಣ ಸಂದಾಯ ಸ್ಥಗಿತ..?

ಸರ್ಕಾರಿ ನೌಕರರ HRA ಪರಿಷ್ಕರಣೆಗೆ ಆದೇಶ!! ಎಷ್ಟು ಏರಿಕೆಯಾಗಲಿದೆ?


Share

Leave a Reply

Your email address will not be published. Required fields are marked *