ಬೆಂಗಳೂರು: 2024 -25ನೇ ಶೈಕ್ಷಣಿಕ ವರ್ಷಕ್ಕೆ ಖಾಸಗಿ ಶಾಲೆಗಳ ಪ್ರವೇಶ ಪ್ರಕ್ರಿಯೆಯು ನಡೆಸುತ್ತಿದ್ದು, ಕೆಲವು ಶಾಲೆಗಳಲ್ಲಿ ಶೇ. 20 ರಿಂದ 30ರಷ್ಟು ಶುಲ್ಕವನ್ನು ಹೆಚ್ಚಳ ಮಾಡುವುದರ ಮೂಲಕ ಪೋಷಕರಿಂದ ಸುಲಿಗೆಯನ್ನು ಮಾಡಲಾಗುತ್ತಿದೆ.
ಒಂದು ಅಥವಾ ಎರಡು ಕಂತಿನಲ್ಲಿ ಶುಲ್ಕವನ್ನು ಪಾವತಿಸಬೇಕೆಂದು ಕೆಲವು ಖಾಸಗಿಯ ಶಾಲೆಗಳು ಒತ್ತಾಯಿಸುತ್ತಿದ್ದು, ಪೋಷಕರಿಗಿದು ನುಂಗಲಾರದ ತುತ್ತಾಗಿದೆ. CBSC, ICSC, ರಾಜ್ಯದ ಪಠ್ಯಕ್ರಮದ ಶಾಲೆಗಳಲ್ಲಿ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಮೊದಲು ಕನಿಷ್ಠ 2 ರಿಂದ ಗರಿಷ್ಠ 4, ಕೆಲವುವೊಂದು ಪ್ರಕರಣಗಳಲ್ಲಿ ಇನ್ನೂ ಹೆಚ್ಚಿನ ಕಂತಿನಲ್ಲಿ ಶುಲ್ಕವನ್ನು ಪಾವತಿ ಮಾಡಲು ಶಾಲೆಗಳು ಅವಕಾಶವನ್ನು ನೀಡಿದ್ದವು. ಈ ಬಾರೀ ಹೆಚ್ಚು ಶಾಲೆಗಳು ಒಂದೇ ಕಂತಿನಲ್ಲಿ ತಪ್ಪಿದಲ್ಲಿ 2 ಕಂತಿನಲ್ಲಿ ಶುಲ್ಕವನ್ನು ಪಾವತಿಸಬೇಕು ಎಂದು ಒತ್ತಾಯಿಸುತ್ತಿವೆ ಎನ್ನಲಾಗಿದೆ.
ಬೆಂಗಳೂರಿನ ಅನೇಕ ಖಾಸಗಿ ಶಾಲೆಗಳಲ್ಲಿ ಶೇ. 20 ರಿಂದ 30 ರಷ್ಟು ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಇದೇ ರೀತಿಯಾಗಿ ರಾಜ್ಯದ ವಿವಿಧೆಡೆಗಳಲ್ಲಿ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಕನಿಷ್ಠ 25 ಸಾವಿರದಿಂದ ಗರಿಷ್ಠ 30 ಸಾವಿರ ರೂಪಾಯಿ ಇದ್ದ ಶುಲ್ಕವನ್ನು 30 ರಿಂದ 35 ಸಾವಿರ ರೂಪಾಯಿವರೆಗೆ ಹೆಚ್ಚಳವನ್ನು ಮಾಡಲಾಗಿದೆ. ಹೆಸರುಗಳಿಸಿದ ಶಾಲೆಗಳಲ್ಲಿ 40 ರಿಂದ 50 ಸಾವಿರ ರೂಪಾಯಿಗಳವರೆಗೆ ಇದ್ದ ಶುಲ್ಕವನ್ನು ಈಗಾ ಕನಿಷ್ಠ 50 ರಿಂದ 65 ಸಾವಿರ ರೂಪಾಯಿಗಳವರೆಗೆ ಹೆಚ್ಚಳವನ್ನು ಮಾಡಲಾಗಿದೆ.
ಇದನ್ನೂ ಸಹ ಓದಿ: SSLC Exam-2: ಜೂ.14 ರಿಂದ 2ನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭ!
ಭಾರಿ ಬೇಡಿಕೆ ಎಂದು ತೋರಿಸಿಕೊಳ್ಳುವ ಶಾಲೆಗಳಲ್ಲಿ 70 ರಿಂದ 90 ಸಾವಿರ ರೂಪಾಯಿ ಇದ್ದ ಶುಲ್ಕವನ್ನು 1 ಲಕ್ಷದಿಂದ 1.2 ಲಕ್ಷ ರೂಪಾಯಿವರೆಗೆ ಹೆಚ್ಚಳವನ್ನು ಮಾಡಲಾಗಿದೆ. ಬೋಧನಾ ಶುಲ್ಕವನ್ನು, ಕ್ರೀಡಾ ಶುಲ್ಕವನ್ನು ಸೇರಿ ಪಠ್ಯೇತರ ಚಟುವಟಿಕೆಗಳು, ಪಠ್ಯಪುಸ್ತಕ ಮತ್ತು ಸಮವಸ್ತ್ರಕ್ಕೆ ಶುಲ್ಕ ಇದಾಗಿದ್ದು, ಇದರ ಹೊರತಾಗಿ ಸಾರಿಗೆಯ ವ್ಯವಸ್ಥೆಯು ಸೇರಿ ಅನೇಕ ಶುಲ್ಕವನ್ನು ಪಾವತಿಸಬೇಕು.
ಖರ್ಚು ವೆಚ್ಚಗಳು ಹೆಚ್ಚಾಗುವುದರಿಂದ ಶೇ. 10 ರಿಂದ 15 ರಷ್ಟು ಶುಲ್ಕ ಏರಿಕೆಗೆ ಅವಕಾಶವಿದೆ. ಪೋಷಕರಿಗೆ ಹೊರೆಯಾಗುವಂತೆ ಶೇ. 20 ರಿಂದ 30 ರಷ್ಟು ಶುಲ್ಕವನ್ನು ಹೆಚ್ಚಳ ಮಾಡಬಾರದು. ಬಹುತೇಕವಾಗಿ ಶಾಲೆಗಳಲ್ಲಿ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಈ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯ ಕೇಳಿಬಂದಿದೆ.
ಇತರೆ ವಿಷಯಗಳು:
ಕರ್ನಾಟಕದಲ್ಲಿ ಮತ್ತೆ ಮುಂದುವರಿಯುತ್ತೆ ವರುಣನ ಅಬ್ಬರ! ಈ ಜಿಲ್ಲೆಗಳಿಗೆ ಹೈ ಅಲರ್ಟ್
ಶಾಲಾ ಶಿಕ್ಷಕರಿಗೆ ಸಿಹಿಸುದ್ದಿ! SSLC ವಿಶೇಷ ತರಗತಿ ನಡೆಸುವ ಶಿಕ್ಷಕರಿಗೆ ಗಳಿಕೆ ರಜೆ