rtgh
Headlines

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿ ಓದಿ

new ration card updates
Share

ಹಲೋ ಸ್ನೇಹಿತರೇ, ಕರ್ನಾಟಕದಲ್ಲಿ ಹೊಸ APL / BPL ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವ್ಯಾವ ದಾಖಲೆಗಳು ಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

new ration card updates

ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿತ್ತು. ಜೂನ್‌ ತಿಂಗಳಿನಲ್ಲಿ ಮತ್ತೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸುವವರು ಕೆಲವು ಪ್ರಮುಖ ಅಂಶಗಳನ್ನು ಗಮನಿಸಿ. ಅರ್ಹರು ರಾಜ್ಯದ ಆಹಾರ & ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ ahara.kar.nic.in ಮೂಲಕ ಹೊಸ ಪಡಿತರ ಚೀಟಿಗೆ ಅಪ್ಲೇ ಮಾಡಬಹುದಾಗಿದೆ.

ರಾಜ್ಯದ ಪಡಿತರ ಚೀಟಿ ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಅಗತ್ಯವಿರುವ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಹೊಸ APL / BPL ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವ್ಯಾವ ದಾಖಲೆಗಳು ಬೇಕು ಅನ್ನೋವ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲಾತಿಗಳು

* ವೋಟರ್ ಐಡಿ (voter ide)
* ಆಧಾರ್ ಕಾರ್ಡ್ (aadhar card)
* ಇತ್ತೀಚಿನ ಪಾರ್ಸ್‌ಪೋರ್ಟ್ ಸೈಜ್‌ ಫೋಟೋ (Photo)
* ಮೊಬೈಲ್ ಸಂಖ್ಯೆ (Mobile number)

ಈ ದಾಖಲೆಗಳು ಇದ್ದರೆ ಮಾತ್ರ ಆನ್‌ಲೈನ್ ಮೂಲಕ ಹೊಸ ಪಡಿತರ ಚೀಟಿಗೆ ನೀವು ಅಪ್ಲೇ ಮಾಡಬಹುದು. ಅಧಿಕೃತ ವೆಬ್‌ಸೈಟ್ kar.nic.inಗೆ ಭೇಟಿ ನೀಡಬೇಕು. ಬಳಿಕ ಮುಖಪುಟದಲ್ಲಿನ ಇ-ಸೇವೆಗಳು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲೇ ಮಾಡಬಹುದು. ಇದಲ್ಲದೆ https://ahara.kar.nic.in/Home/EServices ವೆಬ್‌ಸೈಟ್‌ನ ಲಿಂಕ್‌ಅನ್ನು ನೇರವಾಗಿ ಕ್ಲಿಕ್ ಮಾಡಿಕೊಳ್ಳಬಹುದು. ಬಳಿಕ ಇ-ಪಡಿತರ ಚೀಟಿ ಆಯ್ಕೆ ಮಾಡಿ. ಬಳಿಕ ಕೆಳಗಡೆ ಸ್ಕ್ರಾಲ್ ಮಾಡಿದರೆ, ಹೊಸ ಪಡಿತರ ಚೀಟಿಗಾಗಿ ಅಪ್ಲೇ ಮಾಡಲು ಲಿಂಕ್ ಸಿಗುತ್ತದೆ. ಅಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ. 

ಅಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ನೀವು BPL / APL ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಅನ್ನೋದನ್ನು ಆಯ್ಕೆ ಮಾಡಿಕೊಂಡು ನಮೂದಿಸಬೇಕಾಗುತ್ತದೆ. ಅಂತಿಮವಾಗಿ ಅರ್ಜಿಯ ಜೊತೆ ಅಲ್ಲಿ ಕೇಳುವ ದಾಖಲೆಗಳ ಸಾಫ್ಟ್ ಕಾಫಿಯನ್ನು ಅಪ್‌ಲೋಡ್ ಮಾಡಿ, ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿ.

ಇತರೆ ವಿಷಯಗಳು

ಇಂದಿನಿಂದ 1 ವಾರ ರಾಜ್ಯದಲ್ಲಿ ಭಾರೀ ಮಳೆ!! ಹವಾಮಾನ ಇಲಾಖೆ ಎಚ್ಚರಿಕೆ

1 ರಿಂದ 10 ವರ್ಷದ ಎಲ್ಲಾ ಮಕ್ಕಳಿಗೆ ಸಿಗತ್ತೆ ತಿಂಗಳಿಗೆ 1500 ರೂ.! ಆನ್‌ಲೈನ್‌ನಲ್ಲಿ ಅಪ್ಲೇ ಮಾಡಿ


Share

Leave a Reply

Your email address will not be published. Required fields are marked *