ಹಲೋ ಸ್ನೇಹಿತರೇ, ದೇಶದಲ್ಲಿ ನಿರುದ್ಯೋಗದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಕೇಂದ್ರ ಸರ್ಕಾರವು ಯುವಕರಿಗೆ ಸ್ವಂತ ಉದ್ಯಮ ಶುರು ಮಾಡಲು ಸಪೋರ್ಟ್ ಮಾಡುತ್ತಿದೆ. ಇದಕ್ಕಾಗಿ ಪಿಎಂ ಮೋದಿ ಅವರು 2015ರಲ್ಲಿ ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಯುವಕರು ತಮ್ಮದೇ ಆದ ಸ್ವಂತ ಉದ್ಯಮ ಅಥವಾ ಸ್ವಂತ ಉದ್ಯೋಗ ಶುರು ಮಾಡಲು ಉಚಿತವಾಗಿ ತರಬೇತಿ ಕೊಡುವುದರ ಜೊತೆಗೆ 8000 ಕೂಡ ಕೊಡಲಾಗುತ್ತದೆ. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ..
Contents
ಪಿಎಂ ಕೌಶಲ್ ವಿಕಾಸ್ ಯೋಜನೆ:
ದೇಶದ ಯುವ ಪೀಳಿಗೆಗಾಗಿ ಜಾರಿಗೆ ತಂದಿರುವ ಈ ಯೋಜನೆಯ ಸೌಲಭ್ಯವನ್ನು ಹುಡುಗರು ಮತ್ತು ಹುಡುಗಿಯರು ಇಬ್ಬರು ಕೂಡ ಪಡೆದುಕೊಳ್ಳಬಹುದು. ಚೆನ್ನಾಗಿ ಓದಿರುವವರಿಗೆ ಆದ್ಯತೆ ಕೊಡಲಾಗುತ್ತಿದೆ. ದೇಶದ ಎಲ್ಲಾ ರಾಜ್ಯದವರು ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿಭಿನ್ನ ರೀತಿಯ ತರಬೇತಿಗೆ ಬೇರೆ ಬೇರೆ ಕಾಲದ ಮಿತಿಯನ್ನು ಫಿಕ್ಸ್ ಮಾಡಲಾಗಿದ್ದು, ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅರಿಸಿಕೊಂಡು, ಕಳಿತುಕೊಳ್ಳಬಹುದು. ಈ ಯೋಜನೆಯ ಮೂಲಕ ಕೆಲಸಕ್ಕಾಗಿ ಆನ್ಲೈನ್ ಮತ್ತು ಆಫ್ಲೈನ್ ಎರಡು ರೀತಿಯಲ್ಲಿ ತರಬೇತಿಗಳನ್ನು ಅಟೆಂಡ್ ಮಾಡಬಹುದು. ಯುವಕ ಯುವತಿಯರಿಗೆ ಇದೊಂದು ಒಳ್ಳೆಯ ಅವಕಾಶ ಆಗಿದೆ.
ಅಗತ್ಯವಿರುವ ದಾಖಲೆಗಳು:
- ವಿದ್ಯಾರ್ಹತೆಗೆ ಸರ್ಟಿಫಿಕೇಟ್
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಅಡ್ರೆಸ್ ಪ್ರೂಫ್
- ಕ್ಯಾಸ್ಟ್ ಸರ್ಟಿಫಿಕೇಟ್
- ಇನ್ಕಮ್ ಸರ್ಟಿಫಿಕೇಟ್
- ಏಜ್ ಪ್ರೂಫ್
- ಫೋನ್ ನಂಬರ್
- Employment ID
ಇದನ್ನೂ ಸಹ ಓದಿ : ಜುಲೈ 1 ರಿಂದ ʻಕ್ರೆಡಿಟ್ ಕಾರ್ಡ್ʼ ಬಿಲ್ ಪಾವತಿಗೆ ಹೊಸ ರೂಲ್ಸ್!
ಮೂಲಭೂತ ಮಾನದಂಡ:
- ಚೆನ್ನಾಗಿ ಓದಿರುವ ವಿದ್ಯಾವಂತರಿಗೆ ಅವರ ಕೌಶಲ್ಯವನ್ನು ಹೆಚ್ಚಿಸಿಕೊಂಡು, ಅವರ ಕೆಲಸಕ್ಕೆ ಸಹಾಯ ಮಾಡುವ ಯೋಜನೆ ಇದಾಗಿದ್ದು, ಅಭ್ಯರ್ಥಿಗಳು ಶಿಕ್ಷಣ ಪಡೆದಿರುವುದು ಮುಖ್ಯ ಆಗಿರುತ್ತದೆ.
- ಭಾರತದ ಎಲ್ಲಾ ರಾಜ್ಯದವರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಬಹುದು.
- ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳು ಕೂಡ ಅರ್ಜಿ ಸಲ್ಲಿಸುವ ವ್ಯಕ್ತಿಯ ಬಳಿ ಇರಲೇಬೇಕು
- ಅರ್ಜಿ ಸಲ್ಲಿಸುವ ಹುಡುಗ ಮತ್ತು ಹುಡುಗಿಯರ ವಯಸ್ಸು 18 ವರ್ಷ ತುಂಬಿರಬೇಕು.
ಕೌಶಲ್ ವಿಕಾಸ್ ಯೋಜನೆಯ ಉಪಯೋಗಗಳು:
ಓದಿದ್ದರು ಸಹ ಹಲವು ಜನರು ಕೆಲಸ ಪಡೆಯಲು ಕಷ್ಟಪಡುತ್ತಿದ್ದಾರೆ. ಅವರ ಅರ್ಹತೆಗೆ ತಕ್ಕದಾದ ಕೆಲಸ ಸಿಗುತ್ತಿಲ್ಲ. ಅಂತವರು ಈ ಯೋಜನೆಯ ಮೂಲಕ ತರಬೇತಿ ಪಡೆದು, ತಮ್ಮದೇ ಸ್ವಂತ ಉದ್ಯೋಗ ಶುರು ಮಾಡಬಹುದು ಅಥವಾ ಬೇರೆ ಕಡೆ ಕೆಲಸ ಮಾಡಬಹುದು.
ಪಿಎಂ ಕೌಶಲ್ ವಿಕಾಸ್ ಯೋಜನೆಯ ಅಡಿಯಲ್ಲಿ ತರಬೇತಿ ಪಡೆದ ನಂತರ ಅವರಿಗೆ ಸರ್ಟಿಫಿಕೇಟ್ ಕೂಡ ಸಿಗಲಿದ್ದು, ಅದನ್ನು ಭಾರತದ ಎಲ್ಲೆಡೆ ಉಪಯೋಗಿಸಿ ಕೆಲಸ ಪಡೆಯಬಹುದು. ಕೆಲಸ ಪಡೆಯುವುದಕ್ಕೆ ಇದರಿಂದ ಸಹಾಯ ಆಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
- ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಹೋಮ್ ಪೇಜ್ ನಲ್ಲಿ, ಪಿಎಂ ಕೌಶಲ್ ವಿಕಾಸ್ ಯೋಜನೆ ಎನ್ನುವ ಆಪ್‌ನ ಮೇಲೆ ಕ್ಲಿಕ್ ಮಾಡಬೇಕು
- ಈಗ ಹೊಸ ಪೇಜ್ ಓಪನ್ ಆಗುತ್ತದೆ, ಇದರಲ್ಲಿ ಮೊದಲಿಗೆ ನೀವು ಯೋಜನೆಗೆ ರಿಜಿಸ್ಟರ್ ಮಾಡಬೇಕು
- ಈ ಯೋಜನೆಯಲ್ಲಿ ಹೊಸದಾಗಿ ನೀವು ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
- ಮೊದಲು ನಿಮ್ಮ ಡೀಟೇಲ್ಸ್ ಹಾಕಿ, ಪೋರ್ಟಲ್ ನಲ್ಲಿ ಕೌಶಲ್ ವಿಕಾಸ್ ಯೋಜನೆಗೆ ರಿಜಿಸ್ಟರ್ ಮಾಡಿ, ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಪಡೆಯಿರಿ
- ಬಳಿಕ ಅಪ್ಲಿಕೇಶನ್ ಫಾರ್ಮ್ ಬರುತ್ತದೆ, ಅದನ್ನು ಫಿಲ್ ಮಾಡಿ. ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ, ಬೇಕಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಇದೆಲ್ಲಾ ಆದ ನಂತರ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಿ. ಇಲ್ಲಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ ಆಗುತ್ತದೆ.
ಇತರೆ ವಿಷಯಗಳು:
ಗೃಹಲಕ್ಷ್ಮಿ 11ನೇ ಕಂತಿನ ಹಣ ಈ 28 ಜಿಲ್ಲೆಗಳಿಗೆ ಬಿಡುಗಡೆ!
17ನೇ ಕಂತಿನ ಹಣ ಇನ್ನೂ ಖಾತೆಗೆ ಬಂದಿಲ್ವಾ?
ಯುವನಿಧಿ ಹಣ ಪಡೆಯಲು ಹೊಸ ರೂಲ್ಸ್! ತಪ್ಪದೇ ಈ ಕೆಲಸ ಮಾಡುವಂತೆ ಸೂಚನೆ