rtgh
Headlines

ಯುವನಿಧಿ ಹಣ ಪಡೆಯಲು ಹೊಸ ರೂಲ್ಸ್!‌ ತಪ್ಪದೇ ಈ ಕೆಲಸ ಮಾಡುವಂತೆ ಸೂಚನೆ

Yuvanidhi Scheme
Share

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರವಾದ ಯೋಜನೆಯಾದ ಯುವಜನತೆಯ ಉಜ್ವಲವಾದ ಭವಿಷ್ಯಕ್ಕಾಗಿ ಸರ್ಕಾರದ ಗ್ಯಾರಂಟಿ ಯೋಜನೆಗೆ ಚಾಲನೆಯನ್ನು ನೀಡಲಾಗಿದೆ.

Yuvanidhi Scheme

ಯುವನಿಧಿ ಯೋಜನೆಯಡಿ ಸೇವಾಸಿಂಧು ಪೋರ್ಟಲ್ನಲ್ಲಿ ನೋಂದಾಯಿಸಿರುವ ಕೊಡಗು ಜಿಲ್ಲೆಗೆ ಸಂಬಂಧ ಪಟ್ಟಂತೆ ಅರ್ಹ ಫಲಾನುಭವಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧ ಪಟ್ಟಂತೆ ಮೂಲ ಆಧಾರ್ ಕಾರ್ಡ್ ಹಾಗೂ ಅಂಕಪತ್ರಗಳು ಇತರ ದಾಖಲಾತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯದ ಕಚೇರಿಗೆ, (ರೂಂ ನಂ-22, 2ನೇ ಮಹಡಿ, ಜಿಲ್ಲಾಡಳಿತ ಭವನ ಕಟ್ಟಡ ಕೊಡಗು ಜಿಲ್ಲೆ, ಮಡಿಕೇರಿ) ಇಲ್ಲಿಗೆ ಪರಿಶೀಲನೆಗೆ ಹಾಜರಾಗಬೇಕು.

ಹಾಗೆಯೇ ಯುವನಿಧಿ ಯೋಜನೆಗೆ ಅರ್ಹರಾದ ಎಲ್ಲಾ ಫಲಾನುಭವಿಗಳು ಪ್ರತಿ ತಿಂಗಳು 25 ನೇ ತಾರೀಖಿನ ಒಳಗಾಗಿ ‘ಉನ್ನತ ವ್ಯಾಸಂಗವನ್ನು ಮುಂದುವರೆಸದಿರುವ ಕುರಿತು ಹಾಗೂ ಯಾವುದೇ ಉದ್ಯೋಗವನ್ನು ಹೊಂದಿಲ್ಲದಿರುವ ಕುರಿತು ಸ್ವಯಂ ಘೋಷಣೆಯನ್ನು ನೀಡಬೇಕಾಗಿರುತ್ತದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ರೇಖಾ ಗಣಪತಿಯವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 1800 599 9918 ಗೆ ಕರೆ ಮಾಡುವುದರ ಮೂಲಕ ಅಥವಾ ಜಿಲ್ಲಾ ಉದ್ಯೋಗದ ವಿನಿಮಯ ಕಚೇರಿ ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ದೂ. 8296020826 / 8123312319 ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಇನ್ನು 5 ದಿನ ಭಾರೀ ಮಳೆ! ಈ ಜಿಲ್ಲೆಗಳಿಗೆ IMD ಅಲರ್ಟ್

ಸರ್ಕಾರದಿಂದ ಸಿಗುತ್ತೆ ₹15,000! ಪ್ರತಿಯೊಬ್ಬರು ಪಡೆಯಬಹುದು ಯೋಜನೆಯ ಲಾಭ


Share

Leave a Reply

Your email address will not be published. Required fields are marked *