rtgh
Headlines

ಮಾರ್ಚ್ ತಿಂಗಳ ಎಲ್ಲಾ ಬಗ್ಗೆಯ ಪಿಂಚಣಿ ಹಣ ರಿಲೀಸ್! ನಿಮ್ಮ ಖಾತೆಗೂ ಬಂತಾ ಚೆಕ್‌ ಮಾಡಿ

pension status check
Share

ಹಲೋ ಸ್ನೇಹಿತರೇ, ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯದಿಂದ ಪ್ರತಿ ತಿಂಗಳು ಎಲ್ಲಾ ಬಗ್ಗೆಯ ಪಿಂಚಣಿಯನ್ನು ಪಡೆದುಕೊಳ್ಳಲು ಅರ್ಹ ಫಲಾನುಭವಿಗಳಿಗೆ ಮಾರ್ಚ್-2024 ತಿಂಗಳ ಪಿಂಚಣಿ ಹಣವನ್ನು ವರ್ಗಾವಣೆ ಮಾಡಲಾಗಿದ್ದು, ಯಾರೆಲ್ಲಾ ಪಿಂಚಣಿ ಪಡೆಯುತ್ತಿದ್ದೀರೋ ಅಂಥವರು ಕೂಡಲೇ ನಿಮ್ಮ ಖಾತೆಯನ್ನು ಚೆಕ್‌ ಮಾಡಿಕೊಳ್ಳಿ.

pension status check

ವಿವಿಧ ಯೋಜನೆಯಡಿ ಅಂದರೆ ಅಂಗವಿಕಲರ ಪಿಂಚಣಿ, ವಿಧವಾ ವೇತನ , ಸಂಧ್ಯಾ ಸುರಕ್ಷಾ, ಮೈತ್ರಿ ,ವೃದ್ಧರು, ಅಂಗವಿಕಲರು, ವೃದ್ಧಾಪ್ಯ ವೇತನ ಯೋಜನೆಯಡಿ ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿದ್ದವರು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಈ ತಿಂಗಳ ಹಣ ಜಮಾ ಆಗಿದಿಯಾ ಎಂದು ನಿಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ತಿಳಿಯಿರಿ.

ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಪಿಂಚಣಿ ಯೋಜನೆಗಳ ಅನುಷ್ಥಾನಗಳನ್ನು ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯವು ಎಲ್ಲಾ ಬಗ್ಗೆಯ ಪಿಂಚಣಿ ಯೋಜನೆಯನ್ನು ಅನುಷ್ಥಾನ ಮಾಡುತ್ತದೆ. ಈ ಕೆಳಗೆ ಮೊಬೈಲ್ ನಲ್ಲೇ ಹಳ್ಳಿವಾರು ಪಿಂಚಣಿದಾರರ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಹೇಗೆ ಪಡೆಯಬವುದು?

ಮೊಬೈಲ್ ನಲ್ಲಿ ನಿಮ್ಮ ಹಳ್ಳಿಯಲ್ಲಿ ಪಿಂಚಣಿ ಪಡೆಯಲು ಅರ್ಹರಿರುವ ಪಟ್ಟಿ ತಿಳಿಯಿರಿ.

Step-1: ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ Pension application status ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ಬಳಿಕ ನಿಮ್ಮ ತಾಲ್ಲೂಕು, ಗ್ರಾಮೀಣ, ನಗರ ಪ್ರದೇಶದ ಆಯ್ಕೆಯಲ್ಲಿ ಟಿಕ್ ಮಾಡಿಕೊಳ್ಳಿ.

Step-2: ಈ ಮೇಲಿನ ಹಂತವನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಹೋಬಳಿ & ಗ್ರಾಮ, ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡ ನಂತರ 5 ಅಂಕಿಯ ಕ್ಯಾಪ್ಚರ್ ಕಾಣಿಸುತ್ತದೆ ಅದನ್ನು ಕೆಳಗಿನ “Enter the captcha” ಕಾಲಂ ನಲ್ಲಿ ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿ ಸಾಕು ನಿಮ್ಮ ಹಳ್ಳಿಯ/ಗ್ರಾಮದ ಪಿಂಚಣಿದಾರರ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಿಳಿಯಬಹುದು.

ನಿಮಗೆ ಮಾರ್ಚ್-2024 ತಿಂಗಳ ಪಿಂಚಣಿ ಹಣ ಜಮಾ ಆಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡೋ ವಿಧಾನ:

ಸಾರ್ವಜನಿಕರು ರಾಜ್ಯ ಸರ್ಕಾರದ ಇ-ಅಡಳಿತ ವಿಭಾಗದಿಂದ ಬಿಡುಗಡೆ ಮಾಡಿರುವ DBT Karnataka ಮೊಬೈಲ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಡೌನ್ಲೋಡ್ ಮಾಡಿಕೊಂಡು ಮಾರ್ಚ್ ತಿಂಗಳ ಪಿಂಚಣಿ ಹಣ ಜಮಾ ಆಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ.

Step-1:  ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ DBT Karnataka app ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.

Step-2:  ಬಳಿಕ ಅರ್ಜಿದಾರರ ಆಧಾರ್ ನಂಬರ್ & ಮೊಬೈಲ್ ಸಂಖ್ಯೆಗೆ ಬರುವ OTP ನಂಬರ್ ಹಾಕಿ ಈ ಅಪ್ಲಿಕೇಶನ್ ತೆರೆಯಲು 4 ಅಂಕಿಯ ಪಾಸ್ವರ್ಡ್ ಅನ್ನು ರಚನೆ ಮಾಡಿ.

Step-3:  ಮೇಲಿನ ಹಂತ ಪೂರ್ಣಗೊಂಡ ಬಳಿಕ 4 ಅಂಕಿಯ ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಆಗಿ ಇಲ್ಲಿ ಮುಖಪುಟದಲ್ಲಿ “ಪಾವತಿ ಸ್ಥಿತಿ”  ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮಗೆ ಸರ್ಕಾರದಿಂದ ಯಾವೆಲ್ಲಾ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಹಣ ಜಮಾ ಆಗುತ್ತದೆ ಎನ್ನುವ ವಿವರ ತೋರಿಸುತ್ತದೆ ಇಲ್ಲಿ ಪಿಂಚಣಿ ಯೋಜನೆಯ ಮೇಲೆ ಕ್ಲಿಕ್ ಮಾಡಿ.. 

Step-4:   ಕ್ಲಿಕ್ ಮಾಡಿದ ಬಳಿಕ ನಿಮಗೆ ತಿಂಗಳುವಾರು ಯಾವ ದಿನ ಪಿಂಚಣಿ ಹಣ ಜಮಾ ಆಗಿದೆ? ಎಷ್ಟು ಮೊತ್ತ? ಯಾವ ಬ್ಯಾಂಕ್, UTR ನಂಬರ್ ವಿವರ ತೋರಿಸುತ್ತದೆ.

ವಿಶೇಷ ಮಾಹಿತಿ: ನಿಮಗೆ ಪಿಂಚಣಿ ಬರದಿದ್ದರೆ ತಪ್ಪದೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(NPCI mapping)/ಇ-ಕೆವೈಸಿ ಮಾಡಿಸಿಕೊಳ್ಳುವುದು ಉತ್ತಮ.

ಇ-ಕೆವೈಸಿ/ಆಧಾರ್ ಜೋಡಣೆ ಎಲ್ಲಿ ಮಾಡಿಸಬೇಕು?

ಸದ್ಯ ಅಂಗವಿಕಲರ ಪಿಂಚಣಿ, ವಿಧವಾ ವೇತನ , ಸಂಧ್ಯಾ ಸುರಕ್ಷಾ, ಮೈತ್ರಿ, ವೃದ್ಧರು, ಅಂಗವಿಕಲರು, ವೃದ್ಧಾಪ್ಯ ವೇತನ ಪಡೆಯುತ್ತಿರುವ ಅನೇಕ ಜನರ ತಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಮಾಡಿರುವುದಿಲ್ಲ ಈ ಕಾರಣದಿಂದಾಗಿ ಅನೇಕ ಅರ್ಹ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ(DBT) ಮೂಲಕ ಹಣ ಸಂದಾಯ ಮಾಡಲು ತೊಡಕು ಉಂಟಾಗುತ್ತದೆ ಮುಂದಿನ ತಿಂಗಳಲ್ಲಿ ಪಿಂಚಣಿ ಹಣ ಪಡೆಯಲು ಈ ರೀತಿಯ ಅರ್ಹ ಫಲಾನುಭವಿಗಳು ತಪ್ಪದೇ ನಿಮ್ಮ ಬ್ಯಾಂಕ್ ಖಾತೆಯಿರುವ ಶಾಖೆಗೆ ಭೇಟಿ ನೀಡಿ NPCI ಮ್ಯಾಪಿಂಗ್ ಮಾಡಿಕೊಳ್ಳಬೇಕು ಎಂದು ಇಲಾಖೆಯಿಂದ ಪ್ರಕಟಣೆ ತಿಳಿಸಲಾಗಿದೆ.

ಇತರೆ ವಿಷಯಗಳು

ಕಾರ್ಮಿಕ ಮಂಡಳಿಯಿಂದ ₹10,000 ವಿದ್ಯಾರ್ಥಿವೇತನ.! ಪಡೆಯುವ ಸಂಪೂರ್ಣ ಡೀಟೆಲ್ಸ್

‘ಮಾದರಿ ನೀತಿ ಸಂಹಿತೆ’ ಅಂದ್ರೆ ಏನು? ಇದನ್ನ ಮೀರಿದ್ರೆ ಏನಾಗುತ್ತೆ? ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್


Share

Leave a Reply

Your email address will not be published. Required fields are marked *