rtgh

‘ಸುಳ್ಳು ಸುದ್ದಿ’ಗಳಿಗೆ ಇನ್ಮುಂದೆ ಬೀಳುತ್ತೆ ಬ್ರೇಕ್.!! ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

govt of karnataka has break the fake news
Share

ಹಲೋ ಸ್ನೇಹಿತರೇ, ಸುಳ್ಳು ಸುದ್ದಿ ಹರಡುವುದು, ಫೋಟೊ, ವಿಡಿಯೋ ತಿರುಚಿ ಬಿತ್ತರಿಸುವುದು ಸೇರಿದಂತೆ ವಿವಿಧ ರೀತಿಯ ಆನ್ಲೈನ್ ಪ್ರಕರಣಗಳ ಮೇಲೆ ನಿಗಾ ವಹಿಸಲು ಬಹು ಇಲಾಖೆಗಳ ಸಮನ್ವಯ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

govt of karnataka has break the fake news

CDM ಸೈಬರ್ ವಿಭಾಗದ (ಸಿ ಆ್ಯಂಡ್ ಎನ್) ಎಡಿಜಿಪಿ, ಗೃಹ ಇಲಾಖೆ ಮತ್ತು ಐಟಿಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ ಹಾಗೂ ಮಾಹಿತಿ ಇಲಾಖೆಯ ಕಾರ್ಯದರ್ಶಿ, ಸರ್ಕಾರದ ನಾಮನಿರ್ದೇಶನ ಮಾಡಿದ ಕಾನೂನು ಸಲಹೆಗಾರ, ಐಟಿಬಿಟಿ ಇಲಾಖೆ ಒದಗಿಸುವ ಸೇವಾದಾರರು, ಸರ್ಕಾರದ ನಾಮನಿರ್ದೇಶನ ಮಾಡುವ ತಲಾ ಒಬ್ಬರು ಸಾರ್ವಜನಿಕ ಹಾಗೂ ತಾಂತ್ರಿಕ ವಲಯದವರು ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಇದನ್ನು ಓದಿ: ಪ್ರತಿ ತಿಂಗಳು ಸಿಗಲಿದೆ ಉಚಿತ ₹5,000! ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ

ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಸುಳ್ಳುಸುದ್ದಿಗಳು, ಪ್ರಚೋದನಾಕಾರಿ ಹೇಳಿಕೆ ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿರುವುದು ಕಂಡುಬಂದರೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹಸಚಿವ ಜಿ.ಪರಮೇಶ್ವರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸಾಮಾಜಿಕ ಜಾಲತಾಣಗಳ ನಿಗಾ ಘಟಕಕ್ಕೆ ಭೇಟಿ ನೀಡಿದ ಅವರು, ಆಕ್ಷೇಪಾರ್ಹ ಮಾಹಿತಿ, ಸುಳ್ಳುಸುದ್ದಿಗಳು ಬಂದಾಗ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಸೂಕ್ತ ತಾಂತ್ರಿಕ ತರಬೇತಿ ಹೊಂದಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲು ಸೂಚನೆ ನೀಡಿದರು.

ಸರಳ ವಿವಾಹಕ್ಕೆ 50,000 ಪ್ರೋತ್ಸಾಹ ಧನ.! ಮದುವೆ ಆಗುವವರಿಗೆ ರಾಜ್ಯ ಸರ್ಕಾರದ ಬಂಪರ್‌ ಕೊಡುಗೆ

ಸ್ವಯಂ ಉದ್ಯೋಗಕ್ಕೆ ಎಲ್ಲಾ ವರ್ಗದವರಿಗೂ ಸಿಗುತ್ತೆ 10 ಲಕ್ಷ.! ಪ್ರಧಾನ ಮಂತ್ರಿ ಮುದ್ರಾ ಯೋಜನೆ


Share

Leave a Reply

Your email address will not be published. Required fields are marked *