rtgh

ರಾಷ್ಟ್ರೀಯ ಜಾನುವಾರು ಮಿಷನ್: ಕೋಳಿ,ಕುರಿ ಹಂದಿ ಘಟಕ ಸ್ಥಾಪನೆಗೆ ಶೇ 50% ಸಹಾಯಧನ.! ಅರ್ಹರು ಅಪ್ಲೇ ಮಾಡಿ

national livestock mission scheme
Share

ಹಲೋ ಸ್ನೇಹಿತರೇ, ನೀವು ಕೋಳಿ,ಕುರಿ,ಮೇಕೆ ಮತ್ತು ಹಂದಿಯ ರಸಮೇವು ಘಟಕ ಮಾಡುವ ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ (NLM EDP) ಈ ಯೋಜನೆಯಡಿ ಶೇ 50% ಸಬ್ಸಿಡಿಯನ್ನು ಪಡೆಯಬಹುದಾಗಿದೆ. ಹೇಗೆ ಪಡೆಯುವುದು ಎಂಬುದರ ಬಗ್ಗೆ ನಮ್ಮ ಲೇಖನದಲ್ಲಿ ತಿಳಿಯಿರಿ.

national livestock mission scheme

ಈ ಯೋಜನೆಯಡಿ ಸಹಾಯಧನ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕಾ? ಅರ್ಜಿ ಸಲ್ಲಿಕೆಯ ವಿಧಾನ ಹೇಗೆ? ಯಾವೆಲ್ಲಾ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಎಲ್ಲವನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ಈ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ, ಮೇಕೆ ಹಾಗೂ ಹಂದಿ ಸಾಕಾಣಿಕೆ & ರಸಮೇವು ಉತ್ಪಾದನೆ ಘಟಕವನ್ನು ಪ್ರಾರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆ ಅಡಿಯಲ್ಲಿ ಆರ್ಥಿಕ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಪಶುಸಂಗೋಪನೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

NLM Scheme-2024: ಸಹಾಯಧನದ ವಿವರ

1) ಗ್ರಾಮೀಣ ಕೋಳಿ industry(1000 ದೇಶಿ ಮಾತೃಕೋಳಿ ಘಟಕ, ಹ್ಯಾಚರಿ ಘಟಕ,ಮರಿಗಳ ಸಾಕಾಣಿಕೆ ಘಟಕ)-

ಯೋಜನೆಯ ಗರಿಷ್ಥ ವೆಚ್ಚ:- 50 ಲಕ್ಷ, ಸಹಾಯಧನ:- ಶೇ 50% ರಷ್ಟು 1 ಘಟಕಕ್ಕೆ ಗರಿಷ್ಟ ₹ 25 ಲಕ್ಷ.

2) ಕುರಿ-ಮೇಕೆ ತಳಿ ಸಂವರ್ಧನಾ ಘಟಕ

  • 500 ಘಟಕಕ್ಕೆ ಯೋಜನೆಯ ವೆಚ್ಚ 1 ಕೋಟಿ – 50% ಸರ್ಕಾರದ ಸಬ್ಸಿಡಿ (50 ಲಕ್ಷ ಸಿಗಲಿದೆ)
  • 400 ಘಟಕಕ್ಕೆ ಯೋಜನೆಯ ವೆಚ್ಚ  80 ಲಕ್ಷ – 50% ಸರ್ಕಾರದ ಸಬ್ಸಿಡಿ (40 ಲಕ್ಷ)
  • 300 ಘಟಕಕ್ಕೆ ಯೋಜನೆಯ ವೆಚ್ಚ 60 ಲಕ್ಷ – 50% ಸರ್ಕಾರದ ಸಬ್ಸಿಡಿ (30 ಲಕ್ಷ)
  • 200 ಘಟಕಕ್ಕೆ ಯೋಜನೆಯ ವೆಚ್ಚ 40 ಲಕ್ಷ – 50% ಸರ್ಕಾರದ ಸಬ್ಸಿಡಿ (20 ಲಕ್ಷ)
  • 100 ಘಟಕಕ್ಕೆ ಯೋಜನೆಯ ವೆಚ್ಚ 20 ಲಕ್ಷ – 50% ಸರ್ಕಾರದ ಸಬ್ಸಿಡಿ (10 ಲಕ್ಷ)

3) ಹಂದಿ ತಳಿ ಸಂವರ್ಧನಾ ಘಟಕ:

100+10 ಘಟಕಕ್ಕೆ ಯೋಜನೆಯ ವೆಚ್ಚ 60 ಲಕ್ಷ -50% ಸರ್ಕಾರದ ಸಬ್ಸಿಡಿ ( 30 ಲಕ್ಷ).
50+5   ಗಘಟಕಕ್ಕೆ ಯೋಜನೆಯ ವೆಚ್ಚ 30 ಲಕ್ಷ-50% ಸರ್ಕಾರದ ಸಬ್ಸಿಡಿ ( ರೂ 15 ಲಕ್ಷ).

4) ರಸಮೇವು ಉತ್ಪಾದನಾ ಘಟಕಗಳು, ಮೇವು ಬ್ಲಾಕ್ ತಯಾರಿಕಾ ಘಟಕಗಳು/ TMR ಪ್ಲಾಂಟ್ ಸ್ಥಾಪನೆ ಘಟಕ(ವಾರ್ಷಿಕ 2000-2500 ಮೆಟ್ರಿಕ್ ಟನ್ ನಷ್ಟು ಉತ್ಪಾದನೆ)

ಯೋಜನೆ ವೆಚ್ಚ:- 1 ಕೋಟಿ,   ಶೇ 50% ಸಹಾಯಧನ

ಅಗತ್ಯ ದಾಖಲೆಗಳು

  • ವಿಸ್ತ್ರತ ಯೋಜನಾ ವರದಿ.
  • ಭೂಮಿ ದಾಖಲೆ ಪಹಣಿ ಅಥವಾ RTC.
  • ಭೂಮಿ ಇಲ್ಲದವರು ಬಾಡಿಗೆ /ಗುತ್ತಿಗೆಗೆ ಭೂಮಿ ಪಡೆದು ಕರಾರು ಪತ್ರ .
  • ಆಧಾರ್ ಸಂಖ್ಯೆ
  • ಪ್ಯಾನ್ ಸಂಖ್ಯೆ
  • ಯೋಜನೆಯ ಜಿಪಿಎಸ್‌ ಫೋಟೋ
  • ಕಳೆದ 6 ತಿಂಗಳ ಬ್ಯಾಂಕ್ ವಿವರ.
  • ತರಬೇತಿಯ ಪ್ರಮಾಣ ಪತ್ರ / ಅನುಭವ ಹೊಂದಿರುವ ಪ್ರಮಾಣ ಪತ್ರಗಳು.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ಅರ್ಜಿದಾರರು ನೇರವಾಗಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇತರೆ ವಿಷಯಗಳು

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯಲ್ಲಿ ನೇಮಕಾತಿ.! ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.! ಆಸಕ್ತರು ಅಪ್ಲೇ ಮಾಡಿ

ಡಿಎ ಹೆಚ್ಚಳ ಘೋಷಣೆ : ಹೋಳಿಗೂ ಮುನ್ನವೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ


Share

Leave a Reply

Your email address will not be published. Required fields are marked *