ಹಲೋ ಸ್ನೇಹಿತರೇ, ಮಂಗಳವಾರ ಇಲ್ಲಿ ಕ್ಯಾಬ್ ಸೇವೆಗೆ ಚಾಲನೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, “ನಮ್ಮ ಯಾತ್ರಿ ಕರ್ನಾಟಕದ ಸ್ವದೇಶಿ ಆ್ಯಪ್ ಆಗಿದೆ. ಈ ಆ್ಯಪ್‌ನ ಸೌಲಭ್ಯ ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಬೆಂಗಳೂರು: ಈಗ ನಮ್ಮ ಯಾತ್ರಿ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಬಹುದು. 25,000 ಕ್ಯಾಬಿಗಳೊಂದಿಗೆ, ಮುಂದಿನ 6 ತಿಂಗಳಲ್ಲಿ 1 ಲಕ್ಷ ಚಾಲಕರನ್ನು ಸೇರಿಸುವ ಗುರಿಯನ್ನು ಅಪ್ಲಿಕೇಶನ್ ಹೊಂದಿದೆ. ಓಲಾ, ಉಬರ್ & ರಾಪಿಡೋದಂತಹ ಅಗ್ರಿಗೇಟರ್ ಕ್ಷೇತ್ರದ ದೈತ್ಯರಿಗೆ ಸವಾಲು ಹಾಕಲು ಆಟೋ ಜೊತೆಗೆ ಕ್ಯಾಬ್ ಸೇವೆಗಳನ್ನು ಪ್ರಾರಂಭಿಸಲು ನಿರ್ಧರಿಸಿರುವ ನಮ್ಮ ಯಾತ್ರಿ, ಈಗ ಕರ್ನಾಟಕದ 6 ನಗರಗಳಲ್ಲಿ ತನ್ನ ಆಟೋ ಸೇವೆಯನ್ನು ವಿಸ್ತರಿಸಿದೆ.
” ಈ ವರ್ಷಾಂತ್ಯಕ್ಕೆ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಉಡುಪಿ, ಶಿವಮೊಗ್ಗ, ಬೆಳಗಾವಿ & ಕಲಬುರಗಿಯಲ್ಲಿ ನಮ್ಮ ಯಾತ್ರಿ ಆಟೋರಿಕ್ಷಾ ಸೇವೆಗೆ ಚಾಲನೆಯನ್ನು ನೀಡಲು ಸಂಸ್ಥೆ ಆಯೋಜಿಸಿದೆ ” ಎಂದು ನಮ್ಮ ಯಾತ್ರಿಯ ಮಾತೃ ಸಂಸ್ಥೆ ಫಿನ್‌ಟೆಕ್ ಕಂಪನಿಯ ಅಧಿಕಾರಿ ಶಾನ್ ಎಂ.ಎಸ್ ರವರು ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.
ರಾಜ್ಯದ ಕೆಲವು ನಗರಗಳಲ್ಲಿ ಮೀಟರ್ ಇಲ್ಲದೇ ಆಟೋಗಳು ಓಡಾಡುತ್ತಿವೆ, ನಮ್ಮ ಯಾತ್ರಿ ವಿಸ್ತರಣೆಯು ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಜನತೆಗೆ ಸಹಾಯವಾಗಲಿದೆ.
ಝೀರೋ ಕಮಿಷನ್ ಆಧಾರದ ಮೇಲೆ ಕಾರ್ಯ ಮಾಡುತ್ತಿದ್ದು ನಮ್ಮ ಯಾತ್ರಿ, ನವೆಂಬರ್ 2022 ರಲ್ಲಿ ಬೆಂಗಳೂರಿನಲ್ಲಿ ಆಟೋ-ರಿಕ್ಷಾ ಸೇವೆಯನ್ನು ಪ್ರಾರಂಭಿಸಿತ್ತು. ಬೆಂಗಳೂರಿನಲ್ಲಿ 1.1 ಲಕ್ಷ ರೈಡ್, & ಶೇ. 25ರಷ್ಟು ಮಾರುಕಟ್ಟೆ ಶೇರ್ ಹೊಂದಿದೆ ಎಂದು ಕಂಪೆನಿ ತಿಳಿಸಿದೆ.
ಮೈಸೂರು & ತುಮಕೂರಿನಲ್ಲಿ ನಮ್ಮ ಯಾತ್ರಿ ಸೇವೆಯನ್ನು ವಿಸ್ತರಿಸಿಕೊಂಡಿದೆ. ಹೈದರಾಬಾದ್, ಚೆನ್ನೈ, ದೆಹಲಿ, ಕೋಲ್ಕತ್ತಾದಲ್ಲಿಯೂ ಸರ್ವೀಸ್ ಪ್ರಾರಂಭಿಸಿದ್ದರೂ, ಸಾಕಷ್ಟು ಯಶಸ್ಸನ್ನು ಪಡೆಯಲು ಆ ನಗರದಲ್ಲಿ ಸಾಧ್ಯವಾಗಿಲ್ಲ.
ಇತರೆ ವಿಷಯಗಳು
ಏಪ್ರಿಲ್ ನಿಂದ ಈ ಕಂಪನಿಯ ಉದ್ಯೋಗಿಗಳ ವೇತನದಲ್ಲಿ ಬಂಪರ್ ಹೆಚ್ಚಳ
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್! ಯಾರಿಗೆಲ್ಲ ಸಿಗುತ್ತೆ? ಅರ್ಜಿ ಹಾಕೋದು ಹೇಗೆ?