ಬೆಂಗಳೂರು: 1ನೇ ತರಗತಿ ಪ್ರವೇಶಕ್ಕೆ ಇದ್ದಂತಹ ಮಕ್ಕಳ ಗರಿಷ್ಠ ವಯೋಮಿತಿಯನ್ನು ಎಂಟು ವರ್ಷಕ್ಕೆ ಹೆಚ್ಚಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶವನ್ನು ಹೊರಡಿಸಿದೆ.
2025 -26 ನೇ ಸಾಲಿನಿಂದ ಈ ನಿಯಮವು ಅನ್ವಯವಾಗುತ್ತದೆ. ಮುಂದಿನ ಶೈಕ್ಷಣಿಕದ ವರ್ಷದಿಂದ ಒಂದನೇ ತರಗತಿಗೆ ಪ್ರವೇಶವನ್ನು ಪಡೆಯುವ ಮಕ್ಕಳ ಕನಿಷ್ಠ ವಯೋಮಿತಿ 6 ವರ್ಷಕ್ಕೆ ಕಡ್ಡಾಯಗೊಳಿಸಿದ ಕಾರಣ ಗರಿಷ್ಠ ವಯೋಮಿತಿಯಲ್ಲಿಯೂ ಸಹ ಹೆಚ್ಚಳವನ್ನು ಮಾಡಲಾಗಿದೆ.
LKG ಪ್ರವೇಶಕ್ಕೆ 4 ವರ್ಷ, UKG 5 ವರ್ಷಗಳ ಕನಿಷ್ಠ ವಯೋಮಿತಿಯನ್ನು ಈಗಾಗಲೇ ನಿಗದಿಯನ್ನು ಮಾಡಲಾಗಿದೆ. ಗರಿಷ್ಠ ವಯೋಮಿತಿಯನ್ನು ಕ್ರಮವಾಗಿ 6 ಹಾಗೂ 7 ವರ್ಷಕ್ಕೆ ಹೆಚ್ಚಳವನ್ನು ಮಾಡಲಾಗಿದೆ. ಕಡ್ಡಾಯ ಶಿಕ್ಷಣದ ಕಾಯ್ದೆಗೆ ಅನುಗುಣವಾಗಿ ಮಕ್ಕಳ ದಾಖಲಾತಿಯ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಗಳನ್ನು ಹೆಚ್ಚಳ ಮಾಡಿರುವುದರಿಂದ ಶಾಲೆ ತೊರೆಯುವಂತಹ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಲಾಗಿದೆ.
ಇತರೆ ವಿಷಯಗಳು:
ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ! ವೇತನದ ಅರ್ಧದಷ್ಟು ʻಪಿಂಚಣಿʼ ಸಿಗಲಿದೆ
ಮತ್ತೆ ರಾಜ್ಯದಲ್ಲಿ ಭಾರೀ ಮಳೆ ಎಚ್ಚರಿಕೆ!