rtgh
Headlines

ಗರ್ಭಿಣಿ ಮಹಿಳೆಯರಿಗೆ ಗುಡ್‌ ನ್ಯೂಸ್‌! ಈ ಯೋಜನೆಯಡಿ ಸಿಗಲಿದೆ ಆರ್ಥಿಕ ಸಹಾಯಧನ

matru vandana yojana
Share

ಹಲೋ ಸ್ನೇಹಿತರೇ, ನೋಂದಾಯಿತ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಮಂಡಳಿಯು ಸಹಾಯಧನವನ್ನು ನೀಡುತ್ತದೆ. ಮಗುವಿನ ಜನನ ದಿನಾಂಕದಿಂದ ಆರು ತಿಂಗಳ ಒಳಗೆ ಅರ್ಜಿಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು. ಒಂದು ವೇಳೆ ಈಗಾಗಲೇ ನೋಂದಾಯಿತ ಕಾರ್ಮಿಕ ಮಹಿಳೆಗೆ ಎರಡು ಮಕ್ಕಳಿದ್ದರೆ, ಅವರು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗುವುದಿಲ್ಲ.

matru vandana yojana

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಪೌಷ್ಟಿಕ ಮಟ್ಟವನ್ನು ಸುಧಾರಿಸಲು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮೊದಲನೇ ಮಗುವಿಗೆ ಎರಡು ಕಂತುಗಳಲ್ಲಿ ಒಟ್ಟು ರೂ. 5000 ನೀಡಲಾಗುತ್ತದೆ. ಎರಡನೇ ಮಗುವಿಗೆ, ಹೆಣ್ಣು ಮಗುವಾಗಿದ್ದಲ್ಲಿ, ರೂ. 6000 ಗಳನ್ನು ಒಂದೇ ಕಂತಿನಲ್ಲಿ ನೀಡಲಾಗುತ್ತಿದ್ದು, 2022 ರ ಏಪ್ರಿಲ್ 1 ರ ನಂತರ ಎರಡನೇ ಬಾರಿಗೆ ಹೆರಿಗೆಯಾಗಿ ಹೆಣ್ಣು ಮಗು ಹುಟ್ಟಿದ ತಾಯಂದಿರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಆದ್ದರಿಂದ ಅರ್ಹ ಫಲಾನುಭವಿಗಳು ಅಂಗನವಾಡಿ ಕೇಂದ್ರ ಅಥವಾ ಯೋಜನೆಯ ಜಾಲತಾಣ wcd.nic.in/schemes/pradhan-mantri-matru-vandana-yojana ದಲ್ಲಿ ಲಭ್ಯವಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

ಇದನ್ನೂ ಸಹ ಓದಿ : ಇನ್ನು 3 ದಿನ 8 ಜಿಲ್ಲೆಗಳಲ್ಲಿ ಭಾರೀ ಮಳೆ! IMD ರೆಡ್ ಅಲರ್ಟ್

ಈ ಯೋಜನೆಯಡಿ, ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ನವಜಾತ ಶಿಶುಗಳ ಆರೈಕೆ ಮತ್ತು ರೋಗಗಳ ತಡೆಗಟ್ಟುವಿಕೆಗಾಗಿ 5,000 ರೂ. ಆರ್ಥಿಕ ಸಹಾಯಧನ ನೀಡಲಿದೆ.

ಮಹಿಳೆಯರಿಗಾಗಿ ಈ ಯೋಜನೆಯನ್ನು ತರಲಾಗಿದೆ. ಈ ಎಲ್ಲಾ ಹಣ ನೇರವಾಗಿ ಮಹಿಳೆಯರ ಖಾತೆಗೆ ಹೋಗುತ್ತದೆ. ಒಟ್ಟು 5,000 ರೂ.ಗಳನ್ನು ಕಂತುಗಳಲ್ಲಿ ನೀಡಲಾಗುವುದು. ಮೊದಲ ಕಂತು 1,000 ರೂ., ಎರಡನೇ ಕಂತು 2,000 ರೂ., ಮೂರನೇ ಕಂತು 2,000 ರೂ. ಮೊದಲ ಹೆರಿಗೆಯಲ್ಲಿ ಹೆಣ್ಣು ಅಥವಾ ಗಂಡು ಮಗು ಜನಿಸಿದರೆ ಮೂರು ಹಂತಗಳಲ್ಲಿ 1,000 ರೂ., ಆರು ತಿಂಗಳ ನಂತರ 2,000 ರೂ., ಹೆರಿಗೆಯ 14 ವಾರಗಳಲ್ಲಿ 2,000 ರೂ.

ಇತ್ತೀಚೆಗೆ ಗರ್ಭಿಣಿಯಾದ ಮಹಿಳೆಯರಿಗೆ ಹೆರಿಗೆಯ ನಂತರ 14 ವಾರಗಳವರೆಗೆ 3,000 ಮತ್ತು 2,000 ರೂ.ಗಳನ್ನು ಎರಡು ಕಂತುಗಳಲ್ಲಿ ನೀಡಲಾಗುವುದು. ಎರಡನೇ ಹೆರಿಗೆಯಲ್ಲಿ ಮಗು ಜನಿಸಿದರೆ ತಾಯಿಗೆ 6,000 ರೂ. ಈ ಯೋಜನೆಯಡಿ ಗರ್ಭಿಣಿಯರು ಕೇಂದ್ರದಿಂದ 11,000 ರೂ.ವರೆಗೆ ಪಡೆಯಬಹುದು. ಪಿಎಂಎಂವಿವೈ wcd.nic.in/schemes/pradhan-mantri-matru-vandana-yojana ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.

ಇತರೆ ವಿಷಯಗಳು:

18 ಲಕ್ಷ ಮೊಬೈಲ್ ಸಂಖ್ಯೆಗಳು ರದ್ದು!! ಸರ್ಕಾರದ ಖಡಕ್‌ ತೀರ್ಮಾನ

ಮೇ 21 ರಂದು ಪೆಟ್ರೋಲ್-ಡೀಸೆಲ್ ಹೊಸ ಬೆಲೆ ಘೋಷಣೆ!

ಇಂದು ಮಧ್ಯಾಹ್ನ 3 ಗಂಟೆಗೆ ʻದ್ವಿತೀಯ ಪಿಯುಸಿ-2 ಪರೀಕ್ಷೆʼ ರಿಸಲ್ಟ್‌: ಈ ರೀತಿ ಚೆಕ್‌ ಮಾಡಿ


Share

Leave a Reply

Your email address will not be published. Required fields are marked *