ಹಲೋ ಸ್ನೇಹಿತರೇ, ಲೋಕಸಭೆ ಎಲೆಕ್ಷನ್ ಭರಾಟೆ ಇನ್ನು ಹೆಚ್ಚಾಗಲಿದೆ. ಈಗಾಗಲೇ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಪ್ರಯಾಣ ಮಾಡುವವರು ತಮ್ಮ ತಮ್ಮ ಲಗೇಜ್‌ನಲ್ಲಿ ಕೆಲವೊಂದು ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ. ಈ ಮೂಲಕ ಪ್ರಯಾಣಿಕರಿಗೆ ರಾಜ್ಯಸಾರಿಗೆ ಬಸ್‌ಗಳಲ್ಲಿ ಲಗೇಜ್ ಸಾಗಿಸಲು ಕೆಲವೊಂದು ಕಟ್ಟಪ್ಪಣೆಗಳನ್ನು ಹೊರಡಿಸಲಾಗಿದೆ.
ಸೂಕ್ತ ದಾಖಲೆ ಮತ್ತು ನೀತಿ ಸಂಹಿತೆಗೆ ಧಕ್ಕೆ ಬರುವ ಯಾವುದೇ ವಸ್ತುಗಳ ಸಾಗಾಟವನ್ನು ಮಾಡುವಂತಿಲ್ಲ. ಈ ಕುರಿತು ಚಾಲಕ ಮತ್ತು ನಿರ್ವಾಹಕರಿಗೆ ನಿಗಮದ ಭದ್ರತಾ ಹಾಗೂ ಜಾಗೃತ ವಿಭಾಗದ ಹಿರಿಯ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.
ಯಾವುದೇ ದಾಖಲೆ ಇಲ್ಲದೆ ಬೆಲೆಬಾಳುವ ವಸ್ತುಗಳನ್ನು ಬಸ್‌ನಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗೆ ಸಂಬಂಧಪಟ್ಟ ಕರಪತ್ರಗಳು, ಬ್ಯಾನರ್ ಇವೆಲ್ಲವನ್ನು ಸಾಗಣೆ ಮಾಡುತ್ತಿದ್ದಲ್ಲಿ ಸಂಬಂಧಪಟ್ಟ ದಾಖಲಾತಿಯನ್ನು ಸಲ್ಲಿಸಬೇಕು.
SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಬಸ್ ಪ್ರಯಾಣಕ್ಕೆ ಅವಕಾಶ!
ರಾಜಕೀಯದ ಪ್ರಚಾರಕ್ಕೆಂದು ಬಳಸುವ ವಸ್ತುಗಳನ್ನು ಬಸ್ಸಿನಲ್ಲಿ ಪ್ರದರ್ಶನ ಮಾಡುವಂತಿಲ್ಲ. ಪ್ರಯಾಣಿಕರೊಂದಿಗೆ ಹಂಚುವಂತಿಲ್ಲ.
ಲಗೇಜ್‌ಗಳ ಪರಿಶೀಲನೆ ಅಗತ್ಯ. ಹಣ, ಚಿನ್ನ, ಬೆಳ್ಳಿ ಇತ್ಯಾದಿ ಸಾಗಿಸುವಂತಿಲ್ಲ. ನಿಷೇಧಿತ ವಸ್ತುಗಳನ್ನು ಕೂಡಾ ಸಾಗಿಸುವಂತಿಲ್ಲ. ಇವೆಲ್ಲದರ ಹೊರತಾಗಿ ಪ್ರಯಾಣಿಕರ ಲಗೇಜ್‌ನಲ್ಲಿ ಅನುಮಾನಾಸ್ಪದವಾಗಿ ಏನಾದರೂ ವಸ್ತುಗಳು ಕಂಡು ಬಂದರೆ ಚುನಾವಣಾ ನೀತಿ ಸಂಹಿತೆ ಸಂಬಂಧ ಸಿಬ್ಬಂದಿ ಪರಿಶೀಲನೆ ಮಾಡುವ ಅಧಿಕಾರ ಇದೆ. ಪ್ರಯಾಣಿಕರು ತಕರಾರು ಮಾಡಿದರೆ ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಬೇಕೆಂಬ ಸೂಚನೆಯನ್ನು ಈಗಾಗಲೇ ನೀಡಲಾಗಿದೆ.
ಇತರೆ ವಿಷಯಗಳು:
ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನ 2024! ಅರ್ಜಿ ಹಾಕಿ 1 ಲಕ್ಷದ ವರೆಗೆ ಸ್ಕಾಲರ್ಶಿಪ್ ಪಡೆಯಿರಿ
ಹಿರಿಯ ನಾಗರಿಕರಿಗೆ ಇಲ್ಲಿದೆ ಶುಭ ಸುದ್ದಿ!! ಅಪ್ಲೇ ಮಾಡಿದವರಿಗೆ ಲಾಭ