rtgh
Headlines

ಗಂಡ ಹೆಂಡತಿ ಇಬ್ಬರಿಗೂ ಪ್ರತಿ ವರ್ಷ ₹60,000 ಪಿಂಚಣಿ.! ಈ ಯೋಜನೆ ಅಪ್ಲೇ ಮಾಡಿದ್ರೆ ಮಾತ್ರ

lic pension scheme
Share

ಹಲೋ ಸ್ನೇಹಿತರೇ, ನಿವೃತ್ತಿ ಜೀವನವನ್ನ ಅರಮದಾಯಕವಾಗಿ ಕಳೆಯಬೇಕು ಎಂಬ ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ನಿವೃತ್ತಿ ಜೀವನಕ್ಕೆ ಕೆಲಸ ಮಾಡುವ ಸಮಯದಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುತ್ತಾರೆ. ಈಗ ನಿವೃತ್ತಿ ಜೀವನದಲ್ಲಿ ವರುಷಕ್ಕೆ 60 ಸಾವಿರ ರೂ. ಪಡೆದುಕೊಳ್ಳಬಹುದು ಹೇಗೆ ಏನು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

lic pension scheme

Contents

ಏನಿದು LIC ಪಿಂಚಣಿ ಯೋಜನೆ?

ಈಗಾಗಲೇ ಹಲವು ಸ್ಕೀಮ್ ಗಳ ಮೂಲಕ ಜನರಿಗೆ ಹೂಡಿಕೆ ಮಾಡಲು ಅವಕಾಶ ನೀಡಿರುವ ಎಲ್ಐಸಿ ಈಗ ಹೊಸದಾಗಿ ಪಿಂಚಣಿ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ನಿನ್ನ ಜೀವನದುದ್ದಕ್ಕೂ ಪ್ರತಿ ವರ್ಷ 60,000 ರೂ. ಪಡೆಯಲು ಸಾಧ್ಯವಿದೆ. LIC ಪಿಂಚಣಿ ಯೋಜನೆಯಲ್ಲಿ ಹೂಡಿಕೆಗೆ ಎರಡು ಆಯ್ಕೆಗಳು ಇವೆ. ನೀವು ನಿಮ್ಮ ಜೀವಿತ ಅವಧಿಗೆ ಪಿಂಚಣಿ ಯೋಜನೆ ಪಡೆಯಬಹುದು / ನಿಮ್ಮ & ನಿಮ್ಮ ಸಂಗಾತಿಯ ಜಂಟಿ ಖಾತೆಯಲ್ಲಿ ಈ ಯೋಜನೆ ಪಡೆಯಬಹುದು.

ಮೊದಲನೆಯ ಆಯ್ಕೆಯಲ್ಲಿ ನೀವು ನಿಮ್ಮ ಜೀವಿತ ಅವಧಿಯ ವರೆಗೆ ಪಿಂಚಣಿ ಪಡೆಯಲು ಬಯಸಿದರೆ ನಿಮ್ಮ ಜೀವಿತ ಅವಧಿಯ ವರೆಗೆ ನಿಮಗೆ ಪಿಂಚಣಿ ಸಿಗುತ್ತದೆ. ನಂತರ ಉಳಿದ ಹಣ ನೀವು ಯಾರ ಹೆಸರಿಗೆ ನಾಮಿನಿ ಮಾಡಿದ್ದಿರೋ ಅವರಿಗೆ ಸೇರುತ್ತದೆ. ಎರಡನೇ ಆಯ್ಕೆಯಲ್ಲಿ ನೀವು ನಿಮ್ಮ ಸಂಗಾತಿಯ ಜೊತೆಗೆ ಪಿಂಚಣಿ ಯೋಜನೆ ಆರಂಭಿಸಿದರೆ ನಮ್ಮಿಬ್ಬರಲ್ಲಿ ಯಾರು ಜೀವಂತ ವಾಗಿ ಇರುತ್ತಾರೋ ಅವರಿಗೆ ಹಣ ಸಿಗುತ್ತದೆ. ಮತ್ತೆ ಈ ಹಣ ಯಾವುದೇ ನಾಮಿನಿಗೆ ಸಿಗುವುದಿಲ್ಲ.

ಹೂಡಿಕೆ ಮಾಡಲು ಇರುವ ನಿಯಮ ಏನು?: 

ಎಲ್ಐಸಿ ಪಿಂಚಣಿ ಯೋಜನೆ ಹೂಡಿಕೆ ಮಾಡಲು ಕನಿಷ್ಠ ವಯಸ್ಸಿನ ಮಿತಿ 40 ವರ್ಷ ಹಾಗೂ ಗರಿಷ್ಠ 80 ವರ್ಷ ವಯಸ್ಸು ಆಗಿರಬೇಕು ಎಂಬ ನಿಯಮ ಇದೆ.

ಪಿಂಚಣಿ ಪಡೆಯುವ ಆಯ್ಕೆಗಳು ಯಾವುವು?: 

ನೀವು ಈ ಪಿಂಚಣಿ ಯೋಜನೆಯನ್ನು ವಾರ್ಷಿಕವಾಗಿ ಅಥವಾ ಅರ್ಧವಾರ್ಷಿಕ ಅಥವಾ ತಿಂಗಳಿಗೆ / 3 ತಿಂಗಳಿಗೆ ಒಮ್ಮೆ ಪಡೆಯುವ ಆಯ್ಕೆಗಳು ಇರುತ್ತವೆ. ಹೂಡಿಕೆ ಮಾಡುವಾಗ ನೀವು ನಿಮ್ಮ ಇಷ್ಟದ ಪಿಂಚಣಿ ಆಯ್ಕೆ ಮಾಡಬಹುದಾಗಿದೆ.

60,000 ಪಿಂಚಣಿ ಪಡೆಯಲು ಎಷ್ಟು ಹಣವನ್ನು ಹೂಡಿಕೆ ಮಾಡಬೇಕು?

ನೀವು ವಾರ್ಷಿಕವಾಗಿ 60,000 ಪಿಂಚಣಿ ಪಡೆಯಬೇಕು ಎಂದರೆ ಒಮ್ಮೆಲೇ ನೀವು 10 ಲಕ್ಷ ರೂ. ಹೂಡಿಕೆ ಮಾಡಬೇಕು. ನಂತರ ವಾರ್ಷಿಕವಾಗಿ ಪಿಂಚಣಿ ಬರುವಂತೆ ಆಯ್ಕೆ ಮಾಡಿದರೆ ವರ್ಷಕ್ಕೆ ಒಮ್ಮೆ ನಿಮಗೆ ಕೆಲವು ಟ್ಯಾಕ್ಸ ಹಣಗಳು ಕಡಿತವಾಗಿ ನಿಮಗೆ 58,950 ರೂ. ಸಿಗುತ್ತದೆ. ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಹೂಡಿಕೆ ಮಾಡುವ ವಿಧಾನ :-

LIC ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂದರೆ ನೀವು ನಿಮ್ಮ ಹತ್ತಿರದ ಏಜೆಂಟ್ ಸಂಪರ್ಕ ಮಾಡಬಹುದು. ಅವರು ನಿಮಗೆ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ನೀಡುತ್ತಾರೆ ಹಾಗೂ ನಿನಗೆ ಇನ್ವೆಸ್ಟ್ಮೆಂಟ್ ಮಾಡಲು ಸಹಾಯ ಮಾಡುತ್ತಾರೆ. ಆನ್ಲೈನ್ ಮೂಲಕ ಏಜೆಂಟ್ ಇಲ್ಲದೆ ಹೂಡಿಕೆ ಮಾಡಬೇಕು ಎಂದಾದರೆ ಎಲ್ಐಸಿ ಅಧಿಕೃತ ವೆಬ್ಸೈಟ್ www.licindia.in ಭೇಟಿ ನೀಡಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಇತರೆ ವಿಷಯಗಳು

ಪದವಿ, ಪಿಜಿ ಓದುತ್ತಿರುವವರಿಗೆ ₹1 ಲಕ್ಷ: ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಲು 2 ದಿನ ಬಾಕಿ

ಮುಂದಿನ ಒಂದು ವಾರ ರಾಜ್ಯದಲ್ಲಿ ಮಳೆರಾಯನ ಅಬ್ಬರ! IMD ಅಲರ್ಟ್


Share

Leave a Reply

Your email address will not be published. Required fields are marked *