rtgh
Headlines

ದೀಪಾವಳಿಗೂ ಮುನ್ನ ಗಿಫ್ಟ್ ಘೋಷಿಸಿದ ಜಿಯೋ! 1 ವರ್ಷ ಉಚಿತ 5G ಇಂಟರ್ನೆಟ್, ಇವತ್ತಿಂದ ಪ್ಲಾನ್‌ ಶುರು

Jio Diwali Offer
Share

ಹಲೋ ಸ್ನೇಹಿತರೇ, ಈ ಆಫರ್ ಸೆಪ್ಟೆಂಬರ್ 18 ರಿಂದ ನವೆಂಬರ್ 3, 2024 ರವರೆಗೆ ಲಭ್ಯವಿರಲಿದೆ. ಹೊಸ ಮತ್ತು ಅಸ್ತಿತ್ವದಲ್ಲಿರುವ JioFiber ಮತ್ತು Jio AirFiber ಬಳಕೆದಾರರು ಇದರ ಲಾಭವನ್ನು ಪಡೆಯಬಹುದು. ಹೇಗೆ ಲಾಭ ಪಡೆಯುವುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನು ಓದಿ.

Jio Diwali Offer

ರಿಲಯನ್ಸ್ ಜಿಯೋ ದೀಪಾವಳಿಗೆ ಆಕರ್ಷಕ ಕೊಡುಗೆಯನ್ನು ಪರಿಚಯಿಸಿದೆ. ಇದು ಗ್ರಾಹಕರಿಗೆ 1 ವರ್ಷ ಉಚಿತ ಜಿಯೋ ಏರ್‌ಫೈಬರ್ ಸಂಪರ್ಕವನ್ನು ಪಡೆಯುವ ಅವಕಾಶವನ್ನು ನೀಡುತ್ತದೆ. ಈ  ಪ್ರಮೋಶನ್ ಸೆಪ್ಟೆಂಬರ್ 18 ರಿಂದ ನವೆಂಬರ್ 3, 2024 ರವರೆಗೆ ಲಭ್ಯವಿರಲಿದೆ.  ಹೊಸ ಮತ್ತು ಅಸ್ತಿತ್ವದಲ್ಲಿರುವ JioFiber ಮತ್ತು Jio AirFiber ಬಳಕೆದಾರರು ಈ ಆಫರ್ ನ ಲಾಭ ಪಡೆಯಬಹುದು. 

ಹೊಸ ಗ್ರಾಹಕರಿಗೆ ಷರತ್ತುಗಳು

ಯಾವುದೇ ರಿಲಯನ್ಸ್ ಡಿಜಿಟಲ್ / MyJio ಸ್ಟೋರ್‌ನಿಂದ 20,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಖರೀದಿಸಬೇಕು.ಈ ಮಿತಿಯು ಸ್ವಲ್ಪ ಹೆಚ್ಚು ಎನ್ನುವಂತೆ ತೋರುತ್ತದೆ. ಆದರೆ ನೀವು ಈಗಾಗಲೇ ದೊಡ್ಡ ಎಲೆಕ್ಟ್ರಾನಿಕ್ಸ್ ವಸ್ತು ಖರೀದಿಸಲು ಯೋಜಿಸುತ್ತಿದ್ದರೆ ಇ ಡೀಲ್ ಪ್ರಯೋಜನಕಾರಿಯಾಗಿದೆ.

ಹಳೆಯ ಗ್ರಾಹಕರಿಗೆ ಈ ಆಫರ್ :

2,222 ಮೌಲ್ಯದ ವಿಶೇಷ ದೀಪಾವಳಿ ಪ್ಲಾನ್ ರೀಚಾರ್ಜ್ ಮಾಡಿ. ಈ ಯೋಜನೆಯೊಂದಿಗೆ 1 ವರ್ಷ ಉಚಿತ Jio AirFiber ಸೇವೆಯನ್ನು ಪಡೆಯುತ್ತೀರಿ.

ಅರ್ಹ ಗ್ರಾಹಕರಿಗೆ 12 ಕೂಪನ್‌ಗಳು ಸಿಗುತ್ತವೆ. ಪ್ರತಿಯೊಂದೂ ಅವರ ಸಕ್ರಿಯ Jio AirFiber ಯೋಜನೆಯ ಮೌಲ್ಯಕ್ಕೆ ಸಮನಾಗಿರುತ್ತದೆ.ಈ ಕೂಪನ್‌ಗಳನ್ನು ರಿಲಯನ್ಸ್ ಡಿಜಿಟಲ್, ಮೈಜಿಯೋ, ಜಿಯೋಪಾಯಿಂಟ್ ಅಥವಾ ಜಿಯೋಮಾರ್ಟ್ ಡಿಜಿಟಲ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ರಿಡೀಮ್ ಮಾಡಿಕೊಳ್ಳಬಹುದು.ಪ್ರತಿ ಕೂಪನ್ ಅನ್ನು ಬಳಸಲು,ಅದನ್ನು ಸ್ವೀಕರಿಸಿದ 30 ದಿನಗಳಲ್ಲಿ  15,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಎಲೆಕ್ಟ್ರಾನಿಕ್ ಖರೀದಿಗಳನ್ನು ಮಾಡಬೇಕು.

ಆಫರ್ ಎಷ್ಟು ಸಮಯದವರೆಗೆ ಇರುತ್ತದೆ ?

ಈ ಕೊಡುಗೆಯು ಸೆಪ್ಟೆಂಬರ್ 18 ರಿಂದ ನವೆಂಬರ್ 3 ರವರೆಗೆ ಇರುತ್ತದೆ. ಲಭ್ಯವಿರುವ ಕೂಪನ್‌ಗಳು ನವೆಂಬರ್‌ನಿಂದ ಅಕ್ಟೋಬರ್ 2025 ರವರೆಗೆ ಮಾನ್ಯವಾಗಿರುತ್ತವೆ.

ಇತರೆ ವಿಷಯಗಳು

ಆಧಾರ್‌ ಕಾರ್ಡ್‌ ಹೊಂದಿರುವವರಿಗೆ 2 ದಿನ ಮಾತ್ರ ಬಾಕಿ..! ಕಟ್ಟಬೇಕು ಭಾರೀ ದಂಡ

ಕುಟುಂಬದಲ್ಲಿ ಎಷ್ಟು ಜನರು ಆಯುಷ್ಮಾನ್ ಕಾರ್ಡ್ ಪಡೆಯಬಹುದು? ನಿಯಮ ಬದಲಿಸಿದ ಸರ್ಕಾರ


Share

Leave a Reply

Your email address will not be published. Required fields are marked *