rtgh

ರೀಲ್ಸ್‌ ಮಾಡಿ ಬಹುಮಾನ ಗೆಲ್ಲಿ.! ಸಂವಿಧಾನದ ಬಗ್ಗೆ ಉತ್ತಮ ರೀಲ್ಸ್ ಮಾಡಿದವರಿಗೆ ಬರೋಬ್ಬರಿ 50,000 ರೂ

indian constitution reels
Share

ಹಲೋ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್‌ಗಳದ್ದೇ ಕಾರುಬಾರು. ಹೆಚ್ಚಿನ views ಪಡೆಯಲು ಜನರು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಹಾಗೆಯೇ ಈಗ ಜನರಿಗೆ ಜಾಗೃತಿ ಮೂಡಿಸುವ ದೃಷ್ಠಿಯಿಂದ ಹೆಚ್ಚಿನ ಜನರು ವೀಕ್ಷಣೆ ಮಾಡುವ ರೀಲ್ಸ್‌ಗಳನ್ನು ಬಳಸಿಕೊಂಡು ಸಂವಿಧಾನದ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ವಿನೂತನ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಈ ವಿನೂತನ ಕಾರ್ಯಕ್ರಮವನ್ನು ಮತದಾನ ಜಾಗೃತಿಗಾಗಿ ಧಾರವಾಡ ಜಿಲ್ಲಾ ಸ್ವೀಪ್‌ ಸಮಿತಿಯು ಆಯೋಜಿಸಿದೆ.. ಹೆಚ್ಚಿನ ಮಾಹಿತಿಗೆ ಲೇಖನವನ್ನು ಓದಿ.

indian constitution reels

ಸಂವಿಧಾನದ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಇರುತ್ತದೆ ಆದರೆ ಇಂದಿನ ಟ್ರೆಂಡ್‌ಗೆ ತಕ್ಕಂತೆ ರೀಲ್ಸ್ ಮೂಲಕ ಜನಜಾಗೃತಿ ಮೂಡಿಸುವುದು ಉತ್ತಮ ಎನ್ನಿಸಿದ್ದರಿಂದ ಈ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ. ಇದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಡಿಯಲ್ಲಿ ಬರುವಂತಹ ಕಾಲೇಜಿನಲ್ಲಿ ಸ್ಥಾಪಿಸಲಾದ ELC ಕ್ಯಾಂಪಸ್ ಅಂಬಾಸಿಡರ್ಗಳನ್ನು ಬಳಸಿಕೊಂಡು ರೀಲ್ಸ್ ಮಾಡುವ ಮೂಖಾಂತರ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ.

ಬಹುಮಾನಗಳ ವಿವರ :- ವಿಜೇತರಿಗೆ ನಗದು ರೂಪದಲ್ಲಿ ಬಹುಮಾನ ದೊರೆಯುತ್ತದೆ

  • ಪ್ರಥಮ ಬಹುಮಾನಕ್ಕೇ 50,000 ರೂ.
  • ದ್ವಿತೀಯ ಬಹುಮಾನಕ್ಕೇ 25,000 ರೂ.
  • ತೃತೀಯ ಬಹುಮಾನಕ್ಕೇ 15,000 ರೂ.

ಇದನ್ನು ಓದಿ: ಯಾವೆಲ್ಲಾ ಇಲಾಖೆಯಿಂದ ಯಾವ್ಯಾವ ಸ್ಕಾಲರ್‌ಶಿಫ್‌.! ಅರ್ಜಿ ಸಲ್ಲಿಕೆಗೆ ಕೊನೆ ದಿನ ಯಾವಾಗ? ಕಂಪ್ಲೀಟ್‌‌ ಮಾಹಿತಿ

ಯಾವ ವಿಷಯಗಳಿಗೆ ರೀಲ್ಸ್‌ ಮಾಡಬಹುದು?

ಸಂವಿಧಾನದ ಮೂಲಭೂತ ಹಕ್ಕುಗಳು & ಕರ್ತವ್ಯಗಳು, ಸಂವಿಧಾನದ ಮಹತ್ವದ ಬಗ್ಗೆ, ಪೀಠಿಕೆಯ ವೈಶಿಷ್ಟ್ಯ ಮತ್ತು ಸಂವಿಧಾನಕ್ಕೆ ಸಂಬಂಧಿಸಿದ ಯಾವುದಾರೂ ಅಂಶದ ಬಗ್ಗೆ ರೀಲ್ಸ್‌ ಮಾಡಬಹುದಾಗಿದೆ.

ನಿಯಮಗಳು ಹೀಗಿವೆ :-

  • ರೀಲ್ಸ್‌ 30 ರಿಂದ 40 ಸೆಕೆಂಡ್‌ಗಳಲ್ಲಿ ಇರತಕ್ಕದ್ದು.
  • ಸಂವಿಧಾನದ ವಿಷಯ ಬಿಟ್ಟು ಬೇರೆ ವಿಷಯಗಳ reels ಗೆ ಅವಕಾಶ ಇರುವುದಿಲ್ಲ.
  • ಆಯೋಜಕ ತಂಡದಿಂದ ಅನುಮೋದಿಸ್ಪಟ್ಟವರು ಮಾತ್ರ ರೀಲ್ಸ್ ಕಳುಹಿಸಬಹುದಾಗಿದೆ.
  • ರೀಲ್ಸ್‌ನ ಯುಆರ್‌ಎಲ್‌ (URL) ಅನ್ನು ಫೆಬ್ರವರಿ 20 ಒಳಗೆ ಆಯೋಜಕರಿಗೆ ತಲುಪಿಸಬೇಕು. ಫೆಬ್ರವರಿ 22ರ ಸಂಜೆ 5 ಗಂಟೆಯ ವರೆಗೆ social media ದಲ್ಲಿ ಪಡೆದ Liks ಗಳ ಆಧಾರದ ಮೇಲೆ ವಿಜೇತರನ್ನ ಘೋಷಣೆ ಮಾಡಲಾಗುತ್ತದೆ.
  • ವಯಸ್ಸಿನ ಮಿತಿ ಇಲ್ಲ.
  • ಯುವ ಮತದಾರರು, 80 ವರ್ಷ ಮೇಲ್ಪಟ್ಟವರು, ಅಂಗವಿಕಲರು, ಸಾರ್ವಜನಿಕರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತಹ ವಿಷಯಗಳು ಆ ವೀಡಿಯೋದಲ್ಲಿ ಇರಬೇಕಾಗುತ್ತದೆ

ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?:

ಸ್ಪರ್ಧಿಗಳು ರೀಲ್ಸ್‌ಗಳನ್ನು 9986929286 ಮೊಬೈಲ್ ನಂಬರ್‌ಗೆ ಕಳುಹಿಸಬೇಕು. ಈ reels ಗಳನ್ನು ಧಾರವಾಡ ಜಿಲ್ಲಾ ಪಂಚಾಯತ YouTube Chanel ನಲ್ಲಿ ಅಪ್ಲೋಡ್ ಮಾಡಿಸಬೇಕು ನಂತರ ಲಿಂಕ್‌ಗಳನ್ನು ಸಂಬಂಧಿಸಿದ ಕ್ಯಾಂಪಸ್ ಅಂಬಾಸಿಡರ್ ಮೂಲಕ ವಿದ್ಯಾರ್ಥಿ ಮತದಾರರಿಗೆ & ಸಾರ್ವಜನಿಕರಿಗೆ ಈ ಮೂಲಕ ಪ್ರಚಾರ ಮಾಡಬೇಕು.

ಇತರೆ ವಿಷಯಗಳು

ಮೂಲ ವೇತನದಲ್ಲಿ ಭಾರೀ ಏರಿಕೆ!! 7ನೇ ವೇತನ ಆಯೋಗದ ಡಿಎ 50% ಹೆಚ್ಚಳ

ಗ್ರಾಮೀಣ ಜಲ ಜೀವನ್ ಮಿಷನ್ ಯೋಜನೆ!! ಎಲ್ಲಾ ಮನೆಗಳಿಗೆ ಉಚಿತ ಟ್ಯಾಪ್ ಸಂಪರ್ಕ

FAQ

1.ರೀಲ್ಸ್‌ ಮಾಡಿದವರಿಗೆ ಎಷ್ಟು ಬಹುಮಾನ ನೀಡಲಾಗುತ್ತದೆ?

50,000 ಬಹುಮಾನ ನೀಡಲಾಗುತ್ತದೆ.

2.ರೀಲ್ಸ್‌ ಎಷ್ಟು ಸೆಕೆಂಡ್‌ ಇರಬೇಕು?

30 ರಿಂದ 40 ಸೆಕೆಂಡ್‌ ಮಾತ್ರ ಇರಬೇಕು.


Share

Leave a Reply

Your email address will not be published. Required fields are marked *