rtgh

ಯಾವುದೇ ಪರೀಕ್ಷೆ ಇಲ್ಲದೇ ಅಂಚೆ ಬ್ಯಾಂಕ್‌ನಲ್ಲಿ ನೇಮಕ.! 30000 ಸಂಬಳ ಪಡೆಯಲು ಈ ವಿದ್ಯಾರ್ಹತೆ ಕಡ್ಡಾಯ

post circle exicutive recruitment
Share

ಹಲೋ ಸ್ನೇಹಿತರೇ, ಡಿಗ್ರಿ ಪಾಸಾದವರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಕೇಂದ್ರ ಸರ್ಕಾರಿ ಇಲಾಖೆಯಾದ ಅಂಚೆ ಇಲಾಖೆಯಲ್ಲಿ ಪದವೀಧರರನ್ನು ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ಆಯೋಜಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪರೀಕ್ಷೆ ನಡೆಸದೇ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

post circle exicutive recruitment

ದೇಶದಾದ್ಯಂತ 1,55,015 ಪೋಸ್ಟ್‌ ಆಫೀಸ್‌ಗಳನ್ನು ಅಂಚೆ ಇಲಾಖೆ ಹೊಂದಿದೆ. ಸುಮಾರು 3 ಲಕ್ಷಕ್ಕೂ ಅಧಿಕ ಪೋಸ್ಟ್‌ಮ್ಯಾನ್‌ & ಗ್ರಾಮೀಣ ಡಾಕ್‌ ಸೇವಕರನ್ನು ಹೊಂದಿದ್ದು, ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದೆ. ಇದರ ಕಾರ್ಯಕ್ಷೇತ್ರ, ಸೇವೆಯನ್ನು ಇನ್ನಷ್ಟು ಬಲಪಡಿಸಲು ಇದೀಗ ಇಂಡಿಯನ್ ಪೋಸ್ಟ್ ಪೇಮೆಂಟ್ಸ್‌ ಬ್ಯಾಂಕ್‌ ಎಕ್ಸಿಕ್ಯೂಟಿವ್‌ ಹುದ್ದೆಯನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು. ತನ್ನ ಸೇಲ್ಸ್‌ & ಆಪರೇಷನ್ಸ್‌ ವಿಭಾಗಗಳಲ್ಲಿ ಈ ಪೋಸ್ಟ್‌ಗಳನ್ನು ಭರ್ತಿ ಮಾಡಿಕೊಳ್ಳುತ್ತದೆ. ಆಸಕ್ತರಿಂದ ಸದರಿ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ.

ನೇಮಕಾತಿ ಪ್ರಾಧಿಕಾರ : ಇಂಡಿಯನ್ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್
ಹುದ್ದೆಯ ಹೆಸರು : ಅಂಚೆ ವೃತ್ತದ ಎಕ್ಸಿಕ್ಯೂಟಿವ್
ಹುದ್ದೆಯ ಒಟ್ಟು ಸಂಖ್ಯೆ : 47

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸ್ವೀಕಾರ ಪ್ರಾರಂಭಿಕ ದಿನಾಂಕ: 15-03-2024
ಆನ್‌ಲೈನ್‌ ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ : 05-04-2024 ರ ರಾತ್ರಿ 11-59 ಗಂಟೆ.
ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ : 20-04-2024 ರ ರಾತ್ರಿ 11-59 ಗಂಟೆ.

ವಯಸ್ಸಿನ ಅರ್ಹತೆ

  • ಅರ್ಜಿ ಸಲ್ಲಿಸಲು ಬಯಸುವವರಿಗೆ ಕನಿಷ್ಠ 21 ವರ್ಷ ಗರಿಷ್ಠ 35 ವರ್ಷ ವಯಸ್ಸು..
  • ಒಟ್ಟು ಹುದ್ದೆಗಳ ಪೈಕಿ ಸಾಮಾನ್ಯ ವರ್ಗಕ್ಕೆ – 21, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ – 04, OBC ಅಭ್ಯರ್ಥಿಗಳಿಗೆ – 12, ಪರಿಶಿಷ್ಟ ಜಾತಿ ವರ್ಗಕ್ಕೆ – 7, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ – 3 ಹುದ್ದೆಗಳನ್ನು ಮೀಸಲಿಡಲಾಗಿದೆ.

ಕರ್ನಾಟಕದಲ್ಲಿ IPPB ಎಕ್ಸಿಕ್ಯೂಟಿವ್‌ ಹುದ್ದೆ ಸಂಖ್ಯೆ : 1

ವಿದ್ಯಾರ್ಹತೆ

  • ಯಾವುದೇ ಪದವಿ ಉತ್ತೀರ್ಣ.
  • MBA ಇನ್‌ ಸೇಲ್ಸ್‌ / ಮಾರ್ಕೆಟಿಂಗ್ ಓದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು.
  • ಫ್ರೆಶರ್‌ಗಳು ಅರ್ಜಿ ಹಾಕಬಹುದು, ಸೇಲ್ಸ್‌ / ಆಪರೇಷನ್ಸ್‌ ಇನ್‌ ಫೈನಾನ್ಸ್‌ ನಲ್ಲಿ ಕಾರ್ಯಾನುಭವ ಇರುವವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು.

ಆಯ್ಕೆ ವಿಧಾನ

ಪದವಿಯ ಅಂಕದ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ಅವರಿಗೆ ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ಸಂಭಾವನೆ ವಿವರ : ಆಯ್ಕೆಯಾದವರಿಗೆ ಮಾಸಿಕ ರೂ.30000 ನೀಡಲಾಗುವುದು.

ಅಪ್ಲಿಕೇಶನ್‌ ಶುಲ್ಕ ವಿವರ

SE / ST / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ -ರೂ.150.
ಇತರೆ ಎಲ್ಲ ವರ್ಗಕ್ಕೆ – ರೂ.750.

ಅರ್ಜಿ ಸಲ್ಲಿಸುವ ವಿಧಾನ

  • ಈ ಲಿಂಕ್‌ಗೆ https://www.ippbonline.com ಗೆ ಭೇಟಿ ನೀಡಿ.
  • ಪುಟ್‌ ತೆರೆದ ನಂತರ ಮೇಲ್ಭಾಗದಲ್ಲಿ ‘Careers’ ಎಂಬುದರ ಮೇಲೆ ಕ್ಲಿಕ್ ಮಾಡಿ.
  • ಹೊಸ ವೆಬ್‌ಪೇಜ್‌ ತೆರೆಯುತ್ತದೆ. ಈ ವೆಬ್‌ಪೇಜ್‌ನಲ್ಲಿ ‘Current Openings’ ಮೆನು ಕೆಳಗಡೆ ಗಮನಿಸಿ.
  • Recruitment of 47 Circle Based Executives on Contract Basis’ ಎಂದು ಕಾಣಿಸುತ್ತದೆ.
  • ಇದರ ಕೆಳಗೆ ಅರ್ಜಿಗೆ ಲಿಂಕ್ ಮತ್ತು ಮಾರ್ಗದರ್ಶನ, ನೇಮಕ ಅಧಿಸೂಚನೆ ಲಿಂಕ್‌ನ್ನು ಚೆಕ್ ಮಾಡಬಹುದು.
  • ಅರ್ಜಿ ಸಲ್ಲಿಸಲು ‘Apply Online’ ಎಂದಿರುತ್ತದೆ ಅದನ್ನು ಕ್ಲಿಕ್ ಮಾಡಿ.
  • ಈ ಹಂತದಲ್ಲಿ ತೆರೆದ ವೆಬ್‌ಪೇಜ್‌ನಲ್ಲಿ ‘Click Here for New Registration’ ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಮೊದಲು ರಿಜಿಸ್ಟ್ರೇಷನ್ ಪಡೆಯಿರಿ ಅಮೇಲೆ ಅರ್ಜಿ ಸಲ್ಲಿಸಿ.

ಇತರೆ ವಿಷಯಗಳು

SBI ವತಿಯಿಂದ ಫೆಲೋಶಿಪ್‌ ಪ್ರೋಗ್ರಾಮ್‌: ಅರ್ಜಿ ಸಲ್ಲಿಸಿದವರಿಗೆ ರೂ.50,000 ವಿಶೇಷ ಭತ್ಯೆ ಜೊತೆಗೆ ಉದ್ಯೋಗ

2nd ಪಿಯುಸಿ ಫಲಿತಾಂಶ ಏಪ್ರಿಲ್ 3ನೇ ವಾರದಲ್ಲಿ!!


Share

Leave a Reply

Your email address will not be published. Required fields are marked *