rtgh

ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ

HSRP Number Plate big update
Share

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಈಗಾಗಲೇ ಶೇಕಡಾ 72ರಷ್ಟು ಅಂದರೆ 47,64,293 ವಾಹನಗಳು HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿವೆ. ಅದೇ ವಿಷಯವಾಗಿ ಸರ್ಕಾರ ಮತ್ತೊಂದು ನಿರ್ಧಾರವನ್ನು ಹೊರಹಾಕಿದೆ. ಏನದು ನಿರ್ಧಾರ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

HSRP Number Plate big update

ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿರುವ ಸಾರಿಗೆ ಇಲಾಖೆ HSRP ನಂಬರ್ ಪ್ಲೇಟ್ ಅಳವಡಿಕೆಗಾಗಿ ನಿಗದಿಗೊಳಿಸಿದ್ದ ಅಂತಿಮ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದ್ದು 2024ರ ಸೆಪ್ಟೆಂಬರ್ 15ರವರೆಗೆ ಗಡುವು ಮುಂದೂಡಿಕೆ ಮಾಡಲಾಗಿದೆ. ಇಂದು ಕರ್ನಾಟಕ ಗೆಜೆಟ್ ನಲ್ಲೂ ಈ ಬಗ್ಗೆ ಅಂತಿಮ‌ ಅದಿಸೂಚನೆ ಪ್ರಕಟವಾಗಲಿದೆ. 

ಈಗಾಗಲೇ 72% ವಾಹನಗಳಿಗೆ HSRP ಅಳವಡಿಕೆ

ಲಭ್ಯವಿರುವ ಮಾಹಿತಿಗಳ ಪ್ರಕಾರ, ಆಗಸ್ಟ್ 18, 2023ರಿಂದ ಜುಲೈ 05, 2024ರವರೆಗೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 47,74,293 ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (HSRP ) ಅಳವಡಿಸಲಾಗಿದೆ. ಇನ್ನುಳಿದಂತ ವಾಹನಗಳ ಮಾಲೀಕರಿಗೆ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್  ಪ್ಲೇಟ್ ಅಳವಡಿಸಿಕೊಳ್ಳಲು 2024ರ ಸೆಪ್ಟೆಂಬರ್ 15ರವರೆಗೆ ಸಮಯಾವಕಾಶವನ್ನು ನೀಡಲಾಗಿದೆ. ನಿಗದಿತ ದಿನಾಂಕದೊಳಗೆ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸದೆ ಇದ್ದರೆ ಪ್ರತೀ ವಾಹನದ ಮೇಲೆ 1 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. 

HSRP ನಂಬರ್ ಪ್ಲೇಟ್ ಪ್ರಿಂಟ್ ಮಾಡುವವರಿಗೂ ಎಚ್ಚರಿಕೆ ನೀಡಿದ RTO

ಇನ್ನೂ HSRP ನಂಬರ್ ಪ್ಲೇಟ್ ಪ್ರಿಂಟ್ ಮಾಡುವವರಿಗೂ ಕೂಡ ಎಚ್ಚರಿಕೆ ನೀಡಿರುವ ಆರ್‌ಟಿ‌ಓ, HSRPನಂಬರ್ ಪ್ಲೇಟ್‌ಗಾಗಿ ಸರ್ಕಾರ ನಿಗಡಿಗೊಳಿಸಿರುವ ಹಣವನ್ನಷ್ಟೇ ಸ್ವೀಕರಿಸಬೇಕು. ಹೆಚ್ಚಿನ ಹಣ ವಸೂಲಿ ಮಾಡಿದ್ರೆ ಅಂತವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಹಣ ವಸೂಲಿ ಮಾಡಿದ ಡೀಲರ್ ಗಳ ಹೆಸರುಗಳನ್ನು ಬ್ಲಾಕ್ ಲಿಸ್ಟ್ ನಲ್ಲಿ ಹಾಕಲಾಗುತ್ತದೆ ಎಂದು ತಿಳಿಸಿದೆ. 

HSRP ಎಂದರೇನು?

HSRP- ಹೈ-ಸೆಕ್ಯುರಿಟಿ ನೋಂದಣಿ ಪ್ಲೇಟ್‌  ಹೊಸ ರೀತಿಯ ಟ್ಯಾಂಪರ್ ಪ್ರೂಫ್ ನಂಬರ್ ಪ್ಲೇಟ್ ಆಗಿದ್ದು, ಮರುಬಳಕೆ ಮಾಡಲಾಗದ ಲಾಕ್‌ಗಳನ್ನು ಹೊಂದಿದೆ. ಒಮ್ಮೆ ಸ್ಥಾಪಿಸಿದ ನಂತರ, ಲಾಕ್ ಅನ್ನು ಮುರಿಯುವ ಮೂಲಕ ಮಾತ್ರ ಅದನ್ನು ತೆಗೆದುಹಾಕಬಹುದು, ಅದನ್ನು ಬದಲಾಯಿಸಲು ಕಷ್ಟವಾಗುತ್ತದೆ. 

ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಎಲ್ಲಾ HSRP ಪ್ಲೇಟ್‌ಗಳು ಏಕರೂಪದ ಫಾಂಟ್ & ವಿನ್ಯಾಸವನ್ನು ಹೊಂದಿದ್ದು, ಎಡಭಾಗದಲ್ಲಿ ನೀಲಿ ‘ಚಕ್ರ’ ಚಿಹ್ನೆಯನ್ನು ಹೊಂದಿರುತ್ತದೆ. ಪ್ಲೇಟ್‌ನ ಹಿನ್ನೆಲೆ ಬಣ್ಣವು ವಾಹನದ ಪ್ರಕಾರವನ್ನು ಆಧರಿಸಿ ಬದಲಾಗುತ್ತದೆ. 

ಇತರೆ ವಿಷಯಗಳು

ಸರ್ಕಾರಿ ನೌಕರರಿಗೂ ಸಿಕ್ತು ಗ್ಯಾರೆಂಟಿ.! ಈ ವ್ಯಾಪ್ತಿಗೆ ಸೇರಿದವರಿಗೆ ಶೇ.50ರಷ್ಟು ಪಿಂಚಣಿ

ಇನ್ಮುಂದೆ ಈ ಯೋಜನೆಯಡಿ ಸಿಗಲಿದೆ 10 ಸಾವಿರ ರೂ. ಪಿಂಚಣಿ!


Share

Leave a Reply

Your email address will not be published. Required fields are marked *