ಹಲೋ ಸ್ನೇಹಿತರೇ, ತೋಟಗಾರಿಕ ಬೆಳೆಗಳಿಗೆ NDRF) / (SDRF) ಮಾರ್ಗಸೂಚಿ ಅನ್ವಯ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ ನಿಗದಿಪಡಿಸಿರುವುದಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ರವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ..
ನಿನ್ನೆ ನಡೆದ ವಿಧಾನ ಪರಿಷತ್ ಕಲಾಪದ ವೇಳೆ ಸದಸ್ಯರಾದ ಟಿ.ಎ. ಶರವಣ ಅವರ ಚುಕ್ಕೆ ಗುರಿತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ತೀವ್ರ ಬರಗಾಲದಿಂದ 5,11,208 ಎಕರೆ ಪ್ರದೇಗಳಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿರುವುದಾಗಿ ಅಂದಾಜು ಮಾಡಲಾಗಿದೆ. ತೋಟಗಾರಿಕೆ & ಕಂದಾಯ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಸರ್ವೆ ಕಾರ್ಯ ನಡೆಸಿ ಒಟ್ಟು ಎಷ್ಟು ವಿಸ್ತೀರ್ಣದಲ್ಲಿ ಬೆಳೆ ಹಾನಿಯಾಗಿದೆ ಎಂದು ಗುರುತಿಸಲಾಗಿದೆ.
Contents
NDRF) / (SDRF) ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರ!
ರಾಜ್ಯ & ದೇಶದಲ್ಲಿ ಯಾವುದೇ ಬಗ್ಗೆಯ ಮಾನವ & ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದಾಗ ಸರ್ಕಾರದಿಂದ ಅರ್ಹ ಫಲಾನುಭವಿಗಳಿಗೆ ಪರಿಹಾರವನ್ನು ನೀಡಲು ಏಕ ರೂಪ ಮಾರ್ಗಸೂಚಿಯನ್ನು ಅನುಸರಿಸಲಾಗುವುದು ಈ ಮಾರ್ಗಸೂಚಿಯೇ NDRF-ರಾಷ್ಟ್ರೀಯ ವಿಪತ್ತು ನಿರ್ವಹಣೆ ಈ ಮಾರ್ಗಸೂಚಿಯಲ್ಲಿ ಎಷ್ಟು ಪ್ರಮಾಣದ ಹಾನಿಗೆ ಎಷ್ಟು ಪರಿಹಾರವನ್ನು ಫಲಾನುಭವಿಗೆ ಪಾವತಿ ಮಾಡಬೇಕಾಗುತ್ತದೆ ಎಂದು ಸಂಪೂರ್ಣವಾಗಿ ವಿವರವನ್ನು ನೀಡಲಾಗುತ್ತದೆ.
ಇದನ್ನು ಓದಿ:ಬಡವರಿಗಾಗಿ ಸರ್ಕಾರದ ಹೊಸ ಯೋಜನೆ! ಪ್ರತಿದಿನ ಫಲಾನುಭವಿಗಳ ಕೈ ಸೇರಲಿದೆ 500 ರೂ.
ಈ ಮಾರ್ಗಸೂಚಿಯ ನಿಯಮಗಳ ಪ್ರಕಾರವೇ ರಾಜ್ಯ ಸರ್ಕಾರಗಳು ಕೇಂದ್ರದಿಂದ ಅನುದಾನ ಪಡೆದು ಇದಕ್ಕೆ ರಾಜ್ಯದ ಪಾಲನ್ನು ಸೇರಿಸಿ ಬೆಳೆ ಮತ್ತು ಅಸ್ತಿ-ಪಾಸ್ತಿ, ಮಾನವ ಹಾನಿಗೆ ಒಳಗಾದ ಫಲಾನುಭವಿಗಳಿಗೆ ಪರಿಹಾರವನ್ನು ನೀಡಬೇಕಾಗುತ್ತದೆ.
ಅದರೆ ಕರ್ನಾಟಕ ರೈತರ ದುರದೃಷ್ಟವೋ ಅಥವಾ ಆಡಳಿತದಲ್ಲಿರುವ ಇಚ್ಚ ಶಕ್ತಿಯ ಕೊರತೆಯೋ? ಗೊತ್ತಿಲ್ಲ ಇದುವರೆಗೂ ಕೇಂದ್ರದಿಂದ ಬರ ಪರಿಹಾರದ 1 ಕಂತಿನ ಹಣ ಬಂದಿರುವುದಿಲ್ಲ ಈಗಾಗಲೇ ಅರ್ಥಿಕವಾಗಿ ಸಂಕಷ್ಟದಲ್ಲಿದ ರೈತರಿಗೆ ನೆರವಾಗಬೇಕ್ಕಿದ್ದ ಸರ್ಕಾರಗಳು ತಮ್ಮ ತಮ್ಮಲ್ಲೆ ಆರೋಪಿಸುತ್ತ ರೈತರ ತಾಳ್ಮೆ ಪರೀಕ್ಷೆಯಲ್ಲಿ ತೂಡಗಿರುವುದು ದೊಡ್ಡ ದುರಂತವಾಗಿದೆ.
NDRF) / (SDRF) ಮಾರ್ಗಸೂಚಿಗಳನ್ವಯ ತೋಟಗಾರಿಕ ಬೆಳೆಗಳಿಗೆ ನಿಗದಿಪಡಿಸಿರುವ ಪರಿಹಾರದ ಮೊತ್ತದ ವಿವರ:
NDRF) / (SDRF) ಮಾರ್ಗಸೂಚಿ ಅನ್ವಯ ಪ್ರತಿ ಹೆಕ್ಟೇರ್ ಗೆ ಅಂದರೆ 2.5 ಎಕರೆಗೆ ತೋಟಗಾರಿಕೆ ಬೆಳೆಗಳ ನಷ್ಟಕ್ಕೆ ಮಳೆಯಾಶ್ರಿತ ಪ್ರದೇಶದ ಬೆಳೆಗಳಿಗೆ ರೂ. 8,500/- ನೀರಾವರಿ ಬೆಳೆಗೆ ರೂ17,000/- & ಬಹು ವಾರ್ಷಿಕ ಬೆಳೆಗಳಿಗೆ ರೂ. 22,500/- ಪರಿಹಾರವನ್ನು ನಿಗದಿಪಡಿಸಲಾಗಿದೆ ಎಂದು ತೋಟಗಾರಿಕ ಸಚಿವರ ಪರವಾಗಿ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಸದನದಲ್ಲಿ ತಿಳಿಸಿದ್ದಾರೆ.
1st installment parihara amount- ಒಟ್ಟು 30.24,795 ರೈತರಿಗೆ ಮೊದಲ ಕಂತಿನ ಪರಿಹಾರದ ರೂ 2,000 ವರ್ಗಾವಣೆ:
ಕೃಷಿ, ರೇಷ್ಮೆ & ತೋಟಗಾರಿಕಾ ಬೆಳೆ ಸೇರಿದಂತೆ ನಷ್ಟದಿಂದ ನೊಂದಿರುವ ಪ್ರತಿ ರೈತರಿಗೆ ರೂ. 2000 ರಂತೆ ಇಲ್ಲಯವರೆಗೆ ಒಟ್ಟು 30.24,795 ರೈತರಿಗೆ 573.28 ರೂ. ಕೋಟಿ ಪರಿಹಾರದ ಮೊತ್ತವನ್ನು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಕೋಶದ ಮುಖಾಂತರ ವಿತರಿಸಲಾಗುತ್ತದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾಹಿತಿ ತಿಳಿಸಿದ್ದಾರೆ.
ಇತರೆ ವಿಷಯಗಳು
10ನೇ ತರಗತಿ ಪಾಸಾಗಿದ್ರೆ ಪೋಸ್ಟ್ ಆಫೀಸ್ನಲ್ಲಿದೆ ಬಂಪರ್ ಉದ್ಯೋಗ; 98,083 ಖಾಲಿ ಹುದ್ದೆಗಳ ನೇಮಕಾತಿ
310 ಅರಣ್ಯ ವೀಕ್ಷಕ ಹುದ್ದೆಗಳು; ಈ 5 ಜಿಲ್ಲೆಯವರಿಗೆ ಅವಕಾಶ.! ಇಲ್ಲಿದೆ ಅಪ್ಲೇ ಲಿಂಕ್
FAQ
1.ರೈತರಿಗೆ ಮೊದಲ ಕಂತಿನ ಪರಿಹಾರ ಹಣ ಎಷ್ಟು?
ಪ್ರತಿ ರೈತರಿಗೆ 2000 ರೂ.
2.ಯಾವ ಬೆಳೆಗೆ ಪರಿಹಾರ ನಷ್ಟವನ್ನು ನೀಡಲಾಗುವುದು?
ತೋಟಗಾರಿಕ ಬೆಳೆಗೆ ಪರಿಹಾರ ನಷ್ಟವನ್ನು ನೀಡಲಾಗುವುದು.