ಹಲೋ ಸ್ನೇಹಿತರೆ, ಕರಾವಳಿ ಭಾಗದಲ್ಲಿ ಶನಿವಾರ ಪೂರ್ತಿ ಧಾರಾಕಾರ ಮಳೆಯಾಗಿದೆ. ಇದೇ ವೇಳೆ ಇದೇ ರೀತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 9 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಈ ಪ್ರದೇಶದಲ್ಲಿ ‘ರೆಡ್ ಅಲರ್ಟ್’ ಘೋಷಿಸಿದ್ದು, 204.5 ಮಿಮೀ ಮೀರುವ ಮಳೆಯ ಸಾಧ್ಯತೆಯನ್ನು ಸೂಚಿಸುತ್ತದೆ.
ಉಡುಪಿ, ಉತ್ತರ ಕನ್ನಡ, ಬೆಳಗಾವಿಯಲ್ಲಿ ಮುಂದಿನ ಎರಡು ದಿನ, ಧಾರವಾಡ, ಗದಗದಲ್ಲಿ ಜೂನ್ 10ರಿಂದ ಜೂನ್ 12ರವರೆಗೆ ಹಾಗೂ ಕೊಪ್ಪಳದಲ್ಲಿ ಜೂ 11ರಿಂದ ಮುಂದಿನ ಎರಡು ದಿನ ಅತಿ ಭಾರಿ ಮಳೆಯ ಇರುವ ಕಾರಣ ರೆಡ್ಅಲರ್ಟ್ ನೀಡಲಾಗಿದೆ.
ಇದನ್ನು ಓದಿ: ಯುಪಿಐ ಬಳಕೆದಾರರಿಗೆ ಬಿಗ್ ಅಪ್ಡೇಟ್: ಆರ್ಬಿಐ ನಿಂದ ಹೊಸ ನಿಯಮ ಜಾರಿ!!
ಶಿವಮೊಗ್ಗ, ಬಳ್ಳಾರಿಯಲ್ಲಿಯೂ ಸಹ ಮುಂದಿನ 3 ದಿನ ಜೋರಾಗಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ದಾವಣಗೆರೆ ಚಿಕ್ಕಮಗಳೂರು, ರಾಯಚೂರು, ಕಲಬುರಗಿ, ಯಾದಗಿರಿ, ದಣ ಕನ್ನಡದಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕರ್ನಾಟಕ ಭಾಗದ 3 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆ ಸುರಿಯಲಿದೆ.
ಏನಿದು ಅಲರ್ಟ್?
- ಗಂಟೆಗೆ 45 ರಿಂದ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ.
- ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
- ಹೆಚ್ಚುವರಿಯಾಗಿ, IMD ಜೂನ್ 10 ಮತ್ತು 11 ಕ್ಕೆ ‘ಆರೆಂಜ್ ಅಲರ್ಟ್’ ಮತ್ತು ಜೂನ್ 12 ಕ್ಕೆ ‘ಹಳದಿ ಎಚ್ಚರಿಕೆ’ ನೀಡಿದೆ.
ಇತರೆ ವಿಷಯಗಳು:
ಪಿಂಚಣಿದಾರರ ಹಣ ಹೆಚ್ಚಳ, ಮೂಲ ವೇತನಕ್ಕೆ ಡಿಎ ಸೇರ್ಪಡೆ!
ಗ್ಯಾರೆಂಟಿ ಯೋಜನೆ ಬಗ್ಗೆ ಸಿಎಂ ಅಚ್ಚರಿ ಹೇಳಿಕೆ.! ಫ್ರೀ ಬಸ್, 2,000 ರೂ ಎಲ್ಲಾ ಬಂದ್