rtgh
Headlines

ಗೃಹಲಕ್ಷ್ಮಿ 11ನೇ ಕಂತಿನ ಹಣ ಈ ದಿನ ಬಿಡುಗಡೆ! ಮಹಿಳೆಯರೇ ಖಾತೆ ಚೆಕ್ ಮಾಡಿಕೊಳ್ಳಿ

gruha lakshmi 11th installment
Share

ಹಲೋ ಸ್ನೇಹಿತರೇ, ಕಳೆದ ವರ್ಷ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಮಹಿಳೆಯರಿಗೆಂದು ವಿಶೇಷವಾಗಿ ಜಾರಿಗೆ ತಂದ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಬಡಕುಟುಂಬದ ಮಹಿಳೆಯರಿಗೆ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ, ಮನೆಯ ಮುಖ್ಯಸ್ಥೆಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ ₹2000 ರೂಪಾಯಿ ವರ್ಗಾವಣೆ ಆಗುತ್ತಿದೆ. ಕಳೆದ 10 ತಿಂಗಳುಗಳಿಂದ ಈ ಸೌಲಭ್ಯ ಮಹಿಳೆಯರಿಗೆ ಲಭ್ಯವಾಗುತ್ತಿದೆ.

gruha lakshmi 11th installment

Contents

ಲೋಕಸಭಾ ಚುನಾವಣೆ ನಂತರ ಗೃಹಲಕ್ಷ್ಮಿ ಯೋಜನೆಯ ಹಣ ಬಂದ್?

ಇತ್ತೀಚೆಗೆ ದೇಶದಲ್ಲಿ ಲೋಕಸಭಾ ಚುನಾವಣೆ ನಡೆದು, ಅದರ ಫಲಿತಾಂಶ ಕೂಡ ಹೊರಬಿದ್ದಿದೆ, ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೋದಿ ಅವರ ಆಳ್ವಿಕೆ ಶುರುವಾದ ಬಳಿಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಹಾಗೂ ಇನ್ನಿತರ 4 ಉಚಿತ ಯೋಜನೆಗಳು ಸ್ಥಗಿತಗೊಳ್ಳುತ್ತದೆ ಎನ್ನುವ ಮಾತು ಕೇಳಿಬಂದಿತ್ತು, ಅದು ನಿಜವೇ ಎನ್ನುವ ಗಾಳಿ ಸುದ್ದಿ ಕೂಡ ಹರಿದಾಡಿತ್ತು.

ಯೋಜನೆಯ ಬಗ್ಗೆ ಸಚಿವರಿಂದ ಸ್ಪಷ್ಟನೆ

ಆದರೆ ಈ ವಿಚಾರದ ಬಗ್ಗೆ ಪರಮೇಶ್ವರ್ ಅವರು ಮಾತನಾಡಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯನ್ನಾಗಲಿ ಅಥವಾ ಇನ್ಯಾವುದೇ ಯೋಜನೆಯನ್ನು ಸರ್ಕಾರ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಹಿಳೆಯರ ಕಲ್ಯಾಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ, ಆ ಯೋಜನೆಯನ್ನು ನಿಲ್ಲಿಸುವುದಿಲ್ಲ, ಮಹಿಳೆಯರಿಗೆ ಪ್ರತಿ ತಿಂಗಳು ಹಣ ತಲುಪುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಸಹ ಓದಿ : ಒಂದು ವರ್ಷದಿಂದ ಈ ಕಾರ್ಡ್‌ ಬಳಸುತ್ತಿಲ್ವಾ? ಕೆಲವೇ ದಿನದಲ್ಲಿ ರದ್ದು ಸರ್ಕಾರದ ಸ್ಪಷ್ಟನೆ

11ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ ಯಾವಾಗ?

ಮಹಿಳೆಯರಿಗೆ 10 ಕಂತುಗಳ ಹಣ ಸಿಕ್ಕಿದೆ, ಆದರೆ ಚುನಾವಣೆ ಪ್ರಯುಕ್ತ 11ನೇ ಕಂತಿನ ಹಣ ಬಿಡುಗಡೆ ಆಗುವುದು ತಡ ಆಗಿದ್ದು, 11ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಗೊಂದಲವಿತ್ತು, ಆದರೆ ಈಗ ಸಚಿವರಿಂದಲೇ ಸಿಕ್ಕಿರುವ ಮಾಹಿತಿಯ ಪ್ರಕಾರ, ಈಗಾಗಲೇ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ತಲುಪಿದೆ. ಇನ್ನು ಎರಡು ಅಥವಾ ಮೂರು ದಿನಗಳ ಒಳಗೆ ರಾಜ್ಯದ ಎಲ್ಲಾ ಮಹಿಳೆಯರಿಗೆ 11ನೇ ಕಂತಿನ ಮೊತ್ತ ತಲುಪುತ್ತದೆ ಎಂದು ತಿಳಿಸಿದ್ದಾರೆ..

ಮೊದಲ ಹಂತದಲ್ಲಿ ಈ ಜಿಲ್ಲೆಯ ಮಹಿಳೆಯರಿಗೆ ಹಣ ಬಿಡುಗಡೆ

11ನೇ ಕಂತಿನ ಹಣವು ಮೊದಲ ಹಂತದಲ್ಲಿ ಕೆಲವು ಜಿಲ್ಲೆಯ ಮಹಿಳೆಯರಿಗೆ ಸಿಗುತ್ತದೆ ಎಂದು ಮಾಹಿತಿ ಸಿಕ್ಕಿದ್ದು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಚಾಮರಾಜನಗರ, ತುಮಕೂರು, ಹಾಸನ, ಚಿಕ್ಕಮಗಳೂರು, ಬೆಂಗಳೂರು ಕೇಂದ್ರ ಈ ಜಿಲ್ಲೆಗಳಲ್ಲಿ ಬಿಡುಗಡೆ ಆಗಲಿದೆ. ಇನ್ನು ಕೂಡ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶವಿದೆ, ಹಾಗಾಗಿ ಇನ್ನು ಕೂಡ ಯಾರಾದರೂ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರೆ, ಈಗಲು ಸಲ್ಲಿಸಬಹುದು.

ಇತರೆ ವಿಷಯಗಳು:

PMFBY ಅಡಿಯಲ್ಲಿ 88,000 ಕ್ಕೂ ಹೆಚ್ಚು ರೈತರ ಖಾತೆಗೆ ಹಣ ಜಮಾ!

ಹೊಸ ಸರ್ಕಾರ ರಚನೆ ಬೆನ್ನಲ್ಲೇ ಸಿಹಿ ಸುದ್ದಿ! ಶೇ.50% ಪಿಂಚಣಿ ಏರಿಕೆಗೆ ಸರ್ಕಾರ ಪ್ಲ್ಯಾನ್

400 ಪಶುವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ : ಪ್ರತಿ ತಿಂಗಳ ಸಂಬಳ ರೂ.52,640


Share

Leave a Reply

Your email address will not be published. Required fields are marked *