rtgh

ಎಲ್ಲಾ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ನೂತನ ಆದೇಶ! ತಕ್ಷಣವೇ ಹೊಸ ರೂಲ್ಸ್ ಜಾರಿ

Govt New Rules For Teacher
Share

ಹಲೋ ಸ್ನೇಹಿತರೆ, ಸರಕಾರಿ ಶಾಲೆಗಳ ಉನ್ನತಿಗೆ ಸರಕಾರ ನಿರಂತರ ಪ್ರಯತ್ನ ಮಾಡುತ್ತಲೆ ಇದೆ. ಈಗಾಗಲೇ ಸರ್ಕಾರಿ ಶಾಲಾ ಕಾಲೇಜಿಗೆ ಅನೇಕ ಅಭಿವೃದ್ಧಿ ಕಾರ್ಯ ಚಟುವಟಿಕೆ ಮಾಡುತ್ತಾ ಸರಕಾರಿ ಶಾಲೆಗಳ ಫಲಿತಾಂಶ ವೃದ್ಧಿಸುವ ಉದ್ದೇಶದಿಂದ ಹಾಗೂ ಮಕ್ಕಳ ಕಲಿಕಾ ಗುಣಮಟ್ಟ ಕೂಡ ಅಭಿವೃದ್ಧಿ ಮಾಡಬೇಕು ಎಂಬ ಕಾರಣಕ್ಕಾಗಿ ಶಾಲೆಯ ಶಿಕ್ಷಕರಿಗೆ ಸಂಬಂಧಿಸಿದಂತೆ ಹೊಸದಾಗಿ ಮತ್ತೊಂದು ಆದೇಶ ಹೊರಡಿಸಲಾಗಿದೆ. ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Govt New Rules For Teacher

Contents

ಯಾವುದು ಈ ಮಾಹಿತಿ?

ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಒಂದೆಡೆಯಾದರೆ ಇನ್ನೊಂದು ಕಡೆ ಶಿಕ್ಷಕರು ನೇಮಕ ಮಾಡುವುದು ಸರ್ಕಾರಕ್ಕೆ ತಲೆನೋವಾಗಿದೆ. ಹಾಗೆಯೇ ಸರಿಯಾದ ಸಮಯಕ್ಕೆ ಬಾರದೇ ಮಕ್ಕಳ ಶೈಕ್ಷಣಿಕ ಕಾರ್ಯ ಚಟುವಟಿಕೆಗೆ ಸಹ ತೊಂದರೆ ಆಗುತ್ತಿರುವುದು ಕಂಡು ಬಂದಿದೆ. ಹಾಗಾಗಿ ಮಕ್ಕಳ ಹಿತಾಸಕ್ತಿ ಕಾಪಾಡಬೇಕು ಎನ್ನುವ ಉದ್ದೇಶದಿಂದ ಶಿಕ್ಷಕರಿಗೆ ಹೊಸ ಆದೇಶ ನೀಡಿದ್ದಾರೆ. ಶಿಕ್ಷಕರು ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಶಾಲೆಗೆ ಆಗಮಿಸಬೇಕು‌ ಎಂದು ಸರಕಾರದಿಂದ ತಿಳಿಸಲಾಗಿದೆ.

ಸರಕಾರದಿಂದ ಮಾರ್ಗದರ್ಶನ

ಸರಕಾರದಿಂದ ಶಿಕ್ಷಕರ ಕರ್ತವ್ಯ ವಿಚಾರವನ್ನು ಮತ್ತೆ ಮತ್ತೆ ಸ್ಪಷ್ಟವಾಗಿ ತಿಳಿಸಲಾಗಿದೆ. ಬೋಧನಾ ಕಲಿಕಾ ಚಟುವಟಿಕೆಯನ್ನು ಕ್ರಿಯಾಶೀಲವಾಗಿ ನಿರ್ವಹಿಸುವ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಬಗ್ಗೆ ಸರಕಾರದಿಂದ ಅಧಿಕೃತ ಆದೇಶ ನೀಡಲಾಗಿದೆ. ಇನ್ನೇನು ಮುಂದಿನ ದಿನದಲ್ಲಿ SSLC ಪರೀಕ್ಷೆ ಹತ್ತಿರ ಇರುವ ಕಾರಣ ಮಕ್ಕಳನ್ನು ಸಿದ್ಧ ಮಾಡಬೇಕಾದದ್ದು ಶಿಕ್ಷಕರ ಕರ್ತವ್ಯವಾಗಿದೆ. ಈ ಮೂಲಕ ಸರಕಾರಿ ಶಾಲೆಯ ಗುಣಮಟ್ಟ ಕಾಪಾಡುವ ಮೂಲ ಉದ್ದೇಶ ಹೊಂದಿರಲಾಗಿದೆ.

ಇದನ್ನು ಓದಿ: ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಖಾತೆಗೆ ಜಮೆ ಆಗಿದೆಯೇ? ಹೀಗೆ ಚೆಕ್ ಮಾಡಿ

ಯಾವೆಲ್ಲ ವಿಚಾರಗಳನ್ನು ಸರ್ಕಾರ ತಿಳಿಸಿದೆ?

  • ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ ಅರ್ಥೈಸಿ ಪೂರ್ವ ಸಿದ್ಶತೆ ಕಲಿಕಾ ಪರೀಕ್ಷೆ ಮಾಡಿ ಬಳಿಕ ಕಡಿಮೆ ಶೈಕ್ಷಣಿಕ ಮೌಲ್ಯ ಪಡೆದ ಮಕ್ಕಳನ್ನು ಗಮನದಲ್ಲಿ ಇರಿಸಿ ವಿಶೇಷ ತರಬೇತಿ ಮಾಡಲಾಗಿದೆ.
  • ಬೋಧನಾ ಕಲಿಕಾ ಸಾಮಾಗ್ರಿ ಸರಿಯಾಗಿ ಬಳಸಿ ಕಲಿಕೆಯನ್ನು ಪರಿಪೂರ್ಣ ಗೊಳಿಸುವುದು.
  • ಗಣಿತ, ಇಂಗ್ಲಿಷ್ ಹಾಗೂ ವಿಜ್ಞಾನ ವಿಚಾರಗಳ ವಿಶೇಷ ರೀತಿಯ ತರಬೇತಿ ನೀಡುಬೇಕು ಎಂದು ಹೇಳಲಾಗಿದೆ.
  • ಶಾಲಾ ಹಂತದ ಮೇಲ್ವಿಚಾರಣೆಯನ್ನು ಶಾಲೆಯ ಮುಖ್ಯ ಶಿಕ್ಷಕರು ನೋಡಿಕೊಂಡು ಮಕ್ಕಳನ್ನು ದೈಹಿಕ ಹಾಗೂ ಮಾನಸಿಕ ಸದೃಢರನ್ನಾಗಿ ಮಾಡುವುದು. ಮುಖ್ಯ ಶಿಕ್ಷಕರು ಹಾಗೂ ಉಳಿದ ಶಿಕ್ಷಕರು ಅರ್ಧ ಗಂಟೆ ಮೊದಲು ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು.
  • ನಿಗಧಿ ಪಡಿಸಿದ್ದ ಪಾಠ ಬೋಧನೆಯನ್ನು ನಿಗಧಿತ ಸಮಯದೊಳಗೆ ಮುಗಿಸುವುದು.
  • ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾಳಜಿ ವಹಿಸುವುದು.
  • ಶಾಲೆ ಮುಗಿದ ಬಳಿಕ ಎಲ್ಲಾ ಮಕ್ಕಳು ಸುರಕ್ಷಿತವಾಗಿ ಮನೆ ತಲುಪುವಂತೆ ಮಾರ್ಗದರ್ಶನ ನೀಡುವುದು.
  • ಶಾಲಾ ದಾಸ್ತಾನು ಹಾಗೂ ಸಾಮಾಗ್ರಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು.

ದೂರು ನೀಡಲು ಅವಕಾಶ

ಶಿಕ್ಷಕರು ಶಾಲಾ ಅವಧಿಯಲ್ಲಿ ಶಾಲೆ ಕೆಲಸವಲ್ಲದೆ ಖಾಸಗಿ ಕಾರ್ಯಕ್ರಮ, ಖಾಸಗಿ ವ್ಯವಹಾರಗಳಲ್ಲಿ ತೊಡಗಿದ್ದರೆ ಈ ವಿಷಯವನ್ನು ಸಾರ್ವಜನಿಕರು ಮುಖ್ಯ ಶಿಕ್ಷಕರಿಗೆ ದೂರು ಸಲ್ಲಿಸಬಹುದು. ಒಂದು ವೇಳೆ ಮುಖ್ಯ ಶಿಕ್ಷಕರೇ ಈ ತಪ್ಪು ಮಾಡಿದರೆ ಆಗ ಶಿಕ್ಷಣ ಇಲಾಖೆಗೆ ನೇರವಾಗಿ ದೂರು ನೀಡಬಹುದು. ಆಗ ಅಂತಹ ಶಿಕ್ಷಕರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರಕಾರದ ಸುತ್ತೊಲೆಯ ಆದೇಶದಲ್ಲಿ ವಿವರವಾಗಿ ತಿಳಿಸಲಾಗಿದೆ.

ಇತರೆ ವಿಷಯಗಳ:

ಎಲ್ಲಾ ಹೆಣ್ಣು ಮಗುವಿಗೆ ಬರುತ್ತೆ ಬರೋಬ್ಬರಿ 1 ಲಕ್ಷ ರೂಪಾಯಿ!! ಭಾಗ್ಯಲಕ್ಷ್ಮಿ ಬಾಂಡ್

SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಬಸ್ ಪ್ರಯಾಣಕ್ಕೆ ಅವಕಾಶ!


Share

Leave a Reply

Your email address will not be published. Required fields are marked *