ಹಲೋ ಸ್ನೇಹಿತರೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಯೋಜನೆಯಾದ EPFO ಯೋಜನೆಯು ಅನೇಕ ಜನರಿಗೆ ಭವಿಷ್ಯದ ಅಪಾಯ ತಡೆಗಟ್ಟುವ ಸಲುವಾಗಿ ಬಹಳ ಪ್ರಯೋಜನಕಾರಿಯಾಗಲಿದೆ. ಭವಿಷ್ಯದಲ್ಲಿ ನಿಮಗೆ ಪಿಂಚಣಿ ರೂಪದಲ್ಲಿ ಹಣ ಸಿಗುವ ಜೊತೆಗೆ ವೈದ್ಯಕೀಯ ಸೌಲಭ್ಯಗಳು ಸಹ ಸಿಗಲಿದೆ. ಈಗ ಆ ವೈದ್ಯಕೀಯ ಸೌಲಭ್ಯದ ಮೊತ್ತ ಮಿತಿಯನ್ನು ಹೆಚ್ಚು ಮಾಡಲಾಗಿದ್ದು ಅನೇಕ ಚಿಕಿತ್ಸಾ ವೆಚ್ಚ ಬರಿಸಲು ಈ ಮೊತ್ತ ದೊಡ್ಡ ಮಟ್ಟದ ಕೊಡುಗೆ ನೀಡಲಿದೆ. PF ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಈ ಲೇಖನದಲ್ಲಿ ಯೋಜನೆಯ ಪ್ರಮುಖ ಸುದ್ದಿಯನ್ನು ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
EPFO ಯೋಜನೆಯು ಫಲಾನುಭವಿಗಳಿಗೆ ಭವಿಷ್ಯದಲ್ಲಿ ಸಹಾಯವಾದರೂ ಅದಕ್ಕೂ ಮುನ್ನ ಠೇವಣಿ ಇರಿಸಿದ್ದ ಹಣ ಹಿಂಪಡೆಯುವ ಆಯ್ಕೆ ಇದೆ. ಮಕ್ಕಳ ಶಿಕ್ಷಣ, ಮದುವೆ ಅಥವಾ ವೈದ್ಯಕೀಯ ಸೌಲಭ್ಯ ಪಡೆಯುವ ಸಮಯದಲ್ಲಿ EPFO ಯೋಜನೆ ಬಹಳ ಪುಯೋಗವಾಗಲಿದೆ ಎನ್ನಬಹುದು. ಹಾಗಾಗಿ ಇಪಿಎಫ್ ನಲ್ಲಿ 8G ಕ್ಲೈಂ ಅರ್ಹತೆ ಮಿತಿಯನ್ನು ನಿಗಧಿಸಲಾಗಿದೆ. ಹಾಗಾಗಿ ಭಾಗಶಃ ಹಿಂಪಡೆಯುವ ಮೊತ್ತದಲ್ಲಿ ಭಾರೀ ಮಟ್ಟದ ಬದಲಾವಣೆ ಆಗಿದೆ ಎಂದು ತಿಳಿಸಿದೆ.
ಇದನ್ನು ಓದಿ: ಅನ್ನದಾತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ಸಾಲ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ
ಅರ್ಹತೆ ಮಿತಿ
ಇಪಿಎಫ್ಒ ಅಂದರೆ ಉದ್ಯೋಗಿ ಭವಿಷ್ಯ ನಿಧಿ ಅಡಿಯಲ್ಲಿ PF ಮೊತ್ತವನ್ನು ಭಾಗಶಃ ಹಿಂಪಡೆಯಲು ನಿಗಧಿತ ಮೊತ್ತ 50,000 ರೂಪಾಯಿ ತನಕ ಇತ್ತು. ವೈದ್ಯಕೀಯ ಸೌಲಭ್ಯ ಪಡೆಯುವ ಕಾರಣಕ್ಕೆ ಹಣ ವಾಪಾಸ್ಸು ಪಡೆಯಬಹುದು. ಆದರೆ ಈಗ ಈ ಮಿತಿಯನ್ನು 50,000 ರೂ ನಿಂದ 1 ಲಕ್ಷ ರೂಪಾಯಿ ತನಕ ಏರಿಕೆ ಮಾಡಲಾಗಿದೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡುವುದಕ್ಕಾಗಿ EPFO ಸಂಸ್ಥೆಯು ಸುತ್ತೋಲೆಯಲ್ಲಿ ಎಪ್ರಿಲ್ 16 ಇದರ ಬಗ್ಗೆ ಅಧಿಕೃತ ಆದೇಶ ನೀಡಲಾಗಿದೆ.
ಪಿಂಚಣಿ ಮೊತ್ತ ವಾಪಾಸ್ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಅಂಶಗಳು ಬದಲಾವಣೆ ಮಾಡಲಾಗಿದೆ. 2010 ಎಪ್ರಿಲ್ 10ರಂದು ಅಪ್ಲಿಕೇಶನ್ ಸಾಫ್ಟ್ವೇರ್ ನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇದಕ್ಕೆ ಭವಿಷ್ಯ ನಿಧಿ ಆಯುಕ್ತರಿಂದ ಅನುಮತಿ ಕೂಡ ಸಿಕ್ಕಿದೆ. ಹಾಗಾಗಿ ಜನರ ಭವಿಷ್ಯ ನಿಧಿ ಹಣವನ್ನು ಹಲವಾರು ಉದ್ದೇಶಕ್ಕೆ ಹಿಂಪಡೆಯುವ ಸಲುವಾಗಿ ಫಾರ್ಮ್ 31ರಲ್ಲಿ ಭವಿಷ್ಯ ನಿಧಿ ಹಣ ಹಿಂಪಡೆಯುವ ಹಕ್ಕನ್ನು ಉಲ್ಲೇಖಿಸಲಾಗುತ್ತಿದ್ದು ಅದರ ಪ್ರಕಾರ ಅಗತ್ಯ ಬದಲಾವಣೆ ಮಾಡಿ ಆಯುಕ್ತರಿಂದ ಅನುಮತಿಯನ್ನು ಪಡೆದಿದೆ.
ಅನಾರೋಗ್ಯ ಎಂಬ ಸುಳ್ಳು ಕಾರಣ ಹೇಳಿ ನೆಪವೊಡ್ಡಿ ಹಣ ಪಡೆಯುವಂತಿಲ್ಲ ಅದರ ಬದಲು ಸೂಕ್ತ ದಾಖಲೆ ಕೂಡ ಅಗತ್ಯ. ಅನಾರೋಗ್ಯ ಎಂಬುದೇ ಆಗಿದ್ದರೆ ವೈದ್ಯಕೀಯ ದಾಖಲೆ ಜೊತೆ ಡಾಕ್ಟರ್ ಸಹಿ ಹೊಂದಿರುವುದು ಕಡ್ಡಾಯವಾಗಿದೆ. ಫಾರ್ಮ್ 31ರ ಅನ್ವಯ ಉದ್ಯೋಗಿ ಅಥವಾ ಚಂದಾದಾರರ ಸಹಿ ಜೊತೆಗೆ ವೈದ್ಯರ ಸಹಿ ಕೂಡ ಅಗತ್ಯವಾಗಿ ಇರಲೇಬೇಕು. ಈ ಮೂಲಕ ಬದಲಾವಣೆ ಅನೇಕ ಆರೋಗ್ಯ ಸಂಬಂಧಿತ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ EPFO ಯೋಜನೆಯಿಂದ ಹಣಕಾಸಿನ ನೆರವಾಗಲಿದೆ.
ಇತರೆ ವಿಷಯಗಳು:
ಗ್ಯಾಸ್ ಸಬ್ಸಿಡಿ ಡಬಲ್! ಹಣ ಖಾತೆಗೆ ಜಮಾ ಆಗಲು ಈ ಕೆಲಸ ಕಡ್ಡಾಯ
ಭಾರಿ ಏರಿಕೆಯ ನಂತರ ಇಂದಿನಿಂದ ಇಳಿಕೆಯತ್ತಾ ಚಿನ್ನ!!