ಹಲೋ ಸ್ನೇಹಿತರೇ, ಆಸ್ತಿ ನೋಂದಣಿ ಮಾಡಲು ದಾಖಲೆಗಳನ್ನು ಪೇಪರ್ ಮೂಲಕ ಸಲ್ಲಿಸಬೇಕಾಗಿತ್ತು ಆದರೆ ಈಗ ಪೇಪರ್ ಆಧಾರಿತ ಆಸ್ತಿ ನೋಂದಣಿ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಈಗ ಎಲ್ಲಾ ನೋಂದಣಿಯನ್ನು digital ಮೂಲಕ ಮಾಡಬೇಕಿದೆ, ಹೇಗೆ ಮಾಡುವುದು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಕಡ್ಡಾಯವಾಗಿ ಎಲ್ಲಾ ಆಸ್ತಿ ನೋಂದಣಿಗಳನ್ನು ಈಗ digital ಮೂಲಕ (ಇ-ನೋಂದಣಿ) ಮಾಡಲೇಬೇಕು. ಪೇಪರ್ಗಳಲ್ಲಿ ನೋಂದಣಿ ಮಾಡುತ್ತಿರುವುದು ಸರ್ಕಾರಕ್ಕೆ ಹೆಚ್ಚು ನಷ್ಟವಾಗುತ್ತಿದೆ. ಈ ಹೊಸ ರೂಲ್ಸ್ ವಿಧಾಸಭೆಯಲ್ಲಿ ಅಂಗೀಕಾರವಾಗಿದೆ. ಇನ್ನು ಮುಂದೆ ನಿಮ್ಮ ಚಿರಾಸ್ಥಿಯಾ ನೋಂದಣಿಯನ್ನು ಕಡ್ಡಾಯವಾಗಿ ಇ- ನೋಂದಣಿ ಮಾಡಬೇಕಾಗಿದೆ.
Contents
ಏನಿದು ಇ – ನೋಂದಣಿ ಪ್ರಕ್ರಿಯೆ?:
ಎಲ್ಲಾ ಕ್ಷೇತ್ರದಲ್ಲಿ ಈಗ digital ವ್ಯವಸ್ಥೆ ಬಂದಿದೆ. ಇದು digital ವ್ಯವಸ್ಥೆಗೆ ಹೊಸ ಸೇರ್ಪಡೆಯಾಗಿದೆ. ಮನೆ, ಭೂಮಿ / ಇತರ ಆಸ್ತಿಗಳ ನೋಂದಣಿಯನ್ನು digital ವೇದಿಕೆಯಲ್ಲಿ ಮಾಡುವ ಒಂದು ವ್ಯವಸ್ಥೆಯಾಗಿದ್ದು. ಈ ವ್ಯವಸ್ಥೆಯು ಪಾರದರ್ಶಕತೆ & ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಕಾವೇರಿ ತಂತ್ರಾಂಶಗಳಲ್ಲಿ ಅಟೋಮ್ಯಾಟಿಕ್ ಆಗಿ ನಗರಸಭೆ ವ್ಯಾಪ್ತಿಯ ಡೇಟಾ ಬೇಸ್ ಚೆಕ್ ಆಗಿದ್ದರೆ ಮಾತ್ರ ಇ – ನೋಂದಣಿಯಲ್ಲಿ ನಿಮ್ಮ ಆಸ್ತಿಯ ನೋಂದಣಿಯಾಗಲಿದೆ.
ಈ ಯೋಜನೆಯ ಉದ್ದೇಶಗಳು ಏನು?
ವ್ಯವಸ್ಥೆಯಲ್ಲಿ ಇರುವ ಭ್ರಷ್ಟಾಚಾರ & ವಂಚನೆಯನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶಗಳಿಂದ ಹೊಸ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಇ-ನೋಂದಣಿ ಪ್ರಕ್ರಿಯೆಯು ಹೆಚ್ಚು ಪಾರದರ್ಶಕ & ದಕ್ಷವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿದೆ. ಪೇಪರ್ ಮೂಲಕ ನೋಂದಣಿಯಾಗಿರುವ ಪ್ರತಿಯನ್ನು ಕಳೆದುಕೊಳ್ಳುವ ಸಂಭವವಿದ್ದು. ಈಗ ಇ-ನೋಂದಣಿ ದಾಖಲೆ ಮಾಡುವುದರಿಂದ ಕಳೆದುಕೊಳ್ಳುವ ಅಪಾಯಗಳು ಸಾಕಷ್ಟು ಕಡಿಮೆಯಾಗುತ್ತದೆ. ಪೇಪರ್ ನೋಂದಣಿ ಮಾಡಿಸುವ ಸಲುವಾಗಿ ನಾಗರಿಕರು ಹತ್ತಾರು ಬಾರಿ ಇಲಾಖೆಗಳಿಗೆ ಹೋಗಿ ನೋಂದಣಿ ಮಾಡಿಸಬೇಕಿತ್ತು ಅದನ್ನು ತಪ್ಪಿಸಿ ನಾಗರಿಕರಿಗೆ ಸುಲಭವಾಗಿ ನೋಂದಣಿ ಪ್ರಕ್ರಿಯೆಯಾಗಲಿದೆ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?:
ಆಸ್ತಿ ನೋಂದಣಿಯನ್ನು ಈಗ ಆನ್ಲೈನ್ನಲ್ಲಿ ಸುಲಭವಾಗಿ ಮಾಡಬಹುದಾಗಿದೆ. ನೀವು ಇ ನೋಂದಣಿ ವೆಬ್ಸೈಟ್ಗೆ ಭೇಟಿ ನೀಡಿ, ನಿಮ್ಮ ಆಸ್ತಿಯ ವಿವರ & ಮೂಲ ದಾಖಲೆಗಳನ್ನು upload ಮಾಡಬಹುದು. ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ಮೇಲೆ ನೋಂದಣಿ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಬೇಕಾಗುತ್ತದೆ. ನಿಮಗೆ ಅನುಕೂಲಕರವಾದ ದಿನಾಂಕ & ಸಮಯವನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆಯಿದೆ. ನೀವು ಆಯ್ಕೆ ಮಾಡಿದ ದಿನಾಂಕದಂದು ನೀವು ಉಪನೋಂದಾಣಿ ಕಚೇರಿಯನ್ನು ಭೇಟಿ ನೀಡಿ, ನಿಮ್ಮ ಭಾವಚಿತ್ರ, ಸಹಿ & ಹೆಬ್ಬೆಟ್ಟಿನ ಗುರುತನ್ನು ನೀಡಿದ ಕೆಲವೇ ನಿಮಿಷದಲ್ಲಿ ನಿಮ್ಮ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ತಿಯಾಗುತ್ತದೆ..
ವ್ಯವಸ್ಥೆಯಲ್ಲಿ ಇನ್ನಷ್ಟು ಪಾರದರ್ಶಕತೆ ಕಾಯ್ದುಕೊಳ್ಳಲು DD ವ್ಯವಸ್ಥೆ ತೆಗೆದುಹಾಕಿ digital ಪಾವತಿ ವ್ಯವಸ್ಥೆ ಅನುಷ್ಠಾನ ಮಾಡಲಾಗಿದೆ.
ಈ ವ್ಯವಸ್ಥೆಯಿಂದ ಕೆಲವು ಜನರಿಗೆ ತೊಂದರೆಯಾಗಬಹುದೇ? :-
- ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ / ತಂತ್ರಜ್ಞಾನವಿಲ್ಲದ ಜನರಿಗೆ ಇ-ಆಸ್ತಿ ವ್ಯವಸ್ಥೆ ಮಾಡಲು ಕಷ್ಟಕರವಾಗಬಹುದು.
- smartphone, ಕಂಪ್ಯೂಟರ್, ಇಂಟರ್ನೆಟ್ಗೆ ಸೌಲಭ್ಯ ಇಲ್ಲದೆ ಇರುವವರಿಗೆ ಇದು ಕಷ್ಟವಾಗಲಿದೆ.
- ಕೆಲವು ಅಧಿಕಾರಿಗಳು ಈ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಜನರಿಂದ ಹಣವನ್ನು ಸುಲಿಗೆ ಮಾಡಬಹುದು.
- ಸೈಬರ್ ಸೆಂಟರ್ಗಳು ಜನರ ವೈಯಕ್ತಿಕ ಮಾಹಿತಿಯನ್ನು ವ್ಯವಸ್ಥೆಯಲ್ಲಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.
- ಈ ಮಾಹಿತಿಯನ್ನು ಕದಿಯಬಹುದು / ಕಾನೂನುಬಾಹಿರ ಕೆಲಸಗಳಿಗೆ ಬಳಸಬಹುದು.
ಇತರೆ ವಿಷಯಗಳು
11,000 ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಅರ್ಹರು! ತಪ್ಪದೆ ಈ ವಿದ್ಯಾರ್ಥಿವೇತನಕ್ಕೆ ಅಪ್ಲೇ ಮಾಡಿ
ನೌಕರರಿಗೆ ಗುಡ್ ನ್ಯೂಸ್: 40 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಡಿಎ ಹೆಚ್ಚಳ!