rtgh

ಜೂನ್ 1ರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ

DL New Rule
Share

ಹಲೋ ಸ್ನೇಹಿತರೇ, ಹೊಸ ನಿಯಮಗಳ ಜಾರಿಬಂದ ನಂತರ, ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆ ಹೆಚ್ಚು ಸುಲಭವಾಗಲಿದೆ ಇನ್ಮುಂದೆ ಹೇಗೆ ಇರಲಿದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆ ಎಂದು ಲೇಖನದಲ್ಲಿ ತಿಳಿಯಿರಿ. .

DL New Rule

ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಯಸುವವರು, ಈಗ ಡ್ರೈವಿಂಗ್ ಲೈಸೆನ್ಸ್ (DL) ಪಡೆಯುವುದು ಮೊದಲಿಗಿಂತ ಹೆಚ್ಚು ಸುಲಭವಾಗಲಿದೆ. ಹೊಸ ನಿಯಮದ ಅನುಷ್ಠಾನದ ನಂತರ,ಡಿಎಲ್ ಮಾಡಿಸುವ ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಿಂದ ಮುಕ್ತಿ ದೊರೆಯಲಿದೆ.ಪ್ರಸ್ತುತ,ಡಿಎಲ್ ಮಾಡಲು, ಕಚೇರಿಗಳಿಗೆ ಭೇಟಿ ನೀಡಿ ಸಾಕಷ್ಟು ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗುತ್ತದೆ.ಈ ಪ್ರಕ್ರಿಯೆಯಲ್ಲಿ ಹಲವಾರು ಬಾರಿ ತಪ್ಪುಗಳಾಗುವುದೂ ಇದೆ. 

ಡಿಎಲ್ ಮಾಡಿಸುವ ಪ್ರಕ್ರಿಯೆ ಹೆಚ್ಚು ಸುಲಭವಾಗಲಿದೆ

ಡಿಎಲ್ ಮಾಡಿಸುವಾಗ ಎದುರಾಗುವ ಸಮಸ್ಯೆಗಳನ್ನು ಹೋಗಲಾಡಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ.ಹೊಸ ನಿಯಮಗಳ ಅನುಷ್ಠಾನದ ನಂತರ,ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯು ಹೆಚ್ಚು ಸುಲಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜೂನ್ 1 ರಿಂದ ಡಿಎಲ್ ನಿಯಮಗಳಲ್ಲಿ ಏನು ಬದಲಾವಣೆ ಮತ್ತು ಇಲಾಖೆಯಿಂದ ಯಾವ ಬದಲಾವಣೆಗಳನ್ನು ಮಾಡಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ. 

ಸರ್ಕಾರಿ ಕಚೇರಿಗಳಲ್ಲಿ ಚಾಲನಾ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ

ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿಗೆ ಸಂಬಂಧಿಸಿದ ರೂಲ್ಸ್ಗಳನ್ನು ಬದಲಾಯಿಸಿದೆ. ಜೂನ್ 1 ರಿಂದ ಜಾರಿಗೆ ತರಲಿರುವ ನಿಯಮಗಳ ಪ್ರಕಾರ ಮುಂದೆ ಸರ್ಕಾರಿ ಕಚೇರಿಗಳಲ್ಲಿ ಡ್ರೈವಿಂಗ್ ಟೆಸ್ಟ್ ನೀಡುವುದಿಲ್ಲ. ನೀವು ಯಾವುದೇ ಖಾಸಗಿ ಡ್ರೈವಿಂಗ್  ಸ್ಕೂಲ್ಗೆ ಹೋಗಿ ಡ್ರೈವಿಂಗ್ ಟೆಸ್ಟ್ ನೀಡಲಾಗುವುದು. ಈ ಡ್ರೈವಿಂಗ್  ಸ್ಕೂಲ್ ಗಳಿಗೆ ಟೆಸ್ಟ್  ತೆಗೆದುಕೊಳ್ಳಲು & ಲೈಸೆನ್ಸ್ ನೀಡುವ ಅಧಿಕಾರ ನೀಡಲಾಗುತ್ತದೆ.

ಕಡಿಮೆ ಪೇಪರ್ ವರ್ಕ್

ಈಗ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೆಚ್ಚು ದಾಖಲೆಯ ಅಗತ್ಯವಿರುವುದಿಲ್ಲ. ಡ್ರೈವಿಂಗ್ ಕಲಿಯಲು ಬಯಸುವ ವಾಹನದ ದಾಖಲೆ ನಿಮ್ಮ ಬಳಿ ಇದ್ದರೆ ಸಾಕು. ಇದರಿಂದ RTO ಕಚೇರಿಗೆ ಭೇಟಿ ನೀಡುವ ಅಗತ್ಯ ಕಡಿಮೆಯಾಗಲಿದೆ.

ಡ್ರೈವಿಂಗ್ ಸ್ಕೂಲ್ ಗೆ ಅಗತ್ಯ ನಿಯಮಗಳು

ಡ್ರೈವಿಂಗ್ ಸ್ಕೂಲ್ ಬಳಿ ಕನಿಷ್ಠ 1 ಎಕರೆ ಜಮೀನು ಇರಬೇಕು. ಇದಲ್ಲದೇ 4 ಚಕ್ರದ ವಾಹನಗಳ ತರಬೇತಿಗಾಗಿ 2 ಎಕರೆ ಜಮೀನಿನ ಅವಶ್ಯಕತೆಯಿದೆ. ಡ್ರೈವಿಂಗ್ ಸ್ಕೂಲ್ ನಲ್ಲಿ ಡ್ರೈವಿಂಗ್ ಟೆಸ್ಟ್ ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಚಾಲನಾ ತರಬೇತಿ ನೀಡುವ ವ್ಯಕ್ತಿ 10ನೇ ತರಗತಿ ಪ್ರಮಾಣಪತ್ರ & 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ಬಯೋಮೆಟ್ರಿಕ್ಸ್ & ಚಾಲನೆಯಲ್ಲಿರುವ IT ವ್ಯವಸ್ಥೆಗಳ ಜ್ಞಾನವನ್ನು ಹೊಂದಿರಬೇಕು.

ಚಾಲನಾ ಸಮಯ

4 ವಾರಗಳಲ್ಲಿ ಮಿನಿ ವೆಹಿಕಲ್ಸ್ (LMV) ಗಾಗಿ 29 ಗಂಟೆಗಳ ತರಬೇತಿ, ಇದು 8 ಗಂಟೆಗಳ ಥಿಯೇರಿ & 21 ಗಂಟೆಗಳ ಪ್ರಾಕ್ಟಿಕಲ್ ಚಾಲನಾ ತರಬೇತಿಯನ್ನು ಒಳಗೊಂಡಿರುತ್ತದೆ. ಆದರೆ ದೊಡ್ಡ ವಾಹನಗಳಿಗೆ (HMV), ಇದು 6 ವಾರಗಳಲ್ಲಿ 38 ಗಂಟೆಗಳ ತರಬೇತಿ & 8 ಗಂಟೆಗಳ ಥಿಯೇರಿ & 31 ಗಂಟೆಗಳ ಪ್ರಾಕ್ಟಿಕಲ್ ತರಬೇತಿಯನ್ನು ಚಾಲನೆಗೆ ಒಳಗೊಂಡಿದೆ. ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ಡ್ರೈವಿಂಗ್ ಕಲಿಯುವ ಹೊಸ ಚಾಲಕರು ಉತ್ತಮ ತರಬೇತಿಯನ್ನು ಪಡೆದು, ರಸ್ತೆಯಲ್ಲಿ ಸುರಕ್ಷಿತವಾಗಿ ಚಾಲನೆ ಮಾಡಬಹುದು ಎನ್ನುವುದನ್ನು  ಖಚಿತಪಡಿಸಿಕೊಳ್ಳಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. 

ಅರ್ಜಿ ಸಲ್ಲಿಸುವುದು ಹೇಗೆ ?

ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಒಂದೇ ಆಗಿರುತ್ತದೆ. https://parivahan.gov.in/ ಮೂಲಕ ಆನ್‌ಲೈನ್ / ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕವು ಪರವಾನಗಿಯ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ಪರವಾನಗಿಯನ್ನು ಅನುಮೋದಿಸಲು ದಾಖಲೆಗಳನ್ನು ಸಲ್ಲಿಸಲು & ಚಾಲನಾ ಕೌಶಲ್ಯವನ್ನು ಪ್ರದರ್ಶಿಸಲು RTO ಕಚೇರಿಗೆ ಭೇಟಿ ನೀಡುವುದು ಈಗಲೂ ಅಗತ್ಯವಾಗಿದೆ.

ಇತರೆ ವಿಷಯಗಳು

ಗಗನಕ್ಕೇರಿದ ತರಕಾರಿಗಳ ಬೆಲೆ; ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ

ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್! 25.5% ವೇತನ ಹೆಚ್ಚಳ ಬಹುತೇಕ ಫಿಕ್ಸ್


Share

Leave a Reply

Your email address will not be published. Required fields are marked *