rtgh
Headlines

13 ಲಕ್ಷ ರೈತರಿಗೆ 1,400 ಕೋಟಿ ಬೆಳೆ ವಿಮೆ ಪರಿಹಾರ ವರ್ಗಾವಣೆ.! ಈ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ

crop insurance
Share

ಹಲೋ ಸ್ನೇಹಿತರೇ, 2023-24 ನೇ ಸಾಲಿನ ಪಸಲ್ ಭೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿ ತಮ್ಮ ಬೆಳೆಗಳಿಗೆ ಬೆಳೆ ವಿಮೆ ಮಾಡಿಕೊಂಡ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರದ ವರ್ಗಾವಣೆಯ ಕುರಿತು ಕೃಷಿ ಸಚಿವರು ನೀಡಿರುವ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಏನೆಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಮತ್ತು ಬೆಳೆ ವಿಮೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

crop insurance

ಪಸಲ್ ಬೀಮಾ ಯೋಜನೆ ಅಡಿಯಲ್ಲಿ ತಾವು ಬೆಳೆದಿರುವ ಬೆಳೆ ವಿಮೆಗಾಗಿ ಈ ವರ್ಷ ಸುಮಾರು 25 ಲಕ್ಷ ಜನ ರೈತರು ಹೆಸರು ನೋಂದಾಯಿಸಿಕೊಂಡು ಮಾರ್ಚ್-2024 ತಿಂಗಳ ಅಂತ್ಯದ ವೇಳೆಗೆ 13 ಲಕ್ಷ ರೈತರಿಗೆ 1,400 ಕೋಟಿ ಹಣವನ್ನು ಬೆಳೆ ವಿಮೆ ವರ್ಗಾಹಿಸಲಾಗುತ್ತದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಮಾಹಿತಿ ತಿಳಿಸಿದ್ದಾರೆ.

ನಾಗಮಂಗಲ ತಾಲೂಕಿನಲ್ಲಿ ನಡೆದ ಸವಲತ್ತು ವಿತರಣಾ ಸಮಾವೇಶ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಂದು ಅಧ್ಯಕ್ಷತೆ ವಹಿಸಿ ಮಾತನಾಡಿರುವ ಅವರು, ಬೆಳೆ ವಿಮೆಗಾಗಿ ಪ್ರಸ್ತುತ 8 ಲಕ್ಷ ರೈತರಿಗೆ 600 ಕೋಟಿ ವಿಮೆ ಹಣ ಜಮೆಯಾಗಿದೆ. ಉಳಿದ 800 ಕೋಟಿ ರೂ. ಮಾರ್ಚ್ ಅಂತ್ಯದೊಳಗೆ ಜಮೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ರೈತರು ತಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಅರ್ಜಿ ಸ್ಥಿತಿ, ಹಣ ಜಮಾ ವಿವರ ಎಲ್ಲಾ ಮಾಹಿತಿ ತಿಳಿಯಿರಿ.

ರಾಜ್ಯ ಸರ್ಕಾರದ ಸಂರಕ್ಷಣೆ ಅಧಿಕೃತ ವೆಬ್ಸೈಟ್ ಭೇಟಿ ನೀಡಿ (https://samrakshane.karnataka.gov.in). ಬೆಳೆ ವಿಮೆ ಅರ್ಜಿ ಕುರಿತು ಈ ಕೆಳಗಿನ ವಿಧಾನವನ್ನು ಅನುಸರಿಸಿ ಎಲ್ಲಾ ಮಾಹಿತಿಯನ್ನು ತಿಳಿಯಿರಿ.

Step-1:  ಈ Bele vime status check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸಂರಕ್ಷಣೆ ಜಾಲತಾಣವನ್ನು ಭೇಟಿ ಮಾಡಿ. ನಂತರ ಇಲ್ಲಿ “ವರ್ಷದ ಆಯ್ಕೆ / Select Insurance Year” 2023-24 ಎಂದು ವರ್ಷ ಆಯ್ಕೆ ಮಾಡಿಕೊಳ್ಳಿ “ಋತು ಆಯ್ಕೆ / Select Insurance Season” ಕಾಲಂ “Kharif” ಎಂದು ಆಯ್ಕೆ ಮಾಡಿಕೊಳ್ಳಿ “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಿ.

Step-2: ನಂತರ ಈ ಪೇಜ್ ನಲ್ಲಿ ಕೆಳಗಡೆ ಕಾಣುವ “Check Status” ಬಟನ್ ಕ್ಲಿಕ್ ಮಾಡಿ Check Status By Type ಆಯ್ಕೆ ವಿಭಾಗ “Mobile No” ಎಂದು ಟಿಕ್ ಮಾಡಿಕೊಂಡು ಅರ್ಜಿದಾರರ ಮೊಬೈಲ್ ನಂಬರ್‌ನ್ನು ಹಾಕಬೇಕು / ಆಧಾರ್ ಕಾರ್ಡ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಆಧಾರ್ ನಂಬರ್‌ನ್ನು ಹಾಕಬಹುದು.

ಮೊಬೈಲ್ ಸಂಖ್ಯೆಯನ್ನು ಹಾಕಿದ ನಂತರ ಕ್ಯಾಪ್ಚ್ ಕೋಡ್ ಅನ್ನು ಹಾಕಿ Search ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ವಿವರ ಕೆಳಗಡೆ ನೀಡಲಾಗುತ್ತದೆ.

Step-3: ನಂತರ ಇಲ್ಲಿ “Select” button ಮೇಲೆ ಕ್ಲಿಕ್ ಮಾಡಿದ್ರೆ ನೀವು ಸಲ್ಲಿಸಿರುವ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ..

Proposal Status: ಈ ವಿಭಾಗದಲ್ಲಿ ನಿಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತೋರಿಸುತ್ತದೆ.

UTR Details: ವಿಭಾಗದಲ್ಲಿ ನಿಮಗೆ ಬೆಳೆ ವಿಮೆ ಪರಿಹಾರ ಜಮಾ ಆಗಿದ್ರೆ ಯಾವ ದಿನ ಜಮೆ ಆಗಿದೆ? ಎಷ್ಟು ಮೊತ್ತ? UTR ನಂಬರ್ ವಿವರಗಳನ್ನು ತೋರಿಸುತ್ತದೆ.

“View Details” ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಸರ್ವೆ ನಂಬರ್ ಸಹಿತ ಬೆಳೆ ವಿಮೆ ಅರ್ಜಿ ಮಾಹಿತಿ ಪಡೆಯಬಹುದು.

ಬೆಳೆ ವಿಮೆ ಅರ್ಜಿ ಸ್ಥಿತಿ ಚೆಕ್ ಮಾಡಿ: Crop insurance status check
ಸಂರಕ್ಷಣೆಯ ಅಧಿಕೃತ ವೆಬ್ಸೈಟ್: Click here

ಇತರೆ ವಿಷಯಗಳು

ಇ-ಶ್ರಮ್ ಕಾರ್ಡ್ ಹೊಸ ಕಂತು ಬಿಡುಗಡೆ! ಹಣ ಪಾವತಿ ಸ್ಥಿತಿಯನ್ನು ಕುಳಿತಲ್ಲಿಯೇ ಚೆಕ್‌ ಮಾಡಿ

PPF, SSY, NPSಗಳಲ್ಲಿ ಖಾತೆ ಇದಿಯಾ? ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದಲ್ಲಿ ಆಗಲಿದೆ ದೊಡ್ಡ ನಷ್ಟ


Share

Leave a Reply

Your email address will not be published. Required fields are marked *