rtgh
Headlines

ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಬಂತಾ.? ಈ ಜಿಲ್ಲೆಯವರಿಗೆ ಇಂದು ಬಿಡುಗಡೆ

Crop insurance claim
Share

ಹಲೋ ಸ್ನೇಹಿತರೇ, 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರದ ಮೊತ್ತವನ್ನು ವಿಮಾ ಕಂಪನಿಯಿಂದ ರೈತರ ಖಾತೆಗೆ ವರ್ಗಾಯಿಸಲಾಗಿದೆ. ಯಾವ ಯಾವ ಜಿಲ್ಲೆಯ ರೈತರಿಗೆ ಹಣವನ್ನು ವರ್ಗಾಯಿಸಲಾಗಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

Crop insurance claim

ತೀರ್ವ ಬರಗಾಲ ಎದುರಿಸುತ್ತಿರುವ ರೈತರಿಗೆ ಅಲ್ಲದೇ ಬಂಡವಾಳ ಹಾಕಿ ಬೆಳೆದಿರುವ ಬೆಳೆಯಿಂದ ಬಂಡವಾಳದ ಹಣ ಸಹ ಬರದೇ ಇದ್ದಂತಹ ಸನ್ನಿವೇಶದಲ್ಲಿ ರಾಜ್ಯ ಕೆಲವೊಂದು ಜಿಲ್ಲೆಯ ರೈತರಿಗೆ ಅರ್ಥಿಕವಾಗಿ ಸಹಾಯ ನೀಡಲು 2023-24 ನೇ ಸಾಲಿನ ಅಂದರೆ ಈ ವರ್ಷದ ಮುಂಗಾರಿ ಹಂಗಾಮಿನ ಬೆಳೆ ವಿಮೆ ಪರಿಹಾರದ ಹಣವನ್ನು ವಿಮಾ ಕಂಪನಿ ತನ್ನ ರೈತರ ಖಾತೆಗೆ ವರ್ಗಾಯಿಸಿದೆ.

ರೈತರು ತಮ್ಮ ಮೊಬೈಲ್‌ನಲ್ಲಿಯೇ ಬೆಳೆ ವಿಮೆ ಅರ್ಜಿ ವಿವರ & ಬೆಳೆ ವಿಮೆ ಪರಿಹಾರದ ಹಣ ಎಷ್ಟು ಜಮೆಯಾಗಿದೆ? ಹಾಗೂ ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಈ ಲೇಖನದಲ್ಲಿ ತಿಳಿಯಿರಿ.

ಯಾವೆಲ್ಲಾ ಬೆಳೆಗಳಿಗೆ ವಿಮೆ ಪಾವತಿಸಲಾಗುವುದು?

ಮೆಕ್ಕೆಜೋಳ, ಶೇಂಗಾ & ಆಯಾ ಪ್ರದೇಶದ ಬಹುಮುಖ್ಯ ಬೆಳೆಗಳಿಗೆ ಬೆಳೆ ವಿಮೆ ಪರಿಹಾರದ ಹಣ ಪಾವತಿಯನ್ನು ರೈತರ ಖಾತೆಗೆ ವರ್ಗಾವಣೆ ಮಾಡುವ ಕೆಲಸವನ್ನು ವಿಮಾ ಕಂಪನಿಗಳು  ಮಾಡುತ್ತಿವೆ.

ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! 

ಅಧಿಕೃತ ಮಾಹಿತಿಯ ಪ್ರಕಾರ ಚಿತ್ರದುರ್ಗ & ದಾವಣೆಗೆರೆ ಜಿಲ್ಲೆಯ ಕೆಲವು ತಾಲ್ಲೂಕಿಗಳಲ್ಲಿ ರೈತರ ಖಾತೆಗೆ ಬೆಳೆ ವಿಮಾ ಹಣ ಜಮಾ ಮಾಡಲಾಗಿದೆ ಬೆಳೆ ನಷ್ಟುದ ಪ್ರಮಾಣದ ಆಧಾರದ ಮೇಲೆ ಮಾರ್ಗಸೂಚಿ ಅನ್ವಯ ಇತರೆ ಜಿಲ್ಲೆಗಳಲ್ಲಿಯೂ ಬೆಳೆ ವಿಮೆ ಅರ್ಜಿ ವಿಲೇವಾರಿಯನ್ನು ಇಲಾಖೆ & ವಿಮಾ ಕಂಪನಿಗಳಿಂದ ಮಾಡಲಾಗುತ್ತಿದೆ.

ನಿಮ್ಮ ಖಾತೆಗೆ ಬೆಳೆ ವಿಮೆ ಪರಿಹಾರ ಹಣ ಬಂತಾ ಚೆಕ್ ಮಾಡಿ!

ರೈತರು ಯಾವುದೇ ಕಚೇರಿ ಅಲೆದಾಡದೆ ತಮ್ಮ ಮೊಬೈಲ್‌ನಲ್ಲಿಯೇ ಬೆಳೆ ವಿಮೆ ಹಣ ಜಮೆಯಾಗಿದಿಯಾ? ಇಲ್ವಾ? ಎಂದು ಚೆಕ್ ಮಾಡಿಕೊಳ್ಳಬಹುದು ಜೊತೆಗೆ ಬೆಳೆ ವಿಮೆ ಅರ್ಜಿಯು ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಬಹುದು.

Step-1: ಪ್ರಥಮದಲ್ಲಿ ಈ ಲಿಂಕ್ bele vime status ಮೇಲೆ ಕ್ಲಿಕ್ ಮಾಡಿ ರಾಜ್ಯ ಸರ್ಕಾರದ ಬೆಳೆ ವಿಮೆ ಅರ್ಜಿ ವಿಲೇವಾರಿಯ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಭೇಟಿ ಮಾಡಬೇಕು. ನಂತರ ವರ್ಷ”2023-24″ ಎಂದು ಋತು? ಆಯ್ಕೆ ಮುಂಗಾರು ಎಂದು ಕ್ಲಿಕ್ ಮಾಡಿ.

Step-2: ಮೇಲಿನ ಹಂತಗಳನ್ನು ಪೂರ್ತಿಗೊಳಿಸಿದ ನಂತರ ಈ ಪುಟದಲ್ಲಿ ಕೆಳಗಡೆ Farmers ಕಾಲಂನಲ್ಲಿ ಕಾಣುವ  “Crop Insurance Details On Survey no” ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ ನಿಮ್ಮ ಜಿಲ್ಲೆ, ಹೋಬಳಿ, ತಾಲ್ಲೂಕು, ಗ್ರಾಮ, ಜಮೀನಿನ ಸರ್ವೆ ನಂಬರ್ ಹಾಕಿ “Search” button ಮೇಲೆ ಕ್ಲಿಕ್ ಮಾಡಿ. ಆಗ ಸರ್ವೆ ಸಂಬರ್ ನಲ್ಲಿ ಲಭ್ಯವಿರುವ ಹಿಸ್ಸಾ ನಂಬರ್ ತೋರಿಸುತ್ತದೆ ಒಂದೊದರ ಮೇಲೆ ಕ್ಲಿಕ್ ಮಾಡಿದಾಗ ಆ ಸರ್ವೆ ನಂಬರ್‌ನ ಬೆಳೆ ವಿಮೆ ಅರ್ಜಿ ನಂಬರ್ ತೋರಿಸುತ್ತದೆ ಅದನ್ನು ಒಂದು ಕಡೆ ಬರೆಯಿರಿ.

Step-4: ಮೇಲಿನ ಎಲ್ಲಾ ವಿಧಾನ ಅನುಸರಿಸಿ ಅರ್ಜಿ ನಂಬರ್ ತೆಗೆದುಕೊಂಡ ನಂತರ ಅದೇ ಪೇಜ್ ನ ಮೇಲೆ ಬಲಬದಿಯಲ್ಲಿ ಕಾಣುವ “Home” ಬಟನ್ ಮೇಲೆ ಕ್ಲಿಕ್ ಮಾಡಿ “check status” ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.

Step-5: ಈ ಪುಟದಲ್ಲಿ ಅರ್ಜಿ ನಂಬರ್ & ಕ್ಯಾಪ್ಚರ್ ಕೋಡ್ ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಕೆಳಗೆ ಅರ್ಜಿಯ ವಿವರ & ಮಧ್ಯಂತರ ಬೆಳೆ ವಿಮೆ ಜಮೆ ವಿವರ ಕಾಣಿಸುತ್ತದೆ. ಎಷ್ಟು ಹಣ ಜಮೆಯಾಗಿದೆ? ಯಾವ ದಿನಾಂಕ? ಬ್ಯಾಂಕ್ ಖಾತೆ ವಿವರವನ್ನು ತಿಳಿಯಬಹುದು.

ಬೆಳೆ ವಿಮೆ ಮೊತ್ತದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: Click here

ಇತರೆ ವಿಷಯಗಳು

ಪಿಂಚಣಿ ಪಾವತಿ ಸ್ಟೇಟಸ್: ಪಿಂಚಣಿದಾರರಿಗೆ ಸಿಕ್ತು ಭರ್ಜರಿ ಸಿಹಿ ಸುದ್ದಿ!!

ನೌಕರರ ಮೂಲ ವೇತನಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟ್!


Share

Leave a Reply

Your email address will not be published. Required fields are marked *