rtgh
Headlines

ಅಡುಗೆ ಎಣ್ಣೆ ದರ ದಿಢೀರ್ 25 ರೂ ಏರಿಕೆ.! ಈ ಎಣ್ಣೆಗೆಲ್ಲಾ ಎಷ್ಟು ರೇಟ್ ಗೊತ್ತಾ?

cooking oil price increase
Share

ಹಲೋ ಗೆಳೆಯರೇ, ಪೆಟ್ರೋಲ್, ಡಿಸೇಲ್ ನಂತರ ಇದೀಗ ಜನತೆಗೆ ಅಡುಗೆ ಎಣ್ಣೆ ದರ ಏರಿಕೆ ಶಾಕ್ ಸಿಕ್ಕಿದೆ. ಹಬ್ಬಗಳ ನಡುವೆಯೇ ಅಡುಗೆ ಎಣ್ಣೆ ದರ ಏರಿಕೆಯಾಗಿದೆ. ಎಷ್ಟು ಏರಿಕೆಯಾಗಿದೆ ಮತ್ತು ಯಾವ ಯಾವ ಎಣ್ಣೆ ಬೆಲೆ ಎಷ್ಟಾಗಿದೆ ಎಂಬ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಯಿರಿ.   

cooking oil price increase

ಬೆಂಗಳೂರು : ಸಾಲು ಸಾಲು ಹಬ್ಬಗಳು ಮುಂದಿವೆ. ದಸರಾ, ದೀಪಾವಳಿ ಹೀಗೆ ಹಬ್ಬದ ಸಂಭ್ರಮದಲ್ಲಿರುವ ಮನೆ ಮಹಿಳೆಯರಿಗೆ ಭಾರೀ ಶಾಕ್ ಸಿಕ್ಕಿದೆ. ಅಡುಗೆ ಎಣ್ಣೆ ದರ ಏರಿಕೆ ಮಾಡಿ ಆದೇಶ ಹೊರಬಿದ್ದಿದೆ. ರಾಜ್ಯದಲ್ಲಿ ಒಂದಾರ ಮೇಲೊಂದರಂತೆ ಜನರಿಗೆ  ಬೆಲೆ ಏರಿಕೆ ಶಾಕ್ ನೀಡುತ್ತಿದೆ.  

ಕಳೆದೊಂದು ವಾರದಿಂದ ಹಾವು ಏಣಿಯಾಟ ಆಡುತ್ತಿರುವ ಅಡುಗೆ ಎಣ್ಣೆ ದರ ಈಗ ದಿಢೀರ್ ಆಗಿ ಗಗನಕ್ಕೇರಿದೆ. ಪಾಮ್ ಆಯಿಲ್, ಸೋಯಾಬಿನ್ ಎಣ್ಣೆ ಹಾಗೂ ಸೂರ್ಯಕಾಂತಿ ರಿಫೈಂಡ್ ಆಯಿಲ್ ದರ ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಈ ರೀತಿ ಅಡುಗೆ ಎಣ್ಣೆ ದರವನ್ನು ಇಷ್ಟು ದುಬಾರಿ ಮಟ್ಟಕ್ಕೆ ಏರಿಸುವ ಬಗ್ಗೆ ಗ್ರಾಹಕರು ಹಾಗೂ ಹೋಟೆಲ್‌ ಉದ್ಯಮಿಗಳು  ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ದಿನಕ್ಕೆ 9 ಗಂಟೆ ನಿದ್ದೆ ಮಾಡಬೇಕು ಅಷ್ಟೇ! 10 ಲಕ್ಷ ನೀಡುತ್ತೆ ಈ ಕಂಪನಿ

ಮೊದಲು ಪೆಟ್ರೋಲ್‌, ಡೀಸೆಲ್‌ ಈಗ ಈಗ ಅಡುಗೆ ಎಣ್ಣೆಯ ಬೆಲೆಯನ್ನು ಕೂಡಾ ದಿಢೀರ್ ಏರಿಸಲಾಗಿದೆ. ದಸರಾ, ದೀಪಾವಳಿ ಸೇರಿ ಸರಣಿ ಹಬ್ಬಗಳ ಸಂಭ್ರಮದಲ್ಲಿದ್ದ ಜನತೆ ಈ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಅಡುಗೆ ಎಣ್ಣೆ ದರವನ್ನು ಲೀಟರ್ ಗೆ 20ರಿಂದ 25 ರೂ.ಗೆ ಏರಿಕೆ ಮಾಡಲಾಗಿದೆ. 

ಅಡುಗೆ ಎಣ್ಣೆಯು ಈಗಾಗಲೇ GST ವ್ಯಾಪ್ತಿಗೆ ಸೇರಿದೆ. ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನ ಅಡುಗೆ ಎಣ್ಣೆ ದರ ಇನ್ನ ಹೆಚ್ಚಾಗುತ್ತಾ ಅನ್ನೋ ಆತಂಕ ಸಾರ್ವಜನಿಕರನ್ನು ಕಾಡಲಿದೆ. 

ಇತರೆ ವಿಷಯಗಳು

ಹಣಕಾಸು ಸಚಿವರ ಒಂದೇ ಘೋಷಣೆ ಚಿನ್ನದ ಬೆಲೆ ಪಾತಾಳಕ್ಕೆ.! ಖರೀದಿಗೆ ಮುಗಿ ಬಿದ್ದ ಜನ

ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10th, 12th ಪಾಸಾದ ಮಹಿಳೆಯರು ಅರ್ಜಿ ಹಾಕಿ


Share

Leave a Reply

Your email address will not be published. Required fields are marked *