rtgh

ಮಾರ್ಚ್‌ 01 ರಿಂದಲೇ ಗ್ರಾಹಕರಿಗೆ ಶಾಕ್! ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25.50 ರೂ. ಏರಿಕೆ

commercial cylinder price
Share

ಹಲೋ ಸ್ನೇಹಿತರೇ, ಸಿಲಿಂಡರ್‌ನ ಬೆಲೆ ಏರಿಕೆಯು ಅನೇಕರನ್ನು ಬ್ರಮೆಗೊಳಿಸಿದೆ, ವಿಶೇಷವಾಗಿ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದವರಿಗೆ ಇಂದು ಆಘಾತ ಉಂಟಾಗಿದೆ, LPG ಸಿಲಿಂಡರ್ ಗ್ಯಾಸ್ ಬೆಲೆಯನ್ನು ಹೆಚ್ಚಿಸಲಾಗಿದ್ದು, ಹೊಸ ಬೆಲೆ ಕೂಡಲೇ ಜಾರಿಗೆ ಬರಲಿದೆ ಜಾರಿಗೆ ಬರಲಿದೆ. ಹೊಸ ಬೆಲೆಯನ್ನು ಇಲ್ಲಿ ತಿಳಿಯಿರಿ.

commercial cylinder price

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), & ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಕಂಪನಿಗಳು ಹಿಂದಿನ ತಿಂಗಳ ಸರಾಸರಿ ಅಂತರರಾಷ್ಟ್ರೀಯ ದರವನ್ನು ಆಧರಿಸಿ ಪ್ರತಿ ತಿಂಗಳ 1ನೇಯ ದಿನದಂದು ಅಡುಗೆ ಅನಿಲ & ATF ಬೆಲೆಗಳನ್ನು ಪರಿಷ್ಕರಿಸುತ್ತವೆ. ಗಮನಾರ್ಹವಾಗಿ ಸತತ 3ನೇ ತಿಂಗಳು ಸಹ ವಾಣಿಜ್ಯ LPG ದರದಲ್ಲಿ ಏರಿಕೆ ಕಂಡುಬಂದಿದೆ. 

ತೈಲ-ಮಾರ್ಕೆಟಿಂಗ್ ಕಂಪನಿಗಳು (OMC) ಮಾರ್ಚ್ ತಿಂಗಳ 1ನೇ ದಿನವೇ ಗ್ರಾಹಕರಿಗೆ ಶಾಕ್ ನೀಡಿದ್ದು, 01 ಮಾರ್ಚ್ 2024ರಿಂದ ಜಾರಿಗೆ ಬರುವಂತೆ 19 KG ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ಗಳ ದರದಲ್ಲಿ 25.50 ರೂ. ಹೆಚ್ಚಳವನ್ನು ಘೋಷಿಸಿದೆ. ಗಮನಾರ್ಹವಾಗಿ ಸತತ 3ನೇ ತಿಂಗಳು ಸಹ ವಾಣಿಜ್ಯ LPG ದರದಲ್ಲಿ ಹೆಚ್ಚಳ ಕಂಡು ಬಂದಿದೆ. ವಾಣಿಜ್ಯ LPG ಸಿಲಿಂಡರ್‌ಗಳ ಜೊತೆಗೆ ವಿಮಾನ ಇಂಧನದ ಬೆಲೆಯೂ ಹೆಚ್ಚಿಗೆಯಾಗಿದೆ. 

ಸತತ 3ನೇ ತಿಂಗಳು ಏರಿಕೆ ಕಂಡ ವಾಣಿಜ್ಯ ಸಿಲಿಂಡರ್ ದರ: 
ವಾಣಿಜ್ಯ ದರದಲ್ಲಿ ಸತತ 3ನೇ ತಿಂಗಳು ಹೆಚ್ಚಳ ಕಂಡು ಬಂದಿದೆ. 2024ರ ಫೆಬ್ರವರಿ ತಿಂಗಳಿನಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್‌ನ ದರವನ್ನು 14ರೂ. ಏರಿಸಲಾಗಿತ್ತು. ಇದಕ್ಕೂ ಮೊದಲು 01 ಜನವರಿ 2024ರಂದು 19 KG ವಾಣಿಜ್ಯ LPG ಸಿಲಿಂಡರ್‌ನ ಬೆಲೆ 1.50 ರೂ.ಏರಿಕೆ ಮಾಡಲಾಗಿತ್ತು. ಇದೀಗ ಇಂದಿನಿಂದ LPG ಸಿಲಿಂಡರ್‌ನ ಬೆಲೆಯನ್ನು ಒಮ್ಮೆಗೆ 25.50 ರೂ.ಏರಿಸಲಾಗಿದೆ. 

ಹೊಸ ದರಗಳ ಬಳಿಕ ವಾಣಿಜ್ಯ LPG ಸಿಲಿಂಡರ್‌ನ ದರ ದೆಹಲಿಯಲ್ಲಿ 1795 ರೂ., ಕೋಲ್ಕತ್ತಾ 1911 ರೂ., ಮುಂಬೈ 1749 ರೂ. & ಚೆನ್ನೈನಲ್ಲಿ 1960 ರೂ.. 

ಗೃಹಬಳಕೆಯ ಅನಿಲ ದರದಲ್ಲಿಲ್ಲ ಯಾವುದೇ ಬದಲಾವಣೆ: 
ಇದೆಲ್ಲಾ ಆಗಿಯೂ ನೆಮ್ಮದಿಯ ಸುದ್ದಿ ಎಂದರೆ,  ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ LPG ಸಿಲಿಂಡರ್‌ಗಳ ಬೆಲೆ 905.50 ರೂ.ಗಳಾಗಿದೆ. 

ಇತರೆ ವಿಷಯಗಳು

ರೈತರಿಗೆ ರೂ. 24,420 ಕೋಟಿ ಸಹಾಯಧನ.!ರಸಗೊಬ್ಬರಕ್ಕೆ ಕೇಂದ್ರದಿಂದ ಬೃಹತ್‌ ರಿಯಾಯಿತಿ

1ನೇ ತರಗತಿ ಪ್ರವೇಶಕ್ಕೆ ಹೊಸ ನಿಯಮ ಜಾರಿ.! ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಸೂಚನೆ


Share

Leave a Reply

Your email address will not be published. Required fields are marked *