ಹಲೋ ಸ್ನೇಹಿತರೇ, ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ, ಇದೀಗ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಆಕ್ಟಿವ್ ಮಾಡಲಾಗಿದೆ. ಹುದ್ದೆಗೆ ಅರ್ಜಿ ಹಾಕುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ಆಫೀಸ್‌ಗಳಲ್ಲಿ ಅಸಿಸ್ಟಂಟ್ ಸೆಕ್ರೇಟರಿ, ಲೆಕ್ಕಿಗ ಅಧಿಕಾರಿ, ಜೂನಿಯರ್ ಇಂಜಿನಿಯರ್ ಮತ್ತು ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್, ಅಕೌಂಟಂಟ್, ಜೂನಿಯರ್ ಅಕೌಂಟಂಟ್ ಹುದ್ದೆಗಳಿಗೆ ಇತ್ತೀಚೆಗೆ ಅಧಿಸೂಚಿಸಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್ ಈಗ ನೀಡಲಾಗಿದೆ.
ಉದ್ಯೋಗ ಇಲಾಖೆ : ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ
ಹುದ್ದೆಗಳ ಸಂಖ್ಯೆ : 118
ಅರ್ಜಿ ಹಾಕುವ ವಿಧಾನ
– CBSE ಹುದ್ದೆಗಳಲ್ಲಿ ಆಸಕ್ತಿ ಇರುವವರು ‘Apply Online ‘ ಲಿಂಕ್ ಕ್ಲಿಕ್ ಮಾಡಿ.
– ನಂತರ ತೆರೆದ ವೆಬ್‌ಪೇಜ್‌ನಲ್ಲಿ ‘New Registration’ ಎನ್ನುವುದರ ಮೇಲೆ ಕ್ಲಿಕ್ ಮಾಡಿ.
– ಕೇಳಲಾದ ಮಾಹಿತಿಗಳನ್ನು (ಇಮೇಲ್ ವಿಳಾಸ, ಹೆಸರು, ಮೊಬೈಲ್ ಸಂಖ್ಯೆ, ಇತರೆ) ನೀಡಿ ರಿಜಿಸ್ಟ್ರೇಷನ್ ಪಡೆದುಕೊಳ್ಳಿ.
– ನಂತರ ಮತ್ತೆ ಲಾಗಿನ್ ಆಗುವ ಮೂಲಕ ಹುದ್ದೆಯನ್ನು ಆಯ್ಕೆ ಮಾಡಿ ಅರ್ಜಿ ಹಾಕಿ.
– ಅರ್ಜಿಯನ್ನು ಮುಂದಿನ ರೆಫರೆನ್ಸ್‌ಗಾಗಿ Print ತೆಗೆದುಕೊಳ್ಳಿ.
ಅರ್ಜಿ ಹಾಕಲು SSLC ಅಂಕಪಟ್ಟಿ, ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜಾತಿ & ಆದಾಯ ಪ್ರಮಾಣ ಪತ್ರ, ಇತರೆ ದಾಖಲೆಗಳು ಅಗತ್ಯವಾಗಿರುತ್ತದೆ.
ಹುದ್ದೆಗಳ ವಿವರ
ಸಹಾಯಕ ಕಾರ್ಯದರ್ಶಿ (ತರಬೇತಿ) : 22
ಸಹಾಯಕ ಕಾರ್ಯದರ್ಶಿ (ಆಡಳಿತ ವಿಭಾಗ ) : 18
ಸಹಾಯಕ ಕಾರ್ಯದರ್ಶಿ (ಶೈಕ್ಷಣಿಕ ವಿಭಾಗ ) : 16
ಸಹಾಯಕ ಕಾರ್ಯದರ್ಶಿ (ಕೌಶಲ ಶಿಕ್ಷಣ ) : 08
ಲೆಕ್ಕಿಗ ಅಧಿಕಾರಿ : 03
ಕಿರಿಯ ಅಭಿಯಂತರರು : 17
ಕಿರಿಯ ಭಾಷಾಂತರ ಅಧಿಕಾರಿ : 07
ಅಕೌಂಟಂಟ್ : 07
ಜೂನಿಯರ್ ಅಕೌಂಟಂಟ್ : 20
ಆನ್‌ಲೈನ್ ಅಪ್ಲಿಕೇಶನ್ ಆರಂಭಿಕ ದಿನಾಂಕ: 12-03-2024
ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆ ದಿನಾಂಕ: 11-04-2024
ಅಸಿಸ್ಟಂಟ್ ಸೆಕ್ರೇಟರಿ ಹುದ್ದೆಗಳು ಗ್ರೂಪ್ A ಹುದ್ದೆಗಳಾಗಿದ್ದು ವೇತನ ಶ್ರೇಣಿ – 10 ಇರುತ್ತದೆ. ಲೆಕ್ಕಿಗ ಪೋಸ್ಟ್ ಗ್ರೂಪ್ C ಹುದ್ದೆಗಳಾಗಿದ್ದು, ಇವರಿಗೆ ಪೇ ಲೆವಲ್ -4 / ಪೇ ಲೆವೆಲ್ 2 ಸಂಭಾವನೆ ಸಿಗುತ್ತದೆ. ಜೂನಿಯರ್ ಇಂಜಿನಿಯರ್ / ಭಾಷಾಂತರ ಅಧಿಕಾರಿ ಗ್ರೂಪ್ B ಹುದ್ದೆಗಳಾಗಿದ್ದು ಪೇ ಲೆವೆಲ್ 6 ಸಂಭಾವನೆ ಇರುತ್ತದೆ.
ಇತರೆ ವಿಷಯಗಳು
ಎಲ್ಲಾ ಹೆಣ್ಣು ಮಕ್ಕಳಿಗೆ 1 ಲಕ್ಷ ರೂಪಾಯಿ ಉಚಿತ!! ಭಾಗ್ಯಶ್ರೀ ಯೋಜನೆ
ಎಲ್ಲಾ ಹೆಣ್ಣು ಮಗುವಿಗೆ ಬರುತ್ತೆ ಬರೋಬ್ಬರಿ 1 ಲಕ್ಷ ರೂಪಾಯಿ!! ಭಾಗ್ಯಲಕ್ಷ್ಮಿ ಬಾಂಡ್