ಹಲೋ ಸ್ನೇಹಿತರೇ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಿ ಉದ್ಯೋಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಿ.
ಕೇಂದ್ರ ಪ್ರೌಢಶಿಕ್ಷಣ ಮಂಡಳಿ ತನ್ನ ಕಚೇರಿಯಲ್ಲಿ ಅಗತ್ಯವಿರುವ ಅಸಿಸ್ಟಂಟ್ ಸೆಕ್ರೇಟರಿ (ಆಡಳಿತ ವಿಭಾಗ), ಅಸಿಸ್ಟಂಟ್ ಸೆಕ್ರೇಟರಿ (ಶೈಕ್ಷಣಿಕ ವಿಭಾಗ), ಜೂನಿಯರ್ ಇಂಜಿನಿಯರ್, ಲೆಕ್ಕಿಗ, ಇತರೆ ಪೋಸ್ಟ್‌ನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿದವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ವಿವರ
- ಅಸಿಸ್ಟಂಟ್ ಸೆಕ್ರೇಟರಿ – ಆಡಳಿತ ವಿಭಾಗ : 18
- ಅಸಿಸ್ಟಂಟ್ ಸೆಕ್ರೇಟರಿ – ಶೈಕ್ಷಣಿಕ ವಿಭಾಗ : 16
- ಅಸಿಸ್ಟಂಟ್ ಸೆಕ್ರೇಟರಿ – ಕೌಶಲ ಶಿಕ್ಷಣ : 08
- ಅಸಿಸ್ಟಂಟ್ ಸೆಕ್ರೇಟರಿ – ತರಬೇತಿ: 22
- ಲೆಕ್ಕಿಗ ಅಧಿಕಾರಿ: 03
- ಜೂನಿಯರ್ ಇಂಜಿನಿಯರ್ ಹುದ್ದೆ : 17
- ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ ಹುದ್ದೆ : 07
- ಅಕೌಂಟಂಟ್ ಹುದ್ದೆ : 07
- ಜೂನಿಯರ್ ಅಕೌಂಟಂಟ್ ಹುದ್ದೆ : 20
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 12-03-2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 11-04-2024
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ ವಿಳಾಸ https://www.cbse.gov.in/ ಕ್ಕೆ ಭೇಟಿ ನೀಡಿ. Career Section ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು SSLC ಅಂಕಪಟ್ಟಿ, ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆಗಳು, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜಾತಿ & ಆದಾಯ ಪ್ರಮಾಣ ಪತ್ರ, ಇತರೆ ದಾಖಲಾತಿಗಳು ಅಗತ್ಯವಿದೆ. ಆನ್‌ಲೈನ್ ಅರ್ಜಿ ಲಿಂಕ್‌ನ್ನು ಮಾರ್ಚ್ 12 ರಂದು ಬಿಡುಗಡೆ ಮಾಡುವ ಕಾರಣ, ಡೀಟೇಲ್ಡ್ ನೋಟಿಫಿಕೇಶನ್ ಅನ್ನು ಅಂದೇ CBSE ಬಿಡುಗಡೆ ಮಾಡಲಿದೆ. ಅದರಲ್ಲಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ.
ಅಸಿಸ್ಟಂಟ್ ಸೆಕ್ರೇಟರಿ ಹುದ್ದೆಗಳು ಗ್ರೂಪ್A ಹುದ್ದೆಯಾಗಿದ್ದು ವೇತನ ಶ್ರೇಣಿ – 10 ಸಂಭಾವನೆ ಇರುತ್ತದೆ. ಲೆಕ್ಕಿಗ ಹುದ್ದೆಗಳು ಗ್ರೂಪ್ C ಹುದ್ದೆಯಾಗಿದ್ದು, ಇವರಿಗೆ ಪೇ ಲೆವಲ್ -4 / ಪೇ ಲೆವೆಲ್ 2 ಸಂಭಾವನೆ ಇರುತ್ತದೆ. ಜೂನಿಯರ್ ಇಂಜಿನಿಯರ್ / ಭಾಷಾಂತರ ಅಧಿಕಾರಿ ಗ್ರೂಪ್B ಹುದ್ದೆಯಾಗಿದ್ದು ಪೇ ಲೆವೆಲ್ 6 ಸಂಭಾವನೆ ಇರುತ್ತದೆ.
ಇತರೆ ವಿಷಯಗಳು
ಇನ್ಮುಂದೆ ಪೇಪರ್ ಆಧಾರಿತ ಆಸ್ತಿ ನೋಂದಣಿ ಕ್ಯಾನ್ಸಲ್; ಇ-ಆಸ್ತಿ ನೋಂದಣಿ ಕಡ್ಡಾಯಗೊಳಿಸಿದ ಸರ್ಕಾರ
ಫಲಾನುಭವಿಗಳ ಖಾತೆಗೆ 1 ಲಕ್ಷ! PM ವಿಶ್ವಕರ್ಮ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ