rtgh

ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ.! ಯಾವುದೇ ಪದವಿ ಪಾಸಾಗಿದ್ರು 3000 ಹುದ್ದೆಗಳಿಗೆ ಅರ್ಜಿ ಹಾಕಿ

canara bank recruitment kannada
Share

ಹಲೋ ಸ್ನೇಹಿತರೇ, ಯಾವುದೇ ಪದವಿ ಪಾಸ್‌ ಮಾಡಿದ್ದು, ನೀವೇನಾದ್ರು ಬ್ಯಾಂಕ್‌ನಲ್ಲಿ ಉದ್ಯೋಗ ಮಾಡಲು, ಬ್ಯಾಂಕ್‌ ಸೆಕ್ಟಾರ್‌ನಲ್ಲಿ ಕರಿಯರ್ ಪ್ರಾರಂಭಿಸಲು ಆಸಕ್ತಿ ಹೊಂದಿದ್ರೆ.. ಭರ್ಜರಿ ಆಫರ್. ಕೆನರಾ ಬ್ಯಾಂಕ್‌ ಬರೋಬರಿ 3000 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

canara bank recruitment kannada

ಬೆಂಗಳೂರಿನಲ್ಲಿ ಹೆಡ್‌ ಆಫೀಸ್‌ ಹೊಂದಿರುವ, ಸಾರ್ವಜನಿಕ ಕ್ಷೇತ್ರದ ಪ್ರಮುಖ ಬ್ಯಾಂಕ್‌ ಕೆನರಾ ಬ್ಯಾಂಕ್‌ ಈಗ 2024-25ನೇ ಸಾಲಿಗೆ 3000 ಗ್ರಾಜುಯೇಟ್ ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. 1961 ಆಕ್ಟ್‌ ಅಪ್ರೆಂಟಿಸ್ ಕಾಯ್ದೆಗಳ ಅಡಿ ಈ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇವು 1 ವರ್ಷದ ತರಬೇತಿ ಆಧಾರಿತ ಹುದ್ದೆಗಳಾಗಿದೆ. ಕೆನರಾ ಬ್ಯಾಂಕ್‌ ಒಟ್ಟಾರೆ 9600 ಶಾಖೆಗಳನ್ನು ಹೊಂದಿದೆ. ಈ ಬ್ಯಾಂಕ್‌ನಲ್ಲಿ ಕೆಲಸ ಮಾಡಲು, ಬ್ಯಾಂಕಿಂಗ್ work experiance ಪಡೆಯಲು ಇಚ್ಚಿಸುವ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗಳಿಗೆ ಎಲ್ಲ ರೀತಿಯ ಅರ್ಹತೆಗಳನ್ನು ದಿನಾಂಕ 01-09-2024 ಕ್ಕೆ ಪರಿಗಣಿಸಲಾಗುವುದು ಎಂದು ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿದೆ.

ಉದ್ಯೋಗ ಬ್ಯಾಂಕ್ಕೆನರಾ ಬ್ಯಾಂಕ್.
ಹುದ್ದೆಗಳ ಹೆಸರುಗ್ರಾಜುಯೇಟ್ ಅಪ್ರೆಂಟಿಸ್.
ಹುದ್ದೆಗಳ ಸಂಖ್ಯೆ3000
ಹುದ್ದೆಯ ಅವಧಿ2024-25ನೇ ಸಾಲಿಗೆ 1 ವರ್ಷ ಮಾತ್ರ.

ವಿದ್ಯಾರ್ಹತೆ, ವಯಸ್ಸಿನ ಅರ್ಹತೆಗಳು

  • ಯಾವುದೇ ಅಂಗೀಕೃತ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳಿಂದ ಯಾವುದೇ ಪದವಿ ಪಾಸ್‌ ಮಾಡಿರಬೇಕು.
  • ದಿನಾಂಕ 01-09-2024 ಕ್ಕೆ ಕನಿಷ್ಠ 20 ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 21-09-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-10-2024

ಹುದ್ದೆಯ ಕುರಿತ ಅಧಿಸೂಚನೆ ಓದಲು www.canarabank.com ಗೆ ಭೇಟಿ ನೀಡಿ.
‘Carees >> Recruitment >> Engagement of Graduate Apprentice in Canara Bank Under Apprentices Act, 1961 for FY 2024-25’ಲಿಂಕ್‌ ಕ್ಲಿಕ್ ಮಾಡಿ.

ಅಪ್ಲಿಕೇಶನ್‌ ಶುಲ್ಕ ರೂ. 300.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಶುಲ್ಕವನ್ನು ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಇಂಟರ್ನೆಟ್‌ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಸ್ಟೈಫಂಡ್

ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ ರೂ.15000 ನೀಡಲಾಗುತ್ತದೆ.

ನೇಮಕಾತಿ ವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2 ಹಂತದ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಹಾಗೂ ಸ್ಥಳೀಯ ಭಾಷಾ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.

ಹುದ್ದೆಗಳ ಅವಧಿ 1 ವರ್ಷ ಮಾತ್ರವಾಗಿದ್ದು, ನಂತರ ಹುದ್ದೆಯ ಮೇಲೆ ಯಾವುದೇ ಹಕ್ಕು ಚಲಾಯಿವಂತಿಲ್ಲ. ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಪದವಿ ಅಂಕಪಟ್ಟಿ, ಜನ್ಮ ದಿನಾಂಕ ದಾಖಲೆಗಳು, ಇತರೆ ವಿವರಗಳು ಬೇಕಾಗುತ್ತವೆ.

ಇತರೆ ವಿಷಯಗಳು

ಮಹಿಳಾ ಇಲಾಖೆ ಆದೇಶ.! ಈ 5 ಯೋಜನೆಗಳ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

ಅಡುಗೆ ಎಣ್ಣೆ ದರ ದಿಢೀರ್ 25 ರೂ ಏರಿಕೆ.! ಈ ಎಣ್ಣೆಗೆಲ್ಲಾ ಎಷ್ಟು ರೇಟ್ ಗೊತ್ತಾ?


Share

Leave a Reply

Your email address will not be published. Required fields are marked *