ಹಲೋ ಸ್ನೇಹಿತರೇ, ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಬಿಯರ್ ಬೆಲೆಯಲ್ಲಿ ಏರಿಕೆಯನ್ನು ಕಂಪನಿಗಳು ಪ್ರಕಟಿಸಿವೆ. ಈ ನಿಟ್ಟಿನಲ್ಲಿ ಕಳೆದ ೧೭ ತಿಂಗಳಲ್ಲಿ ಬಿಯರ್ ಬೆಲೆ 60 ರೂಪಾಯಿಯಷ್ಟು ಏರಿಕೆ ಕಂಡಿದೆ.
ಬೆಂಗಳೂರು : ಕಳೆದ 17 ತಿಂಗಳಲ್ಲಿ ಐದನೇ ಸಲ ಬಿಯರ್ ಬೆಲೆ ಏರಿಕೆಯಾಗಿದೆ. ಇದೀಗ ಮತ್ತೆ 10ರಿಂದ 20 ರೂಪಾಯಿವರೆಗೆ ಬಿಯರ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಬಿಯರ್ ದರ ಏರಿಕೆ ಮಾಡಲು ಕಂಪನಿಗಳು ತೀರ್ಮಾನ ಮಾಡುವ ಮೂಲಕ ಬಿಯರ್ ಪ್ರಿಯರಿಗೆ ಶಾಕ್ ನೀಡಿದೆ.
ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ದರ ಏರಿಕೆ ಮಾಡಿದ್ದ ಕಂಪನಿಗಳು ಹೊಸ ದರ ಜಾರಿಗೆ ತಂದಿತ್ತು. ಇದೀಗ ಮತ್ತೆ ಕಚ್ಚಾ ವಸ್ತುಗಳ ದರ ಏರಿಕೆ ಕಾರಣವೊಡ್ಡಿ ದರ ಏರಿಕೆ ಮಾಡುವ ತೀರ್ಮಾನಕ್ಕೆ ಬಂದಿವೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಬಿಯರ್ ದರ ಸುಮಾರು 60 ರೂಪಾಯಿವರೆಗೆ ಏರಿಕೆಯಾಗಿದೆ.
ಮದ್ಯ ಪ್ರಿಯರಿಗೆ ಬಿಯರ್ ಬರೆ :
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಸರಕಾರ ಬಿಯರ್ ಮೇಲೆ ಶೇ.20 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಇದರಿಂದ ಬಿಯರ್ ದರ ಅಂದು ಏರಿಕೆಯಾಗಿತ್ತು. ನಂತರ ಬಿಯರ್ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ದವು. ಇದಾದ ನಂತರ ಮತ್ತೆ ಸರ್ಕಾರ ಬಿಯರ್ ಮೇಲಿನ ಸುಂಕ ಹೆಚ್ಚಳ ಮಾಡಿತ್ತು. ಈ ಹಿನ್ನೆಲಯಲ್ಲಿ ಫೆಬ್ರವರಿಯಲ್ಲಿ ಬಿಯರ್ ದರ ಮತ್ತೆ ಏರಿಕೆ ಕಂಡಿತ್ತು.
ಇದೀಗ ಮತ್ತೆ ಬಿಯರ್ ದರ ಏರಿಕೆಗೆ ಕಂಪನಿಗಳು ತೀರ್ಮಾನ ಮಾಡಿವೆ. ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 60 ವರೆಗೆ ಹೆಚ್ಚಳವಾದಂತಾಗಿದೆ.
ಇತರೆ ವಿಷಯಗಳು
ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್! ನೆರೆ ಪರಿಹಾರಕ್ಕೆ 777 ಕೋಟಿ ಹಣ ಬಿಡುಗಡೆ
ಈ ಜಿಲ್ಲೆಯ ಮಹಿಳೆಯರಿಗೆ ನಾಳೆಯೇ ಖಾತೆಗೆ ₹4,000 ಜಮಾ