ಹಲೋ ಸ್ನೇಹಿತರೇ, ಜೂನ್ ತಿಂಗಳಿನ 11ನೇ ಕಂತು ಮತ್ತು ಜುಲೈ ತಿಂಗಳ 12ನೇ ಕಂತಿನ ಹಣ ಇನ್ನು ಸಹ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಹಣ ಜಮಾ ಆಗಲು ವಿಳಂಬವಾಗಿದ್ದು ಎಂದು ತಿಳಿಸಲಾಗಿದೆ. ಈಗ ಒಟ್ಟಿಗೆ ಹಣ ಹಾಕುವುದಾಗಿ ತಿಳಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತಂದ ಯೋಜನೆಯೇ ʼಗೃಹಲಕ್ಷ್ಮಿʼ ಯೋಜನೆ. ಈ ಯೋಜನೆಯ ಮೂಲಕ ಮನೆ ನಡೆಸಿಕೊಂಡು ಹೋಗುತ್ತಿರುವ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2000ಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನೆಯಡಿ ಸುಮಾರು 1.18 ಕೋಟಿ ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ 10 ತಿಂಗಳುಗಳಿಂದ ಈ ಯೋಜನೆಯ ಹಣ ಬಹುತೇಕ ಮಹಿಳೆಯರನ್ನು ತಲುಪಿದೆ.gruha lakshmi yojana
ಆದರೆ ಜೂನ್ ತಿಂಗಳಿನ 11ನೇ ಕಂತು ಹಾಗೂ ಜುಲೈ ತಿಂಗಳ 12ನೇ ಕಂತಿನ ಹಣ ಇನ್ನು ಸಹ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಹಣ ಜಮಾ ಆಗಲು ವಿಳಂಬವಾಗಿದೆ ಎಂದು ಹೇಳಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆದು ಮೇ ತಿಂಗಳಿನಲ್ಲಿ ಫಲಿತಾಂಶ ಸಹ ಹೊರಬಂದಿತು. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗುವುದರಲ್ಲಿ ತಡವಾಗಿದೆ ಅಂತಾ ಹೇಳಲಾಗಿದೆ.
ಈ ಬಗ್ಗೆ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೊದಲ ಹಂತದಲ್ಲಿ 11 ಮತ್ತು 12ನೇ ಕಂತಿನ ಹಣ ನಾಳೆಯೇ ಕೆಲ ಜಿಲ್ಲೆಯ ಮಹಿಳೆಯರಿಗೆ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ. ಜುಲೈ ತಿಂಗಳು ಮುಗಿಯುವುದರೊಳಗೆ ರಾಜ್ಯದ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಒಟ್ಟಾಗಿ ಅಂದರೆ ₹4000 ಡಿಬಿಟಿ ಮೂಲಕ ವರ್ಗಾವಣೆ ಆಗಲಿದೆ ಎಂದು ಹೇಳಿದ್ದಾರೆ.
ಈ ಜಿಲ್ಲೆಯ ಮಹಿಳೆಯರಿಗೆ ನಾಳೆಯೇ ಬಿಡುಗಡೆ
ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ಧಾರವಾಡ, ಮಂಡ್ಯ, ಮೈಸೂರು, ಚಿಕ್ಕ ಬಳ್ಳಾಪುರ ಇವಿಷ್ಟು ಜಿಲ್ಲೆಗಳ ಮಹಿಳೆಯರಿಗೆ ನಾಳೆಯೇ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಎಲ್ಲಾ ಮಹಿಳೆಯರು ಸಹ ನಾಳೆ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ಹಣ ಬರದಿದ್ದರೆ ಯೋಜನೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಇತರೆ ವಿಷಯಗಳು
ಆಗಸ್ಟ್ 1 ರಿಂದ ಈ ಹೊಸ ನಿಯಮಗಳು! ಏನೆಲ್ಲಾ ಬದಲಾಗಲಿದೆ ಗೊತ್ತ?
ಮಳೆಯಿಂದಾದ ನಷ್ಟಕ್ಕೆ 775 ಕೋಟಿ ಅನುದಾನ.! ತಕ್ಷಣ ಪರಿಹಾರಕ್ಕೆ ಈ ಕಚೇರಿಗೆ ಬೇಟಿ ನೀಡಿ