rtgh

ಬಳ್ಳಾರಿ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.! PUC ಪಾಸಾಗಿದ್ರೆ ಅಪ್ಲೇ ಮಾಡಿ

ballari district court recruitment
Share

ಹಲೋ ಸ್ನೇಹಿತರೇ, ದ್ವಿತೀಯ PUC ಪಾಸಾಗಿದಿಯಾ? ಸರ್ಕಾರಿ ಉದ್ಯೋಗ ಬೇಕೇ? ಹಾಗಿದ್ರೆ ಇಲ್ಲಿದೆ ನೋಡಿ ಉದ್ಯೋಗಾವಕಾಶ. ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಬೇರೆ ಬೇರೆ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಪ್ಲೇ ಮಾಡಿ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ballari district court recruitment

ಬಳ್ಳಾರಿ ಜಿಲ್ಲಾ ನ್ಯಾಯಾಂಗ ಘಟಕದ ವಿವಿಧ ನ್ಯಾಯಾಲಯದಲ್ಲಿ ಉಳಿಕೆ ವೃಂದದಲ್ಲಿ ಖಾಲಿ ಇರುವ 1 ಬೆರಳಚ್ಚುಗಾರ & 01 ಬೆರಳಚ್ಚು ನಕಲುಗಾರ ಹುದ್ದೆಗೆ, ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ 12 ಬೆರಳಚ್ಚುಗಾರ, 7 ಬೆರಳಚ್ಚು ನಕಲುಗಾರರು ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

  • ಬೆರಳಚ್ಚುಗಾರರು : 13
  • ಬೆರಳಚ್ಚು ನಕಲುಗಾರರು : 8

ಬೆರಳಚ್ಚುಗಾರ, ಬೆರಳಚ್ಚು ನಕಲುಗಾರರು ಹುದ್ದೆಗೆ ವಿದ್ಯಾರ್ಹತೆ

  • ದ್ವಿತೀಯ PUC ಉತ್ತೀರ್ಣ ಅಥವಾ
  • 3 ವರ್ಷಗಳ ಡಿಪ್ಲೊಮ ಕಮರ್ಸಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಪಾಸ್ / ತತ್ಸಮಾನ ವಿದ್ಯಾರ್ಹತೆ
  • ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ & ಇಂಗ್ಲಿಷ್ ಬೆರಳಚ್ಚು & ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣತೆ.
  • ಡಿಪ್ಲೊಮ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಪಾಸ್ / ತತ್ಸಮಾನ ವಿದ್ಯಾರ್ಹತೆ.

ವಯಸ್ಸಿನ ಅರ್ಹತೆಗಳು

  • ಯಾವುದೇ ಹುದ್ದೆಗೆ ಅಪ್ಲಿಕೇಶನ್‌ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
  • ಗರಿಷ್ಠ ವಯೋಮಿತಿ ಅರ್ಹತೆಗಳು ಜಾತಿವಾರು ಕೆಳಗಿನಂತಿದೆ.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸು.
  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯಸ್ಸು.
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯಸ್ಸು.

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅಪ್ಲೇ ಮಾಡಲು ಆರಂಭ ದಿನಾಂಕ: 06-04-2024
ಆನ್‌ಲೈನ್‌ ಅಪ್ಲೇ ಮಾಡಲು ಕೊನೆ ದಿನಾಂಕ: 06-05-2024 ರ ರಾತ್ರಿ 11-59 ರವರೆಗೆ.
ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 08-05-2024 ರ ರಾತ್ರಿ 11-59 ರವರೆಗೆ.

ಅರ್ಜಿ ಶುಲ್ಕ ವಿವರ

ಸಾಮಾನ್ಯ ವರ್ಗದವರಿಗೆ ರೂ.250.
2A, 2B, 3A, 3B ವರ್ಗದವರಿಗೆ ರೂ.100.
ST / SE / ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗುತ್ತದೆ.

ವೇತನ ಶ್ರೇಣಿ ವಿವರ

ಬೆರಳಚ್ಚುಗಾರರು: ₹21400-42000.
ಬೆರಳಚ್ಚು ನಕಲುಗಾರರು: ₹21400-42000.

ಇತರೆ ವಿಷಯಗಳು

ಯುಗಾದಿ ನಂತರ ಈ 5 ದಿನಗಳವರೆಗೆ ಬ್ಯಾಂಕ್‌ ಬಂದ್!‌

ಪ್ರತಿ ಏಕರೆಗೆ ₹13000 ರೂ.ಗಳ ಸಹಾಯಧನ! ಖಾತೆಗಳಿಗೆ ಹಣ ಜಮಾ ಮಾಡುವ ಕಾರ್ಯ ಆರಂಭ


Share

Leave a Reply

Your email address will not be published. Required fields are marked *