ಹಲೋ ಸ್ನೇಹಿತರೇ, ಸಾರ್ವಜನಿಕರಿಗೆ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಸಂಬಂಧಪಟ್ಟ ಇಲಾಖೆಯಿಂದ ಅವಕಾಶ ಮಾಡಿಕೊಲಾಗುವುದು, ಆಸಕ್ತ ನಾಗರಿಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆಯಿರಿ.
ಈ ಯೋಜನೆಯಡಿ APL & BPL ಕಾರ್ಡ್ ಹೊಂದಿರುವ 2 ನಾಗರಿಕರು ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಮಾಡಿಸಿಕೊಂಡು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
Contents
ಈ ಯೋಜನೆಯಡಿ ಸಿಗುವ ಪ್ರಯೋಜನಗಳೇನು?
BPL ಪಡಿತರ ಕಾರ್ಡು ಹೊಂದಿರುವವರು ಹಾಗೂ ರಾಷ್ರ್ಟೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ 1 ವರ್ಷಕ್ಕೆ ಆರೋಗ್ಯ ಸಂಬಂಧಿತ ಅಸ್ಪತ್ರೆ ಖರ್ಚಿನಲ್ಲಿ ರೂ.5.00 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.
APL ಕಾರ್ಡುದಾರರು / BPL ಕಾರ್ಡ್ ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ 30% ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿರುತ್ತದೆ, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರಲಿದೆ. ಪಡಿತರ ಚೀಟಿ & ಆಧಾರ್ ಕಾರ್ಡ್ ಹಾಜರುಪಡಿಸಿ ಚಿಕಿತ್ಸೆ ಪಡೆದುಕೊಳ್ಳಬದಾಗಿದೆ.
ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಪಡೆಯಲು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು?
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಎಬಿ-ಎಆರ್ಕೆ ಕಾರ್ಡ್ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ₹10/- ಶುಲ್ಕದೊಂದಿಗೆ ನೀಡಲಾಗುವುದು. ಬೆಂಗಳೂರು ಒನ್ ಕರ್ನಾಟಕ ಒನ್ & ಸೇವ ಸಿಂಧು ಕೇಂದ್ರಗಳಲ್ಲಿ ರೂ. 35/- ಶುಲ್ಕದೊಂದಿಗೆ ಎಬಿ-ಎಆರ್ಕೆ ಕಾರ್ಡ್ ನೀಡಲಾಗುವುದು.
ಕಾರ್ಡ ಪಡೆಯಲು ಬೇಕಾಗುವ ದಾಖಲಾತಿಗಳು:
1) ಅರ್ಜಿದಾರರ ಆಧಾರ್ ಕಾರ್ಡ್(aadhar card)
2) ಕುಟುಂಬದ ಪಡಿತರ ಕಾರ್ಡ್ (ration card)
3) ಮೊಬೈಲ್ ಸಂಖ್ಯೆ (mobile number)
ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ?
ಪ್ರಾಥಮಿಕ & ಸಾಮಾನ್ಯ ದ್ವಿತೀಯ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆ & ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಇಲ್ಲದಿದ್ದರೆ ರೆಫರಲ್ ನೀಡಲಾಗುವುದು. ರೆಫರಲ್ ಪಡೆದುಕೊಂಡ ರೋಗಿಗಳು ತಾವು ಇಚ್ಚಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆಯೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.
ಇತರೆ ವಿಷಯಗಳು
ಮನೆಯ ಪ್ರತಿ ಸದಸ್ಯರಿಗೆ 5 ಲಕ್ಷ ಉಚಿತ ನಗದು.! ಈ ಕಾರ್ಡ್ ಮಾಡಿಸಿಕೊಳ್ಳಲು ಇಂದೇ ಕೊನೆ ಅವಕಾಶ
ಎಲ್ಲಾ ರೈತರಿಗೆ ಸಂತಸದ ಸುದ್ದಿ: ಬಿಡುಗಡೆಯಾಗೇ ಬಿಡ್ತು 16 ನೇ ಕಂತು