rtgh
Headlines

ಈ ತಿಂಗಳ ಅನ್ನಭಾಗ್ಯ ಹಣ ಖಾತೆಗೆ ಬಂತಾ ಚೆಕ್‌ ಮಾಡಿ? ಇಲ್ಲಿದೆ ಡೈರೆಕ್ಟ್ ಲಿಂಕ್

anna bhagya status check
Share

ಹಲೋ ಸ್ನೇಹಿತರೇ, ಬಡತನ ರೇಖೆಗಿಂತ ಕೆಳಗಿರುವವರು ಹಾಗೂ ಕಡು ಬಡವರು ಹಸಿವಿನಿಂದ ಸಾಯಬಾರದು ಎನ್ನುವ ಕಾರಣಕ್ಕೆ ಅಂಥವರಿಗೆ ಉಚಿತ ಪಡಿತರ ವಸ್ತುಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ವಿತರಣೆ ಮಾಡಲಾಯಿತು. ಇದರ ಜೊತೆಗೆ ಸರ್ಕಾರದ ಇತರೆ ಯೋಜನೆಗಳನ್ನು ಪಡೆದುಕೊಳ್ಳಲು ಹಾಗೂ ಸಬ್ಸಿಡಿ ಪಡಿತರ ಪಡೆದುಕೊಳ್ಳಲು ಎಪಿಎಲ್ ಕಾರ್ಡ್ ಕೂಡ ವಿತರಣೆ ಮಾಡಲಾಯಿತು. ಈ APL ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವ ವರ್ಗಕ್ಕಿಂತ ಸ್ವಲ್ಪ ಮೇಲೆ ಇರುವವರು ಅಥವಾ ಮಧ್ಯಮ ವರ್ಗ ಬಳಕೆ ಮಾಡಬಹುದು.

anna bhagya status check

ಇನ್ನು ಈ ಕಾರ್ಡ್ ಗಳು ನಿಮ್ಮ ಬಳಿ ಇದ್ದರೆ ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ ಬಿಪಿಎಲ್ ಹಾಗೂ ಎಎವೈ ಕಾರ್ಡ್ ಇರುವವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿದೆ.

ಬಿಪಿಎಲ್ ಕಾರ್ಡ್ ಇರುವವರು ಇನ್ನೂ 2025 ರವರೆಗೆ 5 ಕೆಜಿ ಉಚಿತ ಅಕ್ಕಿಯನ್ನು ಪಡೆದುಕೊಳ್ಳುತ್ತಾರೆ ಎಂದು ಸರ್ಕಾರ ಈಗಾಗಲೇ ಘೋಷಿಸಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ಕೂಡ ರಾಜ್ಯದಲ್ಲಿ ವಾಸಿಸುವ ಫಲಾನುಭವಿಗಳಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು.

ಅಕ್ಕಿಯ ಬದಲು ಸಿಗುತ್ತೆ ಉಚಿತ ಹಣ:

ಉಚಿತವಾಗಿ ಅಕ್ಕಿ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಹೊಂದಿರುವವರು ಅರ್ಹರು. ಆದರೆ ರಾಜ್ಯ ಸರ್ಕಾರ ತಾನು ಹೇಳಿದಂತೆ 5 ಕೆ.ಜಿ ಉಚಿತ ಅಕ್ಕಿಯನ್ನು ಫಲಾನುಭವಿಗಳಿಗೆ ಕೊಡಲು ಸಾಧ್ಯವಾಗಿಲ್ಲ. ಪ್ರತಿ ತಿಂಗಳು ಸಾವಿರ ಟನ್ ಗಟ್ಟಲೆ ಅಕ್ಕಿ ಒದಗಿಸಲು ಸರ್ಕಾರಕ್ಕೆ ಆಗದೆ ಇರುವ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳ ಹಿಂದೆಯೇ ಅಕ್ಕಿಯ ಬದಲು ಹಣ ನೀಡುತ್ತೇವೆ, ಯಾವಾಗ ಅಕ್ಕಿ ಸಂಗ್ರಹವಾಗುತ್ತದೆಯೋ ಆಗ ಮತ್ತೆ ಉಚಿತವಾಗಿ ಅಕ್ಕಿ ನೀಡಲು ಆರಂಭಿಸುತ್ತೇವೆ ಎಂದು ಸರ್ಕಾರ ತಿಳಿಸಿತ್ತು. ಅದೇ ರೀತಿ 34 ರೂಪಾಯಿ ಪ್ರತಿ ಕೆಜಿಗೆ ಅಂದರೆ 5 ಕೆಜಿಗೆ 170ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ.

ಇದನ್ನೂ ಸಹ ಓದಿ : ರೈಲ್ವೆಯಲ್ಲಿ ಖಾಲಿ ಇರುವ 733 ಹುದ್ದೆಗಳ ನೇಮಕಾತಿ: ಆಸಕ್ತ ಅಭ್ಯರ್ಥಿಗಳು ತಡ ಮಾಡದೇ ಅಪ್ಲೇ ಮಾಡಿ

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದ್ಯ ಚೆಕ್ ಮಾಡಿ:

  • ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದ್ಯಾ ಅಂತ ಚೆಕ್ ಮಾಡುವುದಕ್ಕೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/lpg/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮಗೆ ಮೂರು ಲಿಂಕ್‌ಗಳು ಕಾಣಿಸುತ್ತವೆ. ಆ ಲಿಂಕ್ ಗಳ ಕೆಳಗೆ ಇರುವ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಅದರ ಮೇಲ್ಭಾಗದಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಕ್ಯಾಪ್ಚ ಸಂಖ್ಯೆ ನಮೂದಿಸಿ ಯಾವ ತಿಂಗಳಿನಲ್ಲಿ ಜಮಾ ಆಗಿರುವ ಹಣದ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಆ ತಿಂಗಳನ್ನು ಆಯ್ಕೆ ಮಾಡಿ ಗೋ ಎಂದು ಕೊಡಿ.

ಈಗ ನಿಮ್ಮ ಬ್ಯಾಂಕ್ ಖಾತೆಯ ವಿವರ ಮನೆಯ ಸದಸ್ಯರ ಸಂಖ್ಯೆ ಎಷ್ಟು ಹಣ ಜಮಾ ಆಗಿದೆ ಎನ್ನುವ ಪ್ರತಿಯೊಂದು ವಿವರವನ್ನು ಕೂಡ ನೀವು ಕಾಣಬಹುದು. ಏಳನೇ ಕಂತಿನ ಹಣ ಈಗಷ್ಟೇ ಬಿಡುಗಡೆ ಆಗಿದ್ದು ಒಂದು ವೇಳೆ ನಿಮ್ಮ ಖಾತೆಯಲ್ಲಿ ಪಾವತಿ ಪ್ರಗತಿಯಲ್ಲಿದೆ ಅಂತ ತೋರಿಸಿದರೆ ಚಿಂತೆ ಮಾಡುವ ಅಗತ್ಯವಿಲ್ಲ. ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಏಳನೇ ಕಂತಿನ ಹಣವು ಕೂಡ ಬಂದು ಸೇರುತ್ತದೆ.

ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಆಹ್ವಾನ:

ಸರ್ಕಾರ ಈಗಾಗಲೇ ತಿಳಿಸಿರುವಂತೆ ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ನೀವು ಬಯಸಿದರೆ ಏಪ್ರಿಲ್ ಒಂದರಿಂದ ಅವಕಾಶ ಇದೆ, ಅಗತ್ಯ ಇರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸೇವಾ ಕೇಂದ್ರಗಳಲ್ಲಿ ಹೋಗಿ ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಹಾಕಬಹುದು.

ಇತರೆ ವಿಷಯಗಳು:

ಸರ್ಕಾರಿ ನೌಕರರ ಮೂಲ ವೇತನ ಹೆಚ್ಚಳ.! ಎಷ್ಟು ಏರಿಕೆಯಾಗಿದೆ ಗೊತ್ತಾ?

ಸರ್ಕಾರದಿಂದ ‘ನಾರಿ ನ್ಯಾಯ’ ಘೋಷಣೆ! ಮಹಿಳೆಯರಿಗೆ 1 ಲಕ್ಷ ನೀಡುವ ಹೊಸ ಗ್ಯಾರಂಟಿ

ಪಡಿತರ ಚೀಟಿ ಪಡೆಯಲು ಪುನಃ ಅವಕಾಶ! ಇಲ್ಲಿಂದ ಅಪ್ಲೇ ಮಾಡಿ


Share

Leave a Reply

Your email address will not be published. Required fields are marked *