rtgh
Headlines

ರಾಜ್ಯದಲ್ಲಿ ಹೆಚ್ಚಿದ ಕೃಷಿ ಸಾಲದ ಪ್ರಮಾಣ.! ಅಸಲು ಕಟ್ಟಿದ ರೈತರ ಬಡ್ಡಿ ಮನ್ನಾ

agricultural loan
Share

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಈ ಬಾರಿ ವ್ಯಾಪಕ ಬರಗಾಲ. ಇದರಿಂದ ರೈತರಿಗೆ ಆರ್ಥಿಕ ಮುಗ್ಗಟ್ಟು ಹೆಚ್ಚಾಗಿದೆ, ಕೃಷಿ ಚಟುವಟಿಕೆಯನ್ನು ನಿಭಾಯಿಸಲು ಹೆಚ್ಚಾಗಿ ಸಾಲದ ಮೊರೆ ಹೋಗುತ್ತಿದ್ದಾರೆ. ಇದರಿಂದ ಕೃಷಿ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. 2022-23ರಲ್ಲಿ ರಾಜ್ಯಾದ್ಯಂತ ಸುಮಾರು 19 ಲಕ್ಷ ರೈತರು 15,000 ಕೋಟಿ ರೂ.ಗೂ ಹೆಚ್ಚು ಸಾಲವನ್ನು ಪಡೆದಿದ್ದರು. ಇದೀಗ 2023-24ರ ಫೆಬ್ರುವರಿ ಅಂತ್ಯಕ್ಕೆ ರಾಜ್ಯಾದ್ಯಂತ 23 ಲಕ್ಷಕ್ಕೂ ಅಧಿಕ ರೈತರು ಒಟ್ಟು 19,000 ಕೋಟಿ ರೂ. ಹೆಚ್ಚಿನ ಸಾಲ ಪಡೆದಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ..

agricultural loan

ಈಗಾಗಲೇ ಸರಕಾರವು ಶೂನ್ಯ ಬಡ್ಡಿ ದರದಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಾಲವನ್ನು ನೀಡುತ್ತಿದೆ. 2022-23ರಲ್ಲಿ ರಾಜ್ಯಾದ್ಯಂತ ಸುಮಾರು 19 ಲಕ್ಷ ರೈತರು 15,000 ಕೋಟಿ ರೂ.ಗೂ ಅಧಿಕ ಸಾಲ ಪಡೆದಿದ್ದಾರೆ. 2023-24ರ ಫೆಬ್ರುವರಿ ಅಂತ್ಯಕ್ಕೆ ರಾಜ್ಯಾದ್ಯಂತ 23 ಲಕ್ಷಕ್ಕೂ ಅಧಿಕ ರೈತರು ಒಟ್ಟು 19,000 ಕೋಟಿಗೂ ಹೆಚ್ಚು ಸಾಲ ಪಡೆದಿದ್ದಾರೆ. ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸಾಲ ಪಡೆಯುತ್ತಿರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ಪ್ರಕಾಶ್‌ ಮಾಹಿತಿ ನೀಡಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ ಸೇರಿ ನಾನಾ ಸಹಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ದೀರ್ಘಾವಧಿ ಸಾಲಕ್ಕಿಂತ ಮಧ್ಯಮಾವಧಿ ಕೃಷಿ ಸಾಲಕ್ಕೆ ಮೊರೆ ಹೋಗುವಂತಾಗಿದೆ. ಮಧ್ಯಮಾವಧಿ, ದೀರ್ಘಾವಧಿ ಸಾಲದ ಅಸಲು ಕಟ್ಟಿದರೆ ಅದರ ಮೇಲಿನ ಬಡ್ಡಿಯು ಮನ್ನಾ ಮಾಡುವ ಮೂಲಕ ಸರಕಾರಗಳು ರೈತರ ನೆರವಿಗೆ ನಿಲ್ಲಲಿದೆ.

ಯಾವ ಬ್ಯಾಂಕ್‌ಗಳಲ್ಲಿ ಸಾಲ

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
  • ಲ್ಯಾಂಫ್ಸ್‌ ಸಹಕಾರ ಸಂಘ ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು
  • ಪ್ರಾಥಮಿಕ ಸಹಕಾರಿ ಕೃಷಿ & ಗ್ರಾಮೀಣಾಭಿವೃದ್ಧಿ ಬ್ಯಾಂಕ್‌
  • ರಾಷ್ಟ್ರೀಕೃತ ಬ್ಯಾಂಕ್‌

ಎರಡೇ ದಶಕದಲ್ಲಿ 10 ಪಟ್ಟು ಏರಿಕೆ

ವರ್ಷರೈತರುಪಡೆದ ಸಾಲಮನ್ನಾ ಆದ ಬಡ್ಡಿ
2004-056.70 ಲಕ್ಷ1,188 ಕೋಟಿ ರೂ.45 ಕೋಟಿ ರೂ.
2023-2423 ಲಕ್ಷ19,000 ಕೋಟಿ ರೂ.989 ಕೋಟಿ ರೂ.

ಯಾವ ಉದ್ದೇಶಕ್ಕೆ ಸಾಲ ?

ರೈತರಿಗೆ ಬ್ಯಾಂಕ್‌ಗಳು ಒದಗಿಸುವ ಸಾಲದಲ್ಲಿ ಬೆಳೆ ಸಾಲ ಪ್ರಮುಖವಾಗಿದೆ. ಉಳಿದಂತೆ ಅವಧಿ ಸಾಲ, ನಗದು ಸಾಲ, ಅಲ್ಪಾವಧಿ, ಮಧ್ಯಮಾವಧಿ & ದೀರ್ಘಾವಧಿ ಸೇರಿದಂತೆ ನಾನಾ ವರ್ಗದಲ್ಲಿ ಬೇರೆ ಬೇರೆ ರೀತಿಯ ಸಾಲ ಸೌಲಭ್ಯ ಒದಗಿಸಲಾಗುವುದು. ಕೃಷಿಕರ ಬೆಳೆ, ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ, ಗೋದಾಮು, ಫಾರ್ಮ್‌ ಹೌಸ್‌, ಬೇಲಿ ಮತ್ತು ಕೊಳವೆ ಬಾವಿ, ಡ್ರಿಪ್‌ ಇರಿಗೇಷನ್‌ ಪಂಪ್‌ಸೆಟ್‌ ಖರೀದಿ, ಜಮೀನು ಅಭಿವೃದ್ಧಿ ಮುಂತಾದ ನಾನಾ ಉದ್ದೇಶಗಳಿಗಾಗಿ ಸಾಲ ಪಡೆದುಕೊಳ್ಳು ಅವಕಾಶವಿದೆ. ಬಹುತೇಕ ಎಲ್ಲ ಸಾಲಗಳಿಗೆ ಕೃಷಿ ಜಮೀನು ಇಲ್ಲವೇ ಬೆಳೆಯನ್ನು ಆಧಾರವಾಗಿಟ್ಟುಕೊಂಡು ಸಾಲ ನೀಡಲಾಗುತ್ತದೆ. ಅಲ್ಪಾವಧಿ ಸಾಲ 1 ವರ್ಷಕ್ಕೆ ಸೀಮಿತ. ಮಧ್ಯಮಾವಧಿ ಸಾಲವು ಸಾಮಾನ್ಯವಾಗಿ 5 ವರ್ಷ ಮತ್ತು ದೀರ್ಘಾವಧಿ ಸಾಲ 10 ವರ್ಷಗಳ ಅವಧಿಗೆ ವಿತರಣೆ ಮಾಡಲಾಗಿದೆ.

ಇತರೆ ವಿಷಯಗಳು

ಈ‌ ಸಣ್ಣ ಕೆಲಸ ಮಾಡಿದ್ರೆ ಗೃಹಲಕ್ಷ್ಮಿ ಎಲ್ಲಾ ಕಂತಿನ ಹಣ ಒಟ್ಟಿಗೆ ಜಮೆ!

ಯಜಮಾನಿಯರಿಗೆ ಗುಡ್‌ ನ್ಯೂಸ್:‌ ಕೂಡಲೇ ಈ ಕೆಲಸ ಮಾಡಿ ಗೃಹಲಕ್ಷ್ಮಿ ಹಣ ಒಟ್ಟಿಗೆ ಬರಲಿದೆ


Share

Leave a Reply

Your email address will not be published. Required fields are marked *