rtgh
Headlines

ವಿದ್ಯಾರ್ಥಿಗಳ ಅಡ್ಮೀಶನ್‌ ಗೆ ಹೊಸ ರೂಲ್ಸ್!‌

Admission Rules
Share

ಹಲೋ ಸ್ನೇಹಿತರೆ, ರಾಜ್ಯದಲ್ಲಿ ಎಲ್‌ಕೆಜಿ ದಾಖಲಾತಿಗೆ ಚಾಲ್ತಿಯಲ್ಲಿರುವ ಮಕ್ಕಳ ಹಾಗೂ 1ನೇ ತರಗತಿ ಈ ಶೈಕ್ಷಣಿಕ ಸಾಲಿಗೆ ದಾಖಲಾಗಲು ಸರ್ಕಾರವು ಕಡ್ಡಾಯವಾಗಿ ವಯೋಮಿತಿಯನ್ನು ನಿಗದಿಪಡಿಸಿದೆ. ಇದನ್ನು ಬದಲಾವಣೆ ಮಾಡಬೇಕು ಎಂದು ಪೋಷಕರಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ವಿಷಯವಾಗಿ ಸಂಪೂರ್ಣವಾಗಿ ಹೊಸ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Admission Rules

ಮಕ್ಕಳ ಎಲ್‌ಕೆಜಿ ದಾಖಲಾತಿಗೆ ಆಯಾ ಶೈಕ್ಷಣಿಕ ವರ್ಷದ ಜೂನ್‌ 1ಕ್ಕೆ ಸರಿಯಾಗಿ 4 ವರ್ಷ ಕಡ್ಡಾಯವಾಗಿ ಪೂರ್ಣಗೊಂಡಿರಬೇಕೆಂದು ಈ ನಿಯಮ 2023-24ನೇ ಸಾಲಿನಿಂದಲೇ ಜಾರಿಗೊಳಿಸಲಾಗಿದೆ. ಅದೇ ರೀತಿ 1ನೇ ತರಗತಿ ಪ್ರವೇಶಕ್ಕೆ 2025-26ನೇ ಸಾಲಿನಿಂದ ಜೂನ್‌ 1ಕ್ಕೆ 6 ವರ್ಷ ಸಂ,ಪೂರ್ಣವಾಗಿ ಪೂರ್ಣಗೊಂಡಿರಬೇಕೆಂದು ಆದೇಶಿಸಲಾಗಿದೆ. ಈ ಅವೈಜ್ಞಾನಿಕ ನಿರ್ಧಾರದಿಂದ ನಿಗದಿತ ವಯೋಮಿತಿಗೆ ಒಂದು ದಿನ ಕಡಿಮೆ ಇದ್ದರೂ ಮಕ್ಕಳೂ ದಾಖಲಾತಿ ವಂಚಿತರಾಗುತ್ತಿದ್ದಾರೆ. ಇದನ್ನು ಸರ್ಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ ತಿಳಿಸಬೇಕು. ಅಂತಹ ಮಕ್ಕಳು ಅನಗತ್ಯವಾಗಿ ಒಂದು ವರ್ಷ ಶಾಲಾ ಪ್ರವೇಶದಿಂದ ವಂಚಿತರಾಗುವುದನ್ನು ತಡೆಯಲು ನಿಗದಿತ ವಯೋಮಿತಿಯಲ್ಲಿ ಕೆಲ ತಿಂಗಳುಗಳನ್ನು ಸಡಿಲ ಅಥವಾ ವಿನಾಯಿತಿ ನೀಡಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ.

ಇದನ್ನು ಓದಿ: ದ್ವಿತೀಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಇಲ್ಲಿ ಗಮನಿಸಿ!

ಮಕ್ಕಳ ದಾಖಲಾತಿಗಾಗಿ ಶಾಲೆಗಳಿಗೆ ಹೋಗುತ್ತಿರುವ ಅನೇಕ ಪೋಷಕರು ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಲಿದೆ. ವಯೋಮಿತಿ ಸರಿಯಾಗಿ ಇಲ್ಲದಿದ್ದರೂ ಎಲ್‌ಕೆಜಿ ಮತ್ತು 1ನೇ ತರಗತಿಗೆ ಮಕ್ಕಳ ದಾಖಲಾತಿಗಾಗಿ ಒತ್ತಾಯಿಸುತ್ತಿದ್ದಾರೆ. ಹಿಂದಿನ ತರಗತಿಗೆ ದಾಖಲಿಸಲು ಸಹ ಒಪ್ಪಿಗೆ ನೀಡುತ್ತಿಲ್ಲ ಎಂಬುದು ಖಾಸಗಿ ಶಾಲಾ ಪ್ರತಿನಿಧಿಗಳ ಹೇಳಿಕೆಯಾಗಿದೆ.

ವಯೋಮಿತಿ ಸಡಿಲಿಕೆ ಸುಳ್ಳು:

ಈ ಮಧ್ಯೆ, ಕೆಲವು ಶಾಲೆಗಳಲ್ಲಿ ಎಲ್‌ಕೆಜಿಗೆ 4 ವರ್ಷ ಪೂರ್ಣಗೊಳ್ಳದಿದ್ದರೂ ಮಕ್ಕಳನ್ನೂ ಸುಳ್ಳು ಮಾಹಿತಿ ನೀಡಿ ದಾಖಲಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳಿಗೆ 4 ವರ್ಷ ಪೂರ್ಣಗೊಳ್ಳಲು ಒಂದು ತಿಂಗಳು ಬಾಕಿ ಇದ್ದರೂ ಎಲ್‌ಕೆಜಿಗೆ ದಾಖಲಾತಿ ಮಾಡಿಕೊಳ್ಳಬಹುದು ಎಂದು ಮೌಖಿಕವಾಗಿ ಹೇಳಿದ್ದಾರೆ. ಮುಂದೆ ಈ ಬಗ್ಗೆ ಸ್ಪಷ್ಟವಾಗಿ ಆದೇಶವಾಗಲಿದೆ ಎಂದು ಸುಳ್ಳು ಮಾಹಿತಿ ನೀಡಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ.

ಎಲ್‌ಕೆಜಿ ಹಾಗೂ ಯುಕೆಜಿ ಪ್ರವೇಶ ದಾಖಲಾತಿ ಬಗ್ಗೆ ಇಲಾಖೆಯ ವೆಬ್‌ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸುವ ಹಾಗಿಲ್ಲ. 1ನೇ ತರಗತಿಗೆ ದಾಖಲಾದ ಅಥವಾ ಪ್ರವೇಶ ಪಡೆದ ಮಕ್ಕಳ ಹೆಸರು, ವಯಸ್ಸು ಇನ್ನಿತರೆ ಮಾಹಿತಿ ದಾಖಲಿಸಬೇಕು. ಹಾಗಾಗಿ ಎಲ್‌ಕೆಜಿಗೆ ಮಕ್ಕಳ ಪ್ರವೇಶ ಹೆಚ್ಚಿಸಲು ಪೋಷಕರನ್ನು ಶಾಲಾ ಆಡಳಿತ ಮಂಡಳಿ ದಾರಿ ತಪ್ಪಿಸುತ್ತಿವೆ. ಇದಕ್ಕೆ ಪೋಷಕರು ಮರುಳಾಗಬಾರದು. ವಯೋಮಿತಿ ವಿನಾಯಿತಿ ಬಗ್ಗೆ ಯಾವುದೇ ಮೌಖಿಕ ಸೂಚನೆ ಇಲಾಖೆಯಿಂದ ನೀಡಿಲ್ಲ. ಸರ್ಕಾರದಲ್ಲೂ ಈ ವಯೋಮಿತಿ ಸಡಿಲಿಕೆ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇತರೆ ವಿಷಯಗಳು:

ರಾಜ್ಯದಲ್ಲಿ ಭಾರೀ ಮಳೆ ಮರು ಆರಂಭ! ಹವಾಮಾನ ಇಲಾಖೆ ಅಲರ್ಟ್

5,8,9ನೇ ಕ್ಲಾಸ್‌ ಅಂತಿಮ ಫಲಿತಾಂಶದ ತೀರ್ಪಿಗೂ ಮುನ್ನ, ಮುಂದಿನ ತರಗತಿಗೆ ಪ್ರವೇಶ


Share

Leave a Reply

Your email address will not be published. Required fields are marked *