rtgh

SSLC ಮರು ಪರೀಕ್ಷೆ ವೇಳಾಪಟ್ಟಿ ಬಿಡುಗಡೆ.! ಫೇಲ್‌ ಆದವರಿಗೆ ಮತ್ತೊಂದು ಚಾನ್ಸ್

sslc supplementary exam time table 2024
Share

ಹಲೋ ಸ್ನೇಹಿತರೇ, SSLC ಪರೀಕ್ಷೆ ಒಂದರ ಫಲಿತಾಂಶ ಬಿಡುಗಡೆ ಆಗಿದೆ. ರಾಜ್ಯದಲ್ಲಿ ಶೇಕಡಾ 10% ಫಲಿತಾಂಶ ಇಳಿಕೆ ಕಂಡಿದೆ ಎಂಬ ಸುದ್ದಿ ಪ್ರಕಟವಾಗಿದೆ. ಇದರ ಬೆನ್ನಲ್ಲೇ ಈಗ SSLC ಪರೀಕ್ಷೆ 2ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪರಿಕ್ಷೆ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ ತಿಳಿಯಲು ಲೇಖನವನ್ನು ಓದಿ.

sslc supplementary exam time table 2024

SSLC ಪರಿಕ್ಷೆ-2 ರ ಬಗ್ಗೆ ಮಾಹಿತಿ :-ನೀವು SSLC ಪರೀಕ್ಷೆ -1 ರಲ್ಲಿ ಕಡಿಮೆ ಅಂಕ ಗಳಿಸಿದ್ದರೆ / ಫೇಲ್ ಆಗಿದ್ರೆ ನೀವು SSLC ಪರಿಕ್ಷೆ -2 ರಲ್ಲಿ ಮತ್ತೆ ಪರೀಕ್ಷೆ ಬರೆದು ಹೆಚ್ಚಿನ ಅಂಕಗಳನ್ನು ಪಡೆಯಬಹುದು. ಈ ಬಾರಿಯ ವಿಶೇಷತೆ ಏನೆಂದರೆ ನಿಮಗೆ ಮಾರ್ಕ್ಸ್ ಕಾರ್ಡ್ ನಲ್ಲಿ ಮರು ಪರೀಕ್ಷೆ ಬರೆದ ಬಗ್ಗೆ ಮಾಹಿತಿ ಇರುವುದಿಲ್ಲ.

SSLC ಪರೀಕ್ಷೆ-2ರ ವೇಳಾಪಟ್ಟಿ:- SSLC ಪರೀಕ್ಷೆ -2ರ ಮುಂಬರುವ ಜೂನ್‌ 7ರಿಂದ 14ರವರೆಗೂ ಪರೀಕ್ಷೆ ನಡೆಯಲಿದ್ದು ವೇಳಾಪಟ್ಟಿ ಈ ಕೆಳಗಿನಂತಿದೆ.

  • 07-06-2024-ಶುಕ್ರವಾರ – ಪ್ರಥಮ ಭಾಷೆ.
  • 08-06-2024-ಶನಿವಾರ – ತೃತೀಯ ಭಾಷೆ.
  • 10-06-2024- ಸೋಮವಾರ- ಗಣಿತ, ಸಮಾಜ ಶಾಸ್ತ್ರ.
  • 11-06-2024- ಮಂಗಳವಾರ – ಅರ್ಥ ಶಾಸ್ತ್ರ, ಎಲಿಮೆಂಟ್ಸ್‌ ಆಫ್‌ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌.
  • 12-6-2024- ಬುಧವಾರ – ವಿಜ್ಞಾನ ಮತ್ತು ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ.
  • 13-6-2024-ಗುರುವಾರ – ದ್ವಿತೀಯ ಭಾಷೆ.
  • 14-6-2024 –ಶುಕ್ರವಾರ ಸಮಾಜ ವಿಜ್ಞಾನ.

SSLC ಪರೀಕ್ಷೆ- 2ರ ಪರೀಕ್ಷಾ ಸಮಯ :- ಬೆಳಗ್ಗೆ 10:15 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯ ವರೆಗೂ ಪ್ರತಿ ಪರೀಕ್ಷೆ ನಡೆಯಲಿದ್ದು ಪ್ರಾರಂಭಿಕ 15 ನಿಮಿಷಗಳನ್ನು ಪ್ರಶ್ನೆ ಪತ್ರಿಕೆ ಓದಲು ನೀಡಲಾಗುವುದು.

ಸೂಚನೆಗಳು ಈ ಕೆಳಗಿನಂತೆ ಇವೆ:-

1) ಜೂನ್ 15 2024 ರಂದು, JTS ವಿದ್ಯಾರ್ಥಿಗಳಿಗೆ JTS ಕೋಡ್ 15 & 60 ರ ವಿಷಯಗಳಿಗೆ ಪ್ರಾಯೋಗಿಕ & ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿಯೇ ನಡೆಸುತ್ತಾರೆ ಜೊತೆಗೆ ಹಿಂದೂಸ್ತಾನಿ ಸಂಗೀತ & ಕರ್ನಾಟಕ ಸಂಗೀತ ವಿಷಯಗಳ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5:15 ಗಂಟೆಯ ವರೆಗೂ ಇರುತ್ತದೆ ಮತ್ತು ತಾತ್ವಿಕ ಪರೀಕ್ಷೆಯು ಮಧ್ಯಾಹ್ನ 2:00 ಗಂಟೆಯಿಂದ ಮಧ್ಯಾಹ್ನ 3:45 ಗಂಟೆಯ ವರೆಗೂ & ಪ್ರಾಯೋಗಿಕ ಪರೀಕ್ಷೆಯು ಮಧ್ಯಾಹ್ನ 3:45 ಗಂಟೆಯಿಂದ ಸಾಯಂಕಾಲ 5:15 ಗಂಟೆಯ ವರೆಗೂ ಇರುವುದು. 

2) ಅಂಗವಿಕಲ / ವಿಕಲಚೇತನ ಮಕ್ಕಳಿಗೆ ಪರೀಕ್ಷೆ ಬರೆಯಲು ಇನ್ನೊಬ್ಬರ ಸಹಾಯ ನಡೆಯುವ ಅವಕಾಶ ಇರುತ್ತದೆ. ಇಂತಹ ಮಕ್ಕಳಿಗೆ ಹೆಚ್ಚುವರಿಯಾಗಿ ಒಂದು ಗಂಟೆವರೆಗೂ ನೀಡಲಾಗುವುದು.

3) ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಕಗಳ ಪರೀಕ್ಷೆಯ ಒಟ್ಟು ಸಮಯ 3.15 ಗಂಟೆಯಾಗಿರುತ್ತದೆ ಮತ್ತು ದ್ವಿತೀಯ ಭಾಷೆ & ತೃತೀಯ ಭಾಷೆ ಪರೀಕ್ಷೆಗಳಿಗೆ 3 ಗಂಟೆಗಳು ಇರುತ್ತವೆ.

4) ಎನ್.ಎಸ್.ಕ್ಯೂ.ಎಫ್ ವಿಷಯಗಳ ಪರೀಕ್ಷೆಗೆ ಬೆಳಗ್ಗೆ 10.15 ಗಂಟೆಯಿಂದ 12.30 ಗಂಟೆಯವರೆಗೂ ಇರಲಿದೆ.

ಇತರೆ ವಿಷಯಗಳು

ಈ ಒಂದು ಕಾರ್ಡ್‌ಯಿಂದ ಕ್ಷಣ ಮಾತ್ರದಲ್ಲಿ ಸಿಗತ್ತೆ ಎಲ್ಲಾ ಯೋಜನೆಯ ಪ್ರಯೋಜನ

ರಾಜ್ಯದ ರೈತರ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್‌ ಮಾಡಿ


Share

Leave a Reply

Your email address will not be published. Required fields are marked *