rtgh

LIC ಪಾಲಿಸಿ ಇರುವ ದೇಶದ ಎಲ್ಲರಿಗೂ ಹೊಸ ಸೂಚನೆ!

LIC New Update
Share

ಹಲೋ ಸ್ನೇಹಿತರೆ, ಎಲ್ಐಸಿ ಕಂಪನಿ ವತಿಯಿಂದ ಗ್ರಾಹಕರಿಗೆ ದೊಡ್ಡ ಎಚ್ಚರಿಕೆಯೊಂದು ನೀಡಲಾಗಿದ್ದು ನೀವೇನಾದರೂ ಎಲ್ಐಸಿಯ ಪಾಲಿಸಿಯನ್ನು ಹೊಂದಿದ್ದರೆ ಅಥವಾ ಪಾಲಿಸಿ ಪಡೆಯಲು ಯೋಜನೆ ಹೂಡಿದ್ದರೆ ಎಲ್ಐಸಿ ಪ್ರಕಟಿಸಿರುವಂತಹ ಎಚ್ಚರಿಕೆ ಏನು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

LIC New Update

Contents

ವಂಚಕರ ವಿರುದ್ಧ LIC ಕಟ್ಟುನಿಟ್ಟಾದ ಕ್ರಮ:

ಕಳೆದ ವಾರ ಲೈಫ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಬ್ರಾಂಡ್ ಹೆಸರು ಮತ್ತು ಲೋಗೋ ಹಾಗೂ ಹಿರಿಯ ಅಧಿಕಾರಿಗಳ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಮಾಡಲು ಉಪಯೋಗಿಸುವುದಲ್ಲದೆ, ಕಂಪನಿ ಕುರಿತಾದ ನಕಲಿ ಸುದ್ದಿಯನ್ನು ಹಾಗೂ ಮೋಸದ ಜಾಹೀರಾತನ್ನು ಹಬ್ಬಿಸುತ್ತಿರುವ ಕೆಲವು ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗೆ ಎಲ್ಐಸಿ ಕಂಪನಿ ಎಚ್ಚರಿಕೆ ನೀಡಿದೆ. ಜೊತೆಗೆ ಎಲ್ಐಸಿಯ ಪಾಲಿಸಿಯನ್ನು ಹೊಂದಿರುವವರನ್ನು ಇಂತಹ ವಂಚಕರು ಸಾಮಾಜಿಕ ಮಾಧ್ಯಮಗಳಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು ಇಂತಹವರ ವಿರುದ್ದ ಜಾಗರೂಕರಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ: Free ಹೊಲಿಗೆ ಯಂತ್ರ ವಿತರಣಾ ಕಾರ್ಯ ಆರಂಭ! ಮಿಷನ್‌ ಖರೀದಿಗೆ ಖಾತೆಗೆ ಬರತ್ತೆ 15,000

ಗ್ರಾಹಕರಿಗೆ LIC ವತಿಯಿಂದ ಎಚ್ಚರಿಕೆಯ ಸಂದೇಶ

ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವ ಮೂಲಕ ಜನರಿಗೆ ವಂಚಿಸುತ್ತಿರುವ ಜನರ URL ಲಿಂಕ್(URL Link) ಗಳನ್ನು ಪತ್ತೆ ಹಚ್ಚಿ ಕಲೆ ಹಾಕುವ ಪ್ರಯತ್ನದಲ್ಲಿ ಎಲ್ಐಸಿ ಅಧಿಕಾರಿಗಳಿದ್ದು ತಮ್ಮ ಕಂಪನಿಯ ಅನುಮತಿ ಇಲ್ಲದೆ ಅದರ ಬ್ರಾಂಡ್ ಹೆಸರು ಹಾಗೂ ಲೋಗೋವನ್ನು ಬಳಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈ ತೆಗೆದುಕೊಳ್ಳುವುದಾಗಿ ಹಾಗೂ ಮೋಸದ ಚಟುವಟಿಕೆಯಲ್ಲಿ ತೊಡಗಿಕೊಂಡು ತಮ್ಮ ಪಾಲಿಸಿದಾರರನ್ನು ವಂಚಿಸುವ ಯೋಜನೆ ಹೂಡಿರುವವರಿಗೆ ಕಾನೂನಿನ ಮುಖಾಂತರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಲ್ಐಸಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇಂತಹ ಮೋಸದ ಜಾಹೀರಾತುಗಳಿಂದ ಜನರು ತಮ್ಮ ಹಣವನ್ನು ಕಳೆದುಕೊಳ್ಳಬೇಡಿ ಇಂತಹವರಿಂದ ಜಾಗರೂಕರಾಗಿರಿ ಎಂಬ ಎಚ್ಚರಿಕೆಯ ಸಂದೇಶವನ್ನು ಎಲ್ಐಸಿ ನೀಡಿದೆ.

ಇತರೆ ವಿಷಯಗಳು:

ಸರ್ಕಾರಿ ನೌಕರರ ವೇತನ ಹೆಚ್ಚಳ! ಚುನಾವಣೆಗೂ ಮುನ್ನವೇ ಗುಡ್​​ನ್ಯೂಸ್

ಆಸ್ತಿ ಖರೀದಿಗೆ ಸರ್ಕಾರದ ಹೊಸ ರೂಲ್ಸ್! ಈ ದಾಖಲೆಗಳಿದ್ದರೆ ಮಾತ್ರ ಖರೀದಿಸಿ


Share

Leave a Reply

Your email address will not be published. Required fields are marked *