ಹಲೋ ಸ್ನೇಹಿತರೆ, LPG ಗ್ಯಾಸ್ ಸಿಲೆಂಡರ್ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಮುಖವಾಗಿ ಪ್ರತಿಯೊಬ್ಬ ನಾಗರಿಕರೂ ಕೂಡ ಭಾರತ ದೇಶದಲ್ಲಿ ಬಳಸುತ್ತಿದ್ದಾರೆ. ವಿಶೇಷವಾಗಿ ಮನೆಯ ಮಹಿಳೆಯರು ಸೌದೆಯ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಆರೋಗ್ಯವನ್ನು ಹಾಳುಮಾಡುಕೊಳ್ಳುತ್ತಾರೆ ಎಂದು ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಉಜ್ವಲ ಯೋಜನೆಯ ಮೂಲಕ ಗ್ಯಾಸ್ ಕನೆಕ್ಷನ್ ಅನ್ನು ದೇಶದಾದ್ಯಂತ ನೀಡುವಂತಹ ಕೆಲಸವನ್ನು ಕೂಡ ಮಾಡಿದ್ದಾರೆ. ಈ ಯೋಜನೆಯಡಿಯಲ್ಲಿ ಹೊಸ ಸುದ್ದಿ ಸರ್ಕಾರ ನೀಡಿದೆ. ಈ ಮಾಹಿತಿಯ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಪ್ರಸ್ತುತ ಪ್ರತಿಯೊಂದು ಮನೆಗಳಲ್ಲಿ ಕೂಡ ಈಗ ಗ್ಯಾಸ್ ಕನೆಕ್ಷನ್ (Gas Connection) ಅನ್ನು ನಾವು ಕಾಣಬಹುದಾಗಿದೆ. ಆದರೆ ಇವತ್ತಿನ ಲೇಖನದಲ್ಲಿ ವಿಶೇಷವಾಗಿ ಕಂಪೋಸಿಟ್ ಸಿಲಿಂಡರ್ (Composite Cylinder) ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ. ಇತ್ತೀಚಿನ ದಿನಗಳಲ್ಲಿ ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಇದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯೋಣ.
ಕಂಪೋಸಿಟ್ ಸಿಲಿಂಡರ್ ಬಳಕೆಯಿಂದ ಆಗುವ ಲಾಭಗಳು:
ಕಂಪೋಸಿಟ್ ಸಿಲಿಂಡರ್ ಇತ್ತೀಚಿನ ದಿನಗಳಲ್ಲಿ ಇದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಮಿನಿಸ್ಟ್ರಿ ಆಫ್ ಪೆಟ್ರೋಲಿಯಂ ಹಾಗೂ ನ್ಯಾಚುರಲ್ ಗ್ಯಾಸ್ ಅಡಿಯಲ್ಲಿ ಜಾರಿಗೆ ತಂದಿರುವ ಒಂದು ವಿದಧ ಗ್ಯಾಸ್ ಆಗಿದೆ. ನೋಡೋದಕ್ಕೆ ಸಾಮಾನ್ಯವಾಗಿ ಇರುವ ಈ ಸಿಲಿಂಡರ್ ಗ್ಯಾಸ್ ಗೆ ಹೋಲಿಸಿದರೆ ಕಾಂಪೋಸಿಟ್ ಗ್ಯಾಸ್ ಸಾಕಷ್ಟು ವಿಭಿನ್ನವಾಗಿರುತ್ತದೆ ಹಾಗೂ ಲಾಭದಾಯಕವಾಗಿದೆ.
ಇದನ್ನು ಓದಿ: ಎಲ್ಲಾ ವಿದ್ಯಾರ್ಥಿಗಳಿಗೆ ಕೇಂದ್ರದಿಂದ ₹ 90,000 ವರೆಗೆ ವಿದ್ಯಾರ್ಥಿವೇತನ! ಇಂದೇ ಅಪ್ಲೇ ಮಾಡಿ
- ಮೊದಲನೆಯದಾಗಿ ಸಾಮಾನ್ಯ ಸಿಲಿಂಡರ್ ಗ್ಯಾಸ್ ಗೆ ಕಂಪೋಸಿಟ್ ಸಿಲಿಂಡರ್ ಹೋಲಿಸಿದರೆ ಈ ವಿಭಿನ್ನವಾಗಿರುವಂತಹ ಸಿಲಿಂಡರ್ ಗ್ಯಾಸ್ 50% ತೂಕದಲ್ಲಿ ಕಡಿಮೆ ಇರುತ್ತದೆ. ಹೀಗಾಗಿ ನೀವು ಯಾವುದೇ ಆಯಾಸವಿಲ್ಲದೆ ಸುಲಭ ರೂಪದಲ್ಲಿ ಈ ಸಿಲಿಂಡರ್ ಗ್ಯಾಸ್ಗಳನ್ನು ನೀವು ಎತ್ತಬಹುದಾಗಿದೆ ಹಾಗೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದು.
- ಎಲ್ಲದಕ್ಕಿಂತ ಹೆಚ್ಚಾಗಿ ಪ್ರತಿಯೊಂದು ಮನೆಗಳಲ್ಲಿ ಕೆಲವೊಂದು ಭಯ ಇರುತ್ತದೆ, ಏನೆಂದರೆ ಸಿಲಿಂಡರ್ ಗ್ಯಾಸ್ ಬ್ಲಾ-ಸ್ಟ್ ಆದ್ರೆ ಏನು ಮಾಡೋದು ಅಂತ. ಕಂಪೋಸಿಟ್ ಸಿಲಿಂಡರ್ ಗ್ಯಾಸ್ ನಲ್ಲಿ ನೀವು ಈ ವಿಚಾರದ ಬಗ್ಗೆ ಯಾವುದೇ ರೀತಿಯ ಭಯ ಪಡಬೇಕಾದ ಅಗತ್ಯವಿರುವುದಿಲ್ಲ ಯಾಕೆಂದರೆ ಇದು ಬ್ಲಾ-ಸ್ಟ್ ಪ್ರೂಫ್ ಆಗಿರುತ್ತದೆ. ಹೀಗಾಗಿ ಇದು ಅತ್ಯಂತ ಸುರಕ್ಷಿತ ಗ್ಯಾಸ್ ಸಿಲಿಂಡರ್ ಆಗಿದೆ.
- ಸಾಮಾನ್ಯವಾಗಿ ಇರುವಂತಹ ಮೆಟಲ್ ಬಾಡಿಯ ಸಿಲಿಂಡರ್ ಗ್ಯಾಸ್ ಕೆಳಭಾಗದಲ್ಲಿ ತುಕ್ಕು ಹಿಡಿಯುವುದು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಕೆಳಗೆ ಇರುವಂತಹ ನೆಲ ಕೂಡ ಹಾಳಾಗುತ್ತದೆ ಹಾಗೂ ಬೇರೆ ಬೇರೆ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಿ ಬರಬಹುದು. ಆದರೆ ಕಂಪೋಸಿಟ್ ಸಿಲಿಂಡರ್ ಗ್ಯಾಸ್ ನಲ್ಲಿ ಈ ರೀತಿಯ ಸಮಸ್ಯೆಗಳು ನೀವು ಎದುರಿಸುವಂತಹ ಪರಿಸ್ಥಿತಿ ಬರುವುದಿಲ್ಲ.
- ಹಾಗೆಯೇ ಕೊನೆಯದಾಗಿ ಸಾಮಾನ್ಯವಾಗಿ ಇರುವಂತಹ ಸಿಲಿಂಡರ್ ಗ್ಯಾಸ್ ನಲ್ಲಿ ನೀವು ಎಷ್ಟು ಪ್ರಮಾಣದಲ್ಲಿ ಗ್ಯಾಸ್ ಉಳಿದಿದೆ ಎಂಬುದಾಗಿ ಚೆಕ್ ಮಾಡುವುದು ಕಷ್ಟ. ಆದರೆ ಕಂಪೋಸಿಟ್ ಸಿಲಿಂಡರ್ ಗ್ಯಾಸ್ ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎನ್ನುವಂತಹ ಸ್ಪಷ್ಟವಾಗಿ ತಿಳಿಬಹುದು. ಇದೊಂದು ಅತ್ಯಂತ ಪ್ರಮುಖ ಲಾಭ ಎಂದು ಹೇಳಬಹುದಾಗಿದೆ.
ಇನ್ನು ಕಾಂಪೋಸಿಟ್ ಸಿಲಿಂಡರ್ ಗ್ಯಾಸ್ ಬೆಲೆ ಬಗ್ಗೆ ತಿಳಿಯುವುದಾದರೆ ಇದನ್ನು ಖರೀದಿಸುವುದಕ್ಕೆ ನೀವು ಹತ್ತು ಕೆಜಿಗೆ 3000 ರೂಪಾಯಿಗಳ ಸೆಕ್ಯೂರಿಟಿ ಡೆಪಾಸಿಟ್ ಹಣವನ್ನು ಅನ್ನು ನೀಡಬೇಕಾಗಿರುತ್ತದೆ. ಹಾಗೂ ಗ್ಯಾಸ್ ತುಂಬಿಸುವುದಕ್ಕೆ 500 ರಿಂದ 600 ರೂಗಳವರೆಗೆ ಹಣವನ್ನು ನೀಡಬೇಕಾಗಿರುತ್ತದೆ.
ಇತರೆ ವಿಷಯಗಳು:
ರೇಷನ್ ಕಾರ್ಡ್ ತಿದ್ದುಪಡಿಗೆ ಸುಲಭ ಮಾರ್ಗ! ಅಗತ್ಯ ದಾಖಲಾತಿಗಳ ವಿವರ ಇಲ್ಲಿದೆ
ಹಟ್ಟಿ ಚಿನ್ನದ ಗಣಿಯಲ್ಲಿ ಉದ್ಯೋಗಾವಕಾಶ 168 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ!