rtgh

10-12ನೇ ತರಗತಿ ಪಾಸಾದವರಿಗೆ ಸರ್ಕಾರದ ಈ ಇಲಾಖೆಯಲ್ಲಿ ನೇರ ನೇಮಕಾತಿ

indian railways recruitment
Share

ಹಲೋ ಸ್ನೇಹಿತರೇ, ಸರ್ಕಾರಿ ಇಲಾಖೆಗಳಲ್ಲಿ 10ನೇ ತರಗತಿ & 12ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ  ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

indian railways recruitment

ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬುದು ಬಹುತೇಕ ಜನರ ಆಸೆ. ಕೆಲವು ಉದ್ಯೋಗಗಳನ್ನು ಪಡೆಯಲು ಪದವಿ ಹೊಂದಿರುವುದು ಅಗತ್ಯ. ಆದರೆ, ಸರ್ಕಾರದ ಕೆಲವು ಇಲಾಖೆಗಳಲ್ಲಿ ಕೆಲ ಹುದ್ದೆಗಳಿಗೆ 10ನೇ ತರಗತಿ, 12ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದರೆ ಅಷ್ಟೇ ಸಾಕು. 

ಹೌದು, 10ನೇ ತರಗತಿ ಅಥವಾ 12ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗಾಗಿ, ದೇಶದ ಕೆಲವು ದೊಡ್ಡ ದೊಡ್ಡ ಸರ್ಕಾರಿ ಇಲಾಖೆಗಳಲ್ಲಿ ಪರೀಕ್ಷೆ ಇಲ್ಲದೆಯೇ ನೇರವಾಗಿ ನೇಮಕಾತಿ ಅವಕಾಶಗಳು ಲಭ್ಯವಿವೆ. ಆ ನೇಮಕಾತಿಗಳ ಬಗ್ಗೆ ತಿಳಿಯೋಣ… 

10ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಅಂಚೆ ಇಲಾಖೆ:-

10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ಹಲವು ಇತರ ಹುದ್ದೆಗಳಿಗೆ ನೀವು ನೇಮಕಾತಿಗಾಗಿ ಅರ್ಜಿ ಸಲ್ಲಿಸಬಹುದು.

ಭಾರತೀಯ ರೈಲ್ವೆ ಇಲಾಖೆ:- 

ಭಾರತೀಯ ರೈಲ್ವೇಯಲ್ಲಿ ಟ್ರ್ಯಾಕ್‌ಮ್ಯಾನ್, ಹೆಲ್ಪರ್, ಗೇಟ್‌ಮ್ಯಾನ್, ಪಾಯಿಂಟ್ಸ್‌ಮನ್, ಪೋರ್ಟರ್ ಸೇರಿದಂತೆ ಇತರ ಹಲವು ಪೋಸ್ಟ್‌ಗಳಿಗೆ ಅಪ್ಲೇ ಮಾಡಬಹುದು. ಗಮನಾರ್ಹವಾಗಿ 10ನೇ ತರಗತಿ ಉತ್ತೀರ್ಣರಾಗಿ ಐಟಿಐ ಕೋರ್ಸ್ ಪೂರ್ಣಗೊಳಿಸಿದ್ದರೆ ರೈಲ್ವೇಸ್‌ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. 

ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ: 

10ನೇ ತರಗತಿ ಉತ್ತೀರ್ಣರದವರು ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಯಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರಣ್ಯ ಇಲಾಖೆ: 

ಹಲವು ರಾಜ್ಯಗಳಲ್ಲಿ 10ನೇ ತರಗತಿ ಪಾಸ್ ಆದ ಅಭ್ಯರ್ಥಿಗಳಿಗೆ ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ.

12ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗ: 

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC): 

12ನೇ ತರಗತಿ ಪಾಸಾದ ಅಭ್ಯರ್ಥಿಗಳು ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾಗಿಗಳಿಗೆ ಅಪ್ಲೇ ಮಾಡಬಹುದು. ಇದರಲ್ಲಿ ಸೇನೆಯಿಂದ ಸ್ಟೆನೋಗ್ರಾಫರ್ ವರೆಗೂ ಹಲವು ಹುದ್ದೆಗಳು ಖಾಲಿಯಿದೆ.

ಭಾರತೀಯ ರೈಲ್ವೆ ಇಲಾಖೆ: 

12ನೇ ತರಗತಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಭಾರತೀಯ ರೈಲ್ವೇಯಲ್ಲಿ ALP, ಅಸಿಸ್ಟೆಂಟ್ ಲೋಕೋ ಪೈಲಟ್, RRB NTPC ಸೇರಿದಂತೆ  ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಪೊಲೀಸ್ ಇಲಾಖೆ: 

12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು  ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅಪ್ಲೇ ಮಾಡಬಹುದು.

ಅಂಚೆ ಇಲಾಖೆ: 

12ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅಂಚೆ ಇಲಾಖೆಯಲ್ಲಿ JDS, ಸಹಾಯಕ, ಪೋಸ್ಟ್‌ಮ್ಯಾನ್ ಸೇರಿದಂತೆ ಹಲವು ಹುದ್ದೆಗಳಿಗೆ ಅಪ್ಲೇ ಮಾಡಬಹುದು. 

ಸರ್ಕಾರಿ ಉದ್ಯೋಗದ ಬಗ್ಗೆ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಸಂಬಂಧಪಟ್ಟ ಅಧಿಕೃತ ವೆಬ್‌ಸೈಟ್‌ ಆಗಾಗ್ಗೆ ಚೆಕ್‌ ಮಾಡಿ. ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. 

ಇತರೆ ವಿಷಯಗಳು

ಪ್ರೈಜ್ ಮನಿ ಸ್ಕಾಲರ್‌ಶಿಪ್: ಪ್ರತಿ ವಿದ್ಯಾರ್ಥಿಗೂ 20,000 ರಿಂದ 35,000 ರೂ. ಈ ರೀತಿ ಅಪ್ಲೇ ಮಾಡಿ

ಏಪ್ರಿಲ್ ತಿಂಗಳಲ್ಲಿ ರದ್ದಾದ BPL ಕಾರ್ಡ್ ಲಿಸ್ಟ್ ಬಿಡುಗಡೆ! ಡೈರೆಕ್ಟ್‌ ಲಿಂಕ್‌ ಇಲ್ಲಿದೆ


Share

Leave a Reply

Your email address will not be published. Required fields are marked *