rtgh

SBI ವತಿಯಿಂದ ಫೆಲೋಶಿಪ್‌ ಪ್ರೋಗ್ರಾಮ್‌: ಅರ್ಜಿ ಸಲ್ಲಿಸಿದವರಿಗೆ ರೂ.50,000 ವಿಶೇಷ ಭತ್ಯೆ ಜೊತೆಗೆ ಉದ್ಯೋಗ

Share

ಹಲೋ ಸ್ನೇಹಿತರೇ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು 2024-25 ಸಾಲಿಗೆ ಯೂತ್‌ ಫಾರ್‌ ಇಂಡಿಯಾ ಫೆಲೋಶಿಪ್‌ಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಫೆಲೋಶಿಪ್‌ ಬಗ್ಗೆ ಮಾಹಿತಿ ತಿಳಿದು ಅರ್ಜಿಯನ್ನು ಸಲ್ಲಿಸಿ.

ಭಾರತೀಯ ಸ್ಟೇಟ್‌ ಬ್ಯಾಂಕ್‌ ಪ್ರತಿ ವರ್ಷವು ಸಹ ವಿಶೇಷವಾದ ಫೆಲೋಶಿಪ್‌ ಒಂದನ್ನು ನೀಡುತ್ತಿದೆ. ಅದರ ಹೆಸರೇ ‘ಯೂತ್ ಫಾರ್‌ ಇಂಡಿಯಾ ಫೆಲೋಶಿಪ್’. ಪ್ರಸ್ತುತ 2024-25 ಸಾಲಿನ ಯೂತ್‌ ಫಾರ್ ಇಂಡಿಯಾ ಫೆಲೋಶಿಪ್‌ ಪ್ರೋಗ್ರಾಮ್‌ಗೆ ಅಧಿಸೂಚನೆಯನ್ನು ಬಿಡುಗಡೆಗೊಳಿಸಿದೆ, ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್‌ ಅಪ್ಲಿಕೇಶನ್‌ ಆಹ್ವಾನಿಸಿದೆ. ಈ ಪ್ರೋಗ್ರಾಮ್‌ ಮೂಲಕ ಭಾವಿ ಪ್ರಜೆಗಳಿಗೆ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶವಿದೆ. ಅಲ್ಲದೇ ಗ್ರಾಮೀಣ ಭಾರತದ ಅಭಿವೃದ್ಧಿಗೆ ಪ್ರಜೆಗಳ ಕೊಡುಗೆಯನ್ನು ಹೆಚ್ಚಿಸುವುದು ಇದರ ಮುಖ್ಯ ಆಶಯವಾಗಿದೆ.

ಯೂತ್ ಫಾರ್‌ ಇಂಡಿಯಾ ಫೆಲೋಶಿಪ್ 2024-25 ಪ್ರೋಗ್ರಾಮ್ ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳಿಗೆ ರೂ.50,000 ವಿಶೇಷ ಭತ್ಯೆ ಕೂಡ ನೀಡಲಾಗುವುದು. ಜತೆಗೆ SBI ಫೌಂಡೇಷನ್‌ನಿಂದ ಪ್ರಮಾಣಪತ್ರ ನೀಡಲಾಗುವುದು. ಸ್ಟೈಫಂಡ್‌ & ಫೆಲೋಶಿಪ್ ಕುರಿತು ಇತರೆ ಮಾಹಿತಿಯನ್ನು ಕೆಳಗೆ ನೀಡಲಾದ ಅರ್ಜಿ ಲಿಂಕ್‌ ಕ್ಲಿಕ್ ಮಾಡಿ ತಿಳಿದುಕೊಳ್ಳಿ.

SBI ಯೂತ್ ಫಾರ್ ಇಂಡಿಯಾ ಫೆಲೋಶಿಪ್ 2024-25 ಪ್ರೋಗ್ರಾಮ್‌ 13 ತಿಂಗಳ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮವಾಗಿದೆ. ಇದಕ್ಕೆ ಯಾವುದೇ ಪದವೀಧರರು ಮತ್ತು ವಯೋಮಿತಿ 21 ರಿಂದ ಗರಿಷ್ಠ 32 ವರ್ಷ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.

SBI ಯೂತ್ ಫಾರ್ ಇಂಡಿಯಾ ಫೆಲೋಶಿಪ್ 2024-25 ಪ್ರೋಗ್ರಾಮ್‌ ಆರಂಭವಾಗುವ ದಿನಾಂಕ : 01-08-2024
ಎಸ್‌ಬಿಐ ಯೂತ್ ಫಾರ್ ಇಂಡಿಯಾ ಫೆಲೋಶಿಪ್ 2024-25 ಪ್ರೋಗ್ರಾಮ್‌ ಅವಧಿ : 13 ತಿಂಗಳು

SBI Youth For India Fellowship 2024-25 – Apply Online

ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು?

ಯಾವುದೇ ಪದವಿ ಶಿಕ್ಷಣ ಪಡೆದವರು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆಗಳು ಹೇಗೆ?

  • ಆನ್‌ಲೈನ್‌ ಪರೀಕ್ಷೆ, ಸಂದರ್ಶನ ಮತ್ತು ಸೂಕ್ತ ಮಾತುಗಾರಿಕೆ ಪರಿಶೀಲನೆ ನಡೆಸುವ ಮೂಲಕ ಶಾರ್ಟ್‌ ಲಿಸ್ಟ್‌ ಮಾಡಲಾಗುವುದು.
  • ಫೆಲೋಶಿಪ್ ಅನ್ನು 1 ವಾರದ ಓರಿಯಂಟೇಶನ್‌ ನೊಂದಿಗೆ ರೂರಲ್ ಡೆವಲಪ್‌ಮೆಂಟ್‌ ಬಗ್ಗೆ ಅಭ್ಯರ್ಥಿಗಳಿಗೆ ತಿಳಿಸುವ ಮೂಲಕ ಆರಂಭ ಮಾಡಲಾಗುತ್ತದೆ. ಈ ಸಮಯದಲ್ಲಿ ಫೆಲೋಶಿಪ್ ಪಡೆಯುವ ಅಭ್ಯರ್ಥಿಗಳು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದು.
  • ಈ ಅವಧಿಯಲ್ಲಿ ನಿಗದಿತ & ಸಂಬಂಧಿಸಿದ ಎನ್‌ಜಿಓಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಸೇರಿಸಲಾಗುತ್ತದೆ.
  • ಓರಿಯಂಟೇಶನ್‌ ನಂತರ ಅಭ್ಯರ್ಥಿಗಳು ಎನ್‌ಜಿಓಗಳಲ್ಲೇ ಇದ್ದು, ಸ್ವಲ್ಪ ದಿನಗಳ ಕಾಲ ಅವರ ಕೆಲಸದ ಬಗ್ಗೆ ತಿಳಿಯಕೊಂಡಿರಬೇಕಿರುತ್ತದೆ. ತರಬೇತಿ ಸಹ ಇರಬೇಕಾಗುತ್ತದೆ. ನಂತರ ಅಭ್ಯರ್ಥಿಗಳ ಕೌಶಲಕ್ಕೆ ತಕ್ಕಂತೆ ಎಜ್‌ಜಿಓಗಳು ನಿರ್ಧಿಷ್ಟ ಸ್ಥಳಗಳಿಗೆ ಅವರಿಗೆ ಒಬ್ಬರು ಮೆಂಟರ್ ನೀಡುವ ಮುಖಾಂತರ ಕೆಲಸ ನೀಡುತ್ತದೆ.

ಇತರೆ ವಿಷಯಗಳು

ಏಪ್ರಿಲ್‌ನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ! ಬ್ಯಾಂಕ್ ಕೆಲಸವಿದ್ದರೆ ತಕ್ಷಣ ಮುಗಿಸಿ

PM ಸೂರಜ್ ಪೋರ್ಟಲ್: ‌ಯಾವುದೇ ಗ್ಯಾರಂಟಿಯಿಲ್ಲದೇ ಸಿಗುತ್ತೆ 15 ಲಕ್ಷದವರೆಗಿನ ಸಾಲ


Share

Leave a Reply

Your email address will not be published. Required fields are marked *