ಹಲೋ ಸ್ನೇಹಿತರೆ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆಯಿಂದ ಶೂನ್ಯ ಬಿಲ್ ಅನ್ನು ಹೆಚ್ಚಿನ ಜನರು ಪಡೆಯುತ್ತಿದ್ದಾರೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಇದಾಗಿದ್ದು, ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯ ವೇಳೆ ಘೋಷಿಸಿದ ಮೊಟ್ಟ ಮೊದಲ ಗ್ಯಾರಂಟಿ ಯೋಜನೆಯಾಗಿದ್ದು ಹೆಚ್ಚಿನ ಮಧ್ಯಮ ವರ್ಗದ ಜನತೆ ಈ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಈ ಗೃಹಜ್ಯೋತಿ ಆರಂಭವಾದ ಬಳಿಕ ಜನರು ಬೇಕಾಬಿಟ್ಟಿಯಾಗಿ ವಿದ್ಯುತ್ ಅನ್ನು ಬಳಕೆ ಮಾಡುತ್ತಿದ್ದಾರೆ. ಈ ಮಾಹಿತಿ ವಿಚಾರವಾಗಿ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
Contents
ವಿದ್ಯುತ್ ಬೇಡಿಕೆ ಇನ್ನಷ್ಟು ಹೆಚ್ಚಳ
ಈ ಬಾರಿ ಜನರು ಹೆಚ್ಚುತ್ತಿರುವ ಬಿಸಿಲ ಬೇಗೆಯಲ್ಲಿ ತೊಂದರೆ ಅನುಭವಿಸಿದ್ದಾರೆ. ಈ ವರ್ಷ ಮುಂಗಾರು ಮಳೆಯ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಕಾರಣ ಉಷ್ಣಾಂಶ ಹೆಚ್ಚಳವಾಗಿದೆ. ಉರಿ ಸೆಕೆ ಹೆಚ್ಚುತ್ತಿರುವ ಕಾರಣದಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ, ಹಾಗಾಗಿ ವಿದ್ಯುತ್ ಅವಶ್ಯಕತೆಯು ಹೆಚ್ಚಿದೆ.
ಇದನ್ನು ಓದಿ: ಪಿಎಂ ಕಿಸಾನ್ ಖಾತೆ ತಿದ್ದುಪಡಿಗೆ ಅವಕಾಶ! ಈ ರೀತಿಯಾಗಿ ಖಾತೆ ಸರಿಪಡಿಸಿಕೊಳ್ಳಿ
ವಿದ್ಯುತ್ ಬಳಕೆಯಲ್ಲೂ ಹೆಚ್ಚಳ
ಇಂದು ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯಂತು ತುಂಬಾ ಹೆಚ್ಚಾಗಿದೆ. ನೀರಿನ ಅಭಾವ ಹೆಚ್ಚಾದ ನಂತರ ವಿದ್ಯುತ್ ಬಳಕೆ ಬಹಳ ಹೆಚ್ಚಾಗಿದೆ. ಬೆಸ್ಕಾಂ ಸೇರಿದಂತೆ ಎಲ್ಲಾ ವಿದ್ಯುತ್ ಸರಬರಾಜು ಕೇಂದ್ರಗಳಲ್ಲಿ ವಿದ್ಯುತ್ ಬಿಲ್ನಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಇದೀಗ ಗೃಹಜ್ಯೋತಿ ವಿಚಾರವಾಗಿ ಸರಕಾರ ಬಳಕೆದಾರರಿಗೆ ಶಾಕಿಂಗ್ ವಿಚಾರವೊಂದು ನೀಡಿದೆ.
ಬಿಲ್ ಪಾವತಿ ಮಾಡಬೇಕು
ಇದೀಗ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದ ಗ್ರಾಹಕರಿಗೆ ಈ ವಿಚಾರ ಶಾಕ್ ನೀಡುತ್ತಿದೆ. ಉಚಿತ ವಿದ್ಯುತ್ ಕ್ಕಿಂತ ಅಂದರೆ, ಗೃಹಜೋತಿ ಸರಾಸರಿ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಅನ್ನು ಬಳಸಿಕೊಂಡರೆ ಇನ್ಮುಂದೆ ಎಲ್ಲಾ ಯೂನಿಟ್ ಗೂ ಬಿಲ್ ಪಾವತಿ ಮಾಡಬೇಕಿದೆ. ಹೆಚ್ಚುವರಿ ಬಳಕೆಗೆ ತಕ್ಕಂತೆ ಶುಲ್ಕ ಪಾವತಿಮಾಡಬೇಕಿದ್ದು ಉದಾಹರಣೆಗೆ 110 ಯುನಿಟ್ ಉಚಿತ ವಿದ್ಯುತ್ ಅರ್ಹತೆ ಹೊಂದಿದ್ದರೆ ಅದಕ್ಕಿಂತ ಹೆಚ್ಚು 130 ಯುನಿಟ್ ಬಳಸಿದರೆ ಹೆಚ್ಚುವರಿ ಯುನಿಟ್ ನ ಶುಲ್ಕ ಪಾವತಿಮಾಡಬೇಕಾಗುತ್ತದೆ. ಕಡಿಮೆ ವಿದ್ಯುತ್ ಅನ್ನು ಬಳಸಿಕೊಂಡರೆ ಗೃಹಜ್ಯೋತಿ ಸೌಲಭ್ಯ ನಿಮಗೆ ಸಿಗಲಿದೆ.
ಇತರೆ ವಿಷಯಗಳು:
ಅಪಘಾತವಾದ್ರೆ ಇನ್ಮುಂದೆ ನ್ಯೂ ರೂಲ್ಸ್! ದೇಶಕ್ಕೆ ಕೇಂದ್ರದ ಹೊಸ ಕೊಡುಗೆ
ನವೋದಯ ವಿದ್ಯಾಲಯದಲ್ಲಿ 1377 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.! SSLC ಪಾಸಾಗಿದ್ರೆ ಸಾಕು ಅಪ್ಲೇ ಮಾಡಿ