ಹಲೋ ಸ್ನೇಹಿತರೇ, ಅನ್ನಭಾಗ್ಯ ಯೋಜನೆ ಸರ್ಕಾರ ಜಾರಿಗೆ ತಂದಿರುವ ಒಂದು ಅತ್ಯುತ್ತಮ ಗ್ಯಾರಂಟಿ ಯೋಜನೆ ಎನ್ನಬಹುದು. ಯಾಕೆಂದರೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರದ ಕಡೆಯಿಂದ ಉಚಿತವಾಗಿ ಅಕ್ಕಿ ವಿತರಣೆ ಮಾಡುವ ಯೋಜನೆ ಇದಾಗಿದೆ.
ಸದ್ಯ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗದೆ ಇದ್ದರೂ ಅದರ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಇನ್ನು ಹೊಸ ಪಡಿತರ ಚೀಟಿ ವಿತರಣೆಗೆ ಸಂಬಂಧಪಟ್ಟ ಹಾಗೆ ರಾಜ್ಯ ಸರ್ಕಾರ ಮಹತ್ವದ ಮಾಹಿತಿ ಒಂದನ್ನು ನೀಡಿದೆ.
Contents
ರೇಷನ್ ಕಾರ್ಡ್ ವಿತರಣೆ:
ಬಡತನ ರೇಖೆಗಿಂತ ಕೆಳಗಿರುವವರು ಆಹಾರ ಧಾನ್ಯವನ್ನು ಸರ್ಕಾರದಿಂದ ಉಚಿತವಾಗಿ ಪಡೆದುಕೊಳ್ಳಬಹುದು. ಇದಕ್ಕಾಗಿ ಆದ್ಯತಾ ಪಡಿತರ ಚೀಟಿ ಅಥವಾ ಎ ಎ ವೈ ಪಡಿತರ ಚೀಟಿ ಹೊಂದಿರುವುದು ಕಡ್ಡಾಯ. ಇದರೊಂದಿಗೆ ಸಾಮಾನ್ಯ ಗುರುತಿನ ಚೀಟಿಯಾಗಿ ಹಾಗೂ ಸರ್ಕಾರದ ಕೆಲವು ಯೋಜನೆಗಳ ಅನೇಕ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ಎಪಿಎಲ್ ಕಾರ್ಡ್ ಅನ್ನು ಕೂಡ ವಿತರಣೆ ಮಾಡಲಾಗುವುದು.
ಇದನ್ನು ಬಡತನ ರೇಖೆಗಿಂತ ಮೇಲ್ಪಟ್ಟ ಜನರಿಗೆ ಮಾತ್ರ ಕೊಡಲಾಗುವಂಥದ್ದು. ಎಪಿಎಲ್ ಕಾರ್ಡ್ ಹೊಂದಿದ್ರೆ ಉಚಿತವಾಗಿ ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.
ಇನ್ನು ಹೊಸ ಪಡಿತರ ಚೀಟಿ ವಿತರಣೆ ವಿಚಾರಕ್ಕೆ ಬಂದರೆ ಇಷ್ಟು ದಿನ ಜನರ ಕಾಯುವಿಕೆಗೆ ಈಗ ಒಂದು ಫುಲ್ ಸ್ಟಾಪ್ ಇಡಲು ಹೊರಟಿದೆ ರಾಜ್ಯ ಸರ್ಕಾರ. ಇಷ್ಟು ದಿನ ರೇಷನ್ ಕಾರ್ಡ್ ಇಲ್ಲ ಅಂತ ತಲೆಕೆಡಿಸಿಕೊಂಡಿದ್ದ ಜನರಿಗೆ ಇದೀಗ ಗುಡ್ ನ್ಯೂಸ್ ನೀಡಿದ್ದು, ಏಪ್ರಿಲ್ ಒಂದರಿಂದ ಅಂದ್ರೆ ಇನ್ನೂ 20 ದಿನಗಳ ನಂತರ ಹೊಸ ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಅವಕಾಶವಿದೆ.
7 ನೇ ಕಂತಿನ 2,000 ರೂ. ಹಣ ಜಮಾ ಯಾವಾಗ? ಇಲ್ಲಿದೆ DBT ಸ್ಟೇಟಸ್ ಚೆಕ್ ಮಾಡುವ ಲಿಂಕ್
ಈಗಾಗಲೇ ಅರ್ಜಿಯನ್ನು ಸಲ್ಲಿಸಿದ ಮೂರು ಲಕ್ಷಕ್ಕಿಂತ ಹೆಚ್ಚು ಜನರು ಹೊಸ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಏಪ್ರಿಲ್ ಒಂದರಿಂದ ನಿಮಗಾಗಿ ಕಾಯ್ದಿರಿಸಲಾದ ರೇಷನ್ ಕಾರ್ಡ್ ಪಡೆದುಕೊಳ್ಳಿ.
ಈ ಕೆಲಸ ಮಾಡದೆ ಇದ್ರೆ ಡಿವಿಟಿ ಹಣ ನಿಮಗಿಲ್ಲ!
ಇನ್ನು ಎಲ್ಲಾ ಕೆಲಸಕ್ಕೂ EKYC ಕಡ್ಡಾಯ ಎನ್ನುವುದು ನಿಮಗೆಲ್ಲಾ ಗೊತ್ತು. ನಿಮ ಖಾತೆಗೆ ಆಧಾರ್ ಸೀಡಿಂಗ್ ಮತ್ತು ಎನ್ಪಿಸಿಐ ಮ್ಯಾಪಿಂಗ್ ಆಗದೆ ಇದ್ರೆ ತಕ್ಷಣ ಬ್ಯಾಂಕ್ ಶಾಖೆಗೆ ಹೋಗಿ ಈ ಕೆಲಸವನ್ನು ಮಾಡಿಕೊಳ್ಳಿ. ಕಳೆದ ಆರು ತಿಂಗಳ ಹಿಂದೆ ಈ ಕೆ ವೈ ಸಿ ಮಾಡಿಸಿದ್ದು, ಈಗ ಮತ್ತೆ ಹಣ ಡಿ ಬಿ ಟಿ ಆಗುತ್ತಿಲ್ಲ ಎಂದರೆ ಬ್ಯಾಂಕಿನಲ್ಲಿ ಈಕೆ ವೈ ಸಿ ಅಪ್ಡೇಟ್ ಮಾಡಿಸಬೇಕು.
ನಿಮ್ಮ ಎಲ್ಲಾ ವಿವರಗಳು ಸರಿಯಾಗಿ ಇದ್ದರೆ ತಪ್ಪದೇ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಇನ್ನು ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಕೂಡ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಏಳನೇ ಕಂತಿನ ಹಣ ಬಿಡುಗಡೆ:
ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿಯ ಬದಲು ಹಣ ವಿತರಣೆ ಮಾಡುತ್ತಿದೆ. ಈಗಾಗಲೇ ಆರು ಕಂತಿನ ಹಣ ಫಲಾನುಭವಿಗಳ ಖಾತೆಗೆ ತಲುಪಿದೆ. ಏಳನೇ ಕಂತಿನ ಹಣವನ್ನು ಇನ್ನೇನು ಸದ್ಯದಲ್ಲಿಯೇ ಸರ್ಕಾರ ಬಿಡುಗಡೆ ಮಾಡಲಿದ್ದು ಮಾರ್ಚ್ ತಿಂಗಳ ಅಂತ್ಯದ ಒಳಗೆ ನಿಮ್ಮ ಖಾತೆಗೂ ತಪ್ಪದೆ ಹಣ ವರ್ಗಾವಣೆ ಆಗುತ್ತದೆ.
ಇತರೆ ವಿಷಯಗಳು
ಹೊಸ BPL ಕಾರ್ಡ್ ಪಡೆಯಲು ಅರ್ಜಿ ಆಹ್ವಾನ! ಅರ್ಹರು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ
ಮಹಿಳೆಯರಿಗೆ ₹15,000 & 15 ದಿನಗಳ ಉಚಿತ ತರಬೇತಿ.! ಕೇಂದ್ರ ಸರ್ಕಾರದ ನಮೋ ಡ್ರೋನ್ ದೀದಿ ಯೋಜನೆ