rtgh
Headlines

ಮಹಿಳೆಯರಿಗೆ ₹15,000 & 15 ದಿನಗಳ ಉಚಿತ ತರಬೇತಿ.! ಕೇಂದ್ರ ಸರ್ಕಾರದ ನಮೋ ಡ್ರೋನ್ ದೀದಿ ಯೋಜನೆ

namo drone didi yojana
Share

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರವು 2023ರಲ್ಲಿ ನಮೋ ಡ್ರೋನ್ ದೀದಿ ಯೋಜನೆಯನ್ನು ಆರಂಭಿಸಿತು. ಡ್ರೋನ್‌ಗಳ ಮೂಲಕ ಕೃಷಿ ಕ್ಷೇತ್ರಗಳಲ್ಲೂ ಮಹಿಳೆಯರು ಸಬಲರಾಗುತ್ತಿದ್ದಾರೆ. ಇದರೊಂದಿಗೆ ಹೊಸ ತಂತ್ರಜ್ಞಾನದೊಂದಿಗೆ ಕೃಷಿ ಮಾಡುವ ಅವಕಾಶವೂ ಸಿಗುತ್ತಿದೆ. ಈ ಯೋಜನೆ ಲಾಭ ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

namo drone didi yojana

ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಹಲವು ಸರ್ಕಾರಿ ಯೋಜನೆಯನ್ನು ನಡೆಸುತ್ತಿದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರ ಮತ್ತೊಂದು ಯೋಜನೆ ಪ್ರಾರಂಭಿಸಿದೆ. ಇದರ ಹೆಸರು ನಮೋ ಡ್ರೋನ್ ದೀದಿ ಯೋಜನೆ ಅಡಿಯಲ್ಲಿ ಸರ್ಕಾರ ಮಹಿಳೆಯರಿಗೆ 15,000 ರೂ.ನೀಡುವುದರ ಜೊತೆಗೆ ತರಬೇತಿಯನ್ನೂ ನೀಡಲಿದೆ.

15 ದಿನಗಳ ತರಬೇತಿ

ನಮೋ ಡ್ರೋನ್ ದೀದಿ ಯೋಜನೆ ಮೂಲಕ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಇದರಲ್ಲಿ ಮಹಿಳೆಯರಿಗೆ ಡ್ರೋನ್ ಹಾರಿಸುವ ತರಬೇತಿ ನೀಡಲಾಗುವುದು. ಈ ಯೋಜನೆಯಡಿ ಮಹಿಳೆಯರಿಗೆ 15 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ 15000 ರೂ. ಸಹ ನೀಡಲಾಗುವುದು. 

ಯಾವ ಮಹಿಳೆಯರು ಪ್ರಯೋಜನ ಪಡೆಯುತ್ತಾರೆ?

18 ವರ್ಷ / ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಈ ಯೋಜನೆಗೆ ಸೇರಬಹುದಾಗಿದೆ. ಅರ್ಜಿದಾರರು ಕೆಳ ಆರ್ಥಿಕ ವರ್ಗಕ್ಕೆ ಸೇರಿದವರಾಗಿರಬೇಕು. ಇದರೊಂದಿಗೆ, ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಸಂಬಂಧ ಹೊಂದಿರಬೇಕಾಗುತ್ತದೆ. 

ಯಾವ ದಾಖಲೆಗಳು ಬೇಕಾಗುತ್ತವೆ

  • ಆಧಾರ್ ಕಾರ್ಡ್ (Aadhar card)
  • ಪ್ಯಾನ್ ಕಾರ್ಡ್( Pan card)
  • ನಿವಾಸ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ (Photo)
  • ಮೊಬೈಲ್ ಸಂಖ್ಯೆ (mobile number)
  • ಇಮೇಲ್ ಐಡಿ (Email Id)
  • ಸ್ವಸಹಾಯ ಗುಂಪಿನ ID ಕಾರ್ಡ್( ID card)

ಅನೇಕ ತಾಂತ್ರಿಕ ಮಾಹಿತಿಯನ್ನು ನೀಡಲಾಗಿದೆ

ಈ ಯೋಜನೆಯಲ್ಲಿ ಮಹಿಳೆಯರಿಗೆ ಸರ್ಕಾರದಿಂದ ಡ್ರೋನ್‌ಗಳನ್ನು ಹಾರಿಸಲು ತರಬೇತಿ ನೀಡಲಾಗುವುದು. ಇದರೊಂದಿಗೆ ಮಹಿಳೆಯರಿಗೆ ತಾಂತ್ರಿಕ ಜ್ಞಾನವನ್ನೂ ಒದಗಿಸಲಾಗುತ್ತದೆ. ಕೀಟನಾಶಕಗಳಿಂದ ಬೆಳೆಯನ್ನು ರಕ್ಷಿಸಲು ಸಲಹೆಯನ್ನು  ತರಬೇತಿಯಲ್ಲಿ ನೀಡಲಾಗುವುದು. ಸಿಂಪರಣೆ & ಬಿತ್ತನೆ ತಂತ್ರಗಳನ್ನು ಸಹ ಕಲಿಸಲಾಗುವುದು. 

ಇತರೆ ವಿಷಯಗಳು

ಈಗ ʼವಿವಾಹ ನೋಂದಣಿ’ ಇನ್ನಷ್ಟು ಸುಲಭ.! ಮನೆಯಲ್ಲಿ ಕುಳಿತು ಮೊಬೈಲ್‌ನಲ್ಲೇ ಸರ್ಟಿಫಿಕೇಟ್ ಪಡೆದುಕೊಳ್ಳಿ

SSLC ಆದವರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಡ್ರೈವರ್, ಗ್ರೂಪ್‌ ಡಿ ಹುದ್ದೆಗಳ ನೇಮಕ


Share

Leave a Reply

Your email address will not be published. Required fields are marked *