rtgh

ಪಹಣಿ/RTC ಗೆ ಆಧಾರ್‌ ಲಿಂಕ್‌ ಕಡ್ಡಾಯಗೊಳಿಸಿದ ಕಂದಾಯ ಇಲಾಖೆ! ಮೊಬೈಲ್‌ನಲ್ಲೇ ಈ ರೀತಿ ಲಿಂಕ್‌ ಮಾಡಿ

RTC Aadhar link
Share

ಹಲೋ ಸ್ನೇಹಿತರೇ, ಈಗಾಗಲೇ ಬಹುತೇಕ ಜನರಿಗೆ ತಿಳಿದಿರುವ ಹಾಗೆಯೇ ಜಮೀನಿನ ಪಹಣಿ/ಉತಾರ್/RTC ಗೆ ಆಧಾರ್ ಜೋಡಣೆಯನ್ನು ಕಂದಾಯ ಇಲಾಖೆಯಿಂದ ಕಡ್ಡಾಯ ಗೊಳಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

RTC Aadhar link

ಈ ಕುರಿತು ನೂತನ ಕ್ರಮ ಒಂದನ್ನು ಕಂದಾಯ ಇಲಾಖೆಗೆ ಜಾರಿಗೆ ತಂದಿದೆ. ಸಚಿವ ಕೃಷ್ಣ ಬೈರೇಗೌಡ ಅವರು ಹಂಚಿಕೊಂಡಿರುವ ಮಾಹಿತಿಯನ್ನು ರಾಜ್ಯದಾದ್ಯಂತ ಆರ್.ಟಿ.ಸಿ-ಆಧಾರ್ ಜೋಡಣೆ ಕೆಲಸ ಅಭಿಯಾನದ ಮಾದರಿಯಲ್ಲಿ ನಡೆಸಲಾಗಿದ್ದು, ಈವರೆಗೆ 15 ಲಕ್ಷ ಆರ್.ಟಿ.ಸಿ ಮಾಲೀಕರನ್ನು ಸಂಪರ್ಕ ಮಾಡಲಾಗಿದೆ. 

ಮುಂದಿನ 2-3 ತಿಂಗಳಲ್ಲಿ ಎಲ್ಲಾ ಆರ್.ಟಿ. ಸಿ ಮಾಲೀಕರನ್ನು ತಲುಪಲು ರೂಪುರೇಷನ್ನು ಸಿದ್ದಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪಹಣಿ/RTC & ಆಧಾರ್ ಜೋಡಣೆ ಏಕೆ? ಮಾಡಿಸಬೇಕು, ಪಹಣಿ/RTC & ಆಧಾರ್ ಜೋಡಣೆ ಎಲ್ಲಿ ಮಾಡಿಸಿಕೊಳ್ಳಬೇಕು. ಮೊಬೈಲ್ ಆಧಾರ್ ಜೋಡಣೆ ಮಾಡಬಹುದಾ?

ಅಭಿಯಾನದ ಮಾದರಿ: ಗ್ರಾಮ ಲೆಕ್ಕಿಗರ ಮನೆ ಬಾಗಿಲಿಗೆ ತೆರಳಿ RTC-ಆಧಾರ್‌ ಜೋಡಣೆ:

ಪ್ರಸ್ತುತ ರಾಜ್ಯದಲ್ಲಿ 88,000 ಪಹಣಿಯಲ್ಲಿ ಕೃಷಿ ಭೂಮಿ ಇದ್ದು 15 ಲಕ್ಷ ಮಾಲೀಕರು ಈಗಾಗಲೇ ತಮ್ಮ ಪಹಣಿಗೆ ಆಧಾರ್ ಲಿಂಕ್‌ನ್ನು ಮಾಡಿಸಿದ್ದಾರೆ ಉಳಿದಿರುವ ಪಹಣಿಗಳಿಗೆ ಶೀಘ್ರವಾಗಿ ಆಧಾರ್ ಜೋಡಣೆ ಮಾಡಲು ಗ್ರಾಮ ಲೆಕ್ಕಿಗರ ಮನೆ ತೆರಳಿ RTC-ಆಧಾರ್‌ ಜೋಡಣೆ ಮಾಡುವ ಅಭಿಯಾನ ಕಂದಾಯ ಇಲಾಖೆಯಿಂದ ಆಯೋಜಿಸಲಾಗಿದೆ. 

ಇದನ್ನು ಹೊರತುಪಡಿಸಿ RTC-ಆಧಾರ್‌ ಜೋಡಣೆ ಮಾಡಿಕೊಳ್ಳುವ ಮಾಹಿತಿ ತಿಳಿದಿರುವ ಸಾರ್ವಜನಿಕರೆಲ್ಲರು ತಪ್ಪದೇ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಿಗರನ್ನು ಸಂಪರ್ಕ ಮಾಡಿ RTC-ಆಧಾರ್‌ ಜೋಡಣೆ ಮಾಡಿಸಬೇಕು ಎಂಬ ಬಗ್ಗೆ ಕಂದಾಯ ಇಲಾಖೆಯಿಂದ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಪಹಣಿ/RTC ಗೆ ಆಧಾರ್ ಜೋಡಣೆ  ಏಕೆ? ಮಾಡಿಸಬೇಕು:

ಜಮೀನಿನ ಮಾಲೀಕರ ನೈಜನೆಯನ್ನು ನಿಖರವಾಗಿ ತಿಳಿದುಕೊಳ್ಳಲು & ಬಾಕಿ ಪೋಡಿ ಹಾಗೂ ದುರಸ್ತಿ ಪ್ರಕರಣ ಇತ್ಯರ್ಥಕ್ಕೆ ಮೊದಲು ನಿಖರವಾದ ಆಕಾರ್‌ ಬಂದ್‌ ಮಾಹಿತಿ ಪಡೆಯಬೇಕಾಗುತ್ತದೆ. ನಿಖರವಾದ ಆಕಾರ್‌ ಬಂದ್‌ ಇಲ್ಲದೇ RTC ಜೊತೆಗೆ ಜೋಡಣೆ ಸಾಧ್ಯವಿರುವುದಿಲ್ಲ. ಆ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಪಹಣಿ/RTC ಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ.

ಇದಲ್ಲದೇ ಮುಂದಿನ 2 ತಿಂಗಳಲ್ಲಿ 65 ಲಕ್ಷ ಆಕಾರ್‌ ಬಂದ್‌ ಡಿಜಿಟಲೀಕರಣಗೊಳಿಸಲು ಇಲಾಖೆಯಿಂದ ಯೋಜನೆ ರೂಪುಗೊಳಿಸಲಾಗಿದೆ ಅದ್ದರಿಂದ ಈ ಕ್ರಮ ಅನುಸರಿಸುವುದು ಅಗತ್ಯವಾಗಿದೆ.

ನಿಮ್ಮ ಮೊಬೈಲ್ ನಲ್ಲೇ RTC-ಆಧಾರ್‌ ಜೋಡಣೆಯನ್ನು ಮಾಡಬಹುದು

ಜಮೀನನ್ನು ಹೊಂದಿದ ಮಾಲೀಕರು ಕಂದಾಯ ಇಲಾಖೆಯ ಭೂಮಿ ವೆಬ್ಸೈಟ್‌ನ್ನು ಭೇಟಿ ಮಾಡಿ ತಮ್ಮ ಜಮೀನಿನ ವಿವರ & ಆಧಾರ್ ವಿವರವನ್ನು ಹಾಕಿ ಜಮೀನಿನ ವಿವರವನ್ನು ಪಡೆದುಕೊಂಡು RTC-ಆಧಾರ್‌ ಜೋಡಣೆಯನ್ನು ನಿಮ್ಮ ಮೊಬೈಲ್ ನಲ್ಲೇ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಮೊಬೈಲ್‌ನಲ್ಲಿಯೇ RTC-ಆಧಾರ್‌ ಲಿಂಕ್‌ನ್ನು ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ.

Step-1: ಮೊದಲು ಭೂಮಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ಮಾಡಲು ಈ ಲಿಂಕ್ ಮೇಲೆ ಕ್ಲಿಕ್‌ ಮಾಡಿ Rtc adhar link website . ನಂತರ ನಿಮ್ಮ ಮೊಬೈಲ್ ನಂಬರ್‌ನ್ನು ಹಾಕಿ OTP ಪಡೆಯಿರಿ button ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಗೆ ಬರುವ OTP ನಮೂದಿಸಿ “Login” button ಮೇಲೆ ಕ್ಲಿಕ್ ಮಾಡಿ.

Step-2: ಲಾಗಿನ್ ಅದ ಬಳಿಕ ಮುಖಪುಟದಲ್ಲಿ ಪಹಣಿಗೆ ಆಧಾರ್ ಜೋಡಣೆ ಮಾಡಲಿರುವ ವ್ಯಕ್ತಿಯ ಆಧಾರ್ ನಂಬರ್ & ಹೆಸರನ್ನು ಹಾಕಿ ಮತ್ತೆ ಪುನಃ OTP ಪಡೆದುಕೊಂಡು Verify ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಮೇಲಿನ ಹಂತವನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ವಿವರ ತೋರಿಸುತ್ತದೆ ಒಂದೊಂದೇ ಸರ್ವೆ ನಂಬರ್‌ನ್ನು ಕ್ಲಿಕ್ ಮಾಡಿ ಕೊನೆಯಲ್ಲಿ ಕಾಣುವ Link button ಮೇಲೆ ಕ್ಲಿಕ್ ಮಾಡಿ OTP ನಮೂದಿಸಿ Verify ಬಟನ್‌ ಕ್ಲಿಕ್ ಮಾಡಿ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಆಗಲಿದೆ.

ಇತರೆ ವಿಷಯಗಳು

ಇ-ಶ್ರಮ್ ಕಾರ್ಡ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಫ್ರೀಯಾಗಿ 3,000 ಸಿಗುತ್ತೆ

ಮೋದಿ ಸರ್ಕಾರದ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ


Share

Leave a Reply

Your email address will not be published. Required fields are marked *