rtgh

384 KAS ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸ್ವೀಕಾರ: ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್‌ ಲಿಂಕ್

karnataka kas recruitment
Share

ಹಲೋ ಸ್ನೇಹಿತರೇ, ಕರ್ನಾಟಕ ಲೋಕಸೇವಾ ಆಯೋಗವು ಇಂದಿನಿಂದ KAS ಹುದ್ದೆಗಳಿಗೆ ಅರ್ಜಿ ಸ್ವೀಕಾರ ಮಾಡುತ್ತದೆ. ಈ ಹುದ್ದೆಯ ಆಕಾಂಕ್ಷಿಗಳು ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನವನ್ನು ಈ ಲೇಖನದಲ್ಲಿ ತಿಳಿಯಿರಿ.

karnataka kas recruitment

ಕರ್ನಾಟಕ ಲೋಕಸೇವಾ ಆಯೋಗವು ಇತ್ತೀಚೆಗೆ 384 ಗೆಜೆಟೆಡ್‌ ಪ್ರೊಬೇಷನರಿ (ಗ್ರೂಪ್ A, ಗ್ರೂಪ್‌ B ) ಹುದ್ದೆಗಳ ಭರ್ತಿಗೆ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು. ಈ ಸದರಿ ಹುದ್ದೆಗಳಿಗೆ ಮಾರ್ಚ್ 04 ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಮತ್ತು ಏಪ್ರಿಲ್ 03 ರವರೆಗೆ ಅಪ್ಲಿಕೇಶನ್‌ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ಈ ಸದರಿ ಹುದ್ದೆಗಳಿಗೆ ಪದವೀಧರರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೇ 05 ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗುವುದು.

KPSC ಯ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಪ್ರಮುಖವಾಗಿ 3 ಹಂತಗಳಿರುತ್ತವೆ.
1ನೇ ಹಂತ : ಪ್ರೊಫೈಲ್ ಕ್ರಿಯೇಟ್‌ ಮಾಡುವುದು ಮತ್ತು ಅಪ್‌ಡೇಟ್‌ ಮಾಡುವುದು
2ನೇ ಹಂತ : ಅಪ್ಲಿಕೇಶನ್ ಸಬ್‌ಮಿಷನ್ ಮಾಡುವುದು.
3ನೇ ಹಂತ : ಅಪ್ಲಿಕೇಶನ್‌ ಶುಲ್ಕ ಪಾವತಿವನ್ನು ಮಾಡುವುದು.

ಕೆಪಿಎಸ್‌ಸಿ ಕೆಎಎಸ್‌ ಹುದ್ದೆಗೆ ಅರ್ಜಿ ಸಲ್ಲಿಕೆ ಹೇಗೆ?

– KPSCಯ ವೆಬ್‌ಸೈಟ್‌ ‘http://www.kpsc.kar.nic.in/’ ನ್ನು ಭೇಟಿ ಮಾಡಿ.
– ತೆರೆದ ಮುಖಪುಟದಲ್ಲಿ ‘Apply Online for Various Notifications’ ಎನ್ನುವುದನ್ನು ಕ್ಲಿಕ್ ಮಾಡಿ.
– ನಂತರ ಮತ್ತೊಂದು ವೆಬ್‌ಪುಟ ತೆರೆದುಕೊಳ್ಳುತ್ತದೆ.
– ಇಲ್ಲಿ ಮೊದಲು ಯಾವ್ಯಾವ ಹುದ್ದೆಗೆ ಅರ್ಜಿ ಲಿಂಕ್ ಬಿಡುಗಡೆಯಾಗಿದೆ ಎಂದು ಗಮನಿಸಿಕೊಳ್ಳಬಬಹುದಾಗಿದೆ.
– ಮೊದಲು KPSC ಪೋರ್ಟಲ್‌ನಲ್ಲಿ ಒನ್‌ ಟೈಮ್‌ ರಿಜಿಸ್ಟ್ರೇಷನ್‌ಗಾಗಿ ‘Click Here For One Time Registration’ ಕ್ಲಿಕ್ ಮಾಡಿ.
– ಅಗತ್ಯ ಮಾಹಿತಿಯನ್ನು ನೀಡಿ ರಿಜಿಸ್ಟ್ರೇಷನ್‌ ಪೂರ್ಣಗೊಳಿಸಿ. ನಿಮ್ಮ ಪ್ರೊಫೈಲ್‌ ಕ್ರಿಯೇಟ್‌ ಆಗಲಿದೆ.
– ಈಗಾಗಲೇ KPSC ವೆಬ್‌ನಲ್ಲಿ ರಿಜಿಸ್ಟ್ರೇಷನ್‌ ಮಾಡಿದ್ದಲ್ಲಿ, ಯೂಸರ್ ನೇಮ್, ಪಾಸ್‌ವರ್ಡ್‌ ನೀಡಿ ಲಾಗಿನ್ ಮಾಡಿ.
– ನಂತರ KAS ಹುದ್ದೆಯ ಅರ್ಜಿಗೆ ಕೇಳಲಾಗಿರುವ ವಿವರವನ್ನು ನೀಡಿ ಅಪ್ಲಿಕೇಶನ್‌ ಸಲ್ಲಿಸಿ.
– ಶುಲ್ಕ ಪಾವತಿ ನಂತರ, ಮುಂದಿನ ರೆಫರೆನ್ಸ್‌ಗೊಸ್ಕರ ಅರ್ಜಿ ಪ್ರಿಂಟ್ ನ್ನು ತೆಗೆದುಕೊಳ್ಳಿ.

ಕೆಪಿಎಸ್‌ಸಿ ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್‌ಗೆ ಹಾಗೂ ಅರ್ಜಿಗೆ ಬೇಕಾದ ದಾಖಲೆ, ಮಾಹಿತಿಗಳು

  • ಹೆಸರು.
  • ವೈಯಕ್ತಿಕ ವಿವರ.
  • ಮೊಬೈಲ್ ನಂಬರ್. (mobile number)
  • ಶೈಕ್ಷಣಿಕ ವಿವರಗಳು, ಅಂಕಗಳು ಮತ್ತು ಅಂಕಪಟ್ಟಿಗಳು.
  • ಸಹಿ ಸ್ಕ್ಯಾನ್‌ ಕಾಪಿ.
  • ಭಾವಚಿತ್ರ ಸ್ಕ್ಯಾನ್‌ ಕಾಪಿ.
  • ಜಾತಿ & ಆದಾಯ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್ (Aadhar card).
  • SSLC ಅಂಕಪಟ್ಟಿ.
  • ಸರ್ಕಾರಿ ಉದ್ಯೋಗಿ ಆಗಿದ್ದಲ್ಲಿ (ಎನ್‌ಒಸಿ).

ಇತರೆ ವಿಷಯಗಳು

ಕೊಬ್ಬರಿ ಬೆಂಬಲ ಬೆಲೆ ಯೋಜನೆ: ರೈತರ ನೋಂದಣಿ ಪ್ರಕ್ರಿಯೆ ಮಾರ್ಚ್ 4ರಿಂದ ಆರಂಭ

ಹೊಸ ರೇಷನ್‌ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಿದ್ದೀರಾ? ಹಾಗಿದ್ದರೆ ಇಲ್ಲಿಂದಲೇ ನಿಮ್ಮ ಅರ್ಜಿ ಸ್ಟೇಟಸ್‌ ಚೆಕ್‌ ಮಾಡಿ


Share

Leave a Reply

Your email address will not be published. Required fields are marked *