ಹಲೋ ಸ್ನೇಹಿತರೇ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ಸಾರ್ವಜನಿಕರಿಗೆ ಸರಳವಾಗಿ ವಿವಿಧ ಯೋಜನೆಗಳ ಸೌಲಭ್ಯವನ್ನು ನೀಡಲು ಪಂಚಮಿತ್ರ ವಾಟ್ಸಾಪ್ ಚಾಟ್ ಸೇವೆಯಲ್ಲು ಆರಂಭಿಸಿದೆ. ಈ ವಾಟ್ಸಾಪ್ ಸೇವೆಗೆ ಹೇಗೆ ಸೇರಿಕೊಳ್ಳುವುದು ಮತ್ತು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಪಂಚಮಿತ್ರ ವಾಟ್ಸಾಪ್ ಚಾಟ್ ಬಳಕೆ ಮಾಡಿಕೊಂಡು ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಎಲ್ಲಾ ಯೋಜನೆ & ಸೇವೆಗಳಿಗೆ ನಿಮ್ಮ ಮೊಬೈಲ್‌ನಲ್ಲೆ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಮಾಹಿತಿಯನ್ನು ಕೂಡ ಮೊಬೈಲ್‌ನಲ್ಲೇ ತಿಳಿಯಬಹುದಾಗಿದೆ.
Contents
ಗ್ರಾಮ ಪಂಚಾಯತ್ ಸೇವೆಗಳು ಲಭ್ಯ:
ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಅದರ ಪೂರ್ಣ ಸ್ಥಿತಿಯನ್ನು ಪರಿಶೀಲಿಸಲು & ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಕುಂದುಕೊರತೆಯನ್ನು ದಾಖಲಿಸಲು, ದೇಶದಲ್ಲಿ ಪ್ರಪ್ರಥಮ ಬಾರಿಗೆ “ಪಂಚಮಿತ್ರ” whatsapp Chat ಲೋಕಾರ್ಪಣೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ಸಚಿವರಾದಂತಹ ಪ್ರಿಯಾಂಕ್ ಖರ್ಗೆಯವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅವಶ್ಯವಿರುವ ಗ್ರಾಮ ಪಂಚಾಯತಿಯ ವಿವಿಧ ಮಾಹಿತಿ & ವಿವರಗಳನ್ನು ಪಡೆಯಲು & ಗ್ರಾಮ ಪಂಚಾಯತಿಯ ಎಲ್ಲಾ ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಲವಾರು ವೆಬ್ಸೈಟ್ & ಪೋರ್ಟಲ್‌ಗಳಿಗೆ ಭೇಟಿ ನೀಡಬೇಕಾಗಿತ್ತು, ಅಲ್ಲದೆ ಗ್ರಾಮ ಪಂಚಾಯತಿಗಳಿಗೆ ಸಂಬಂಧ ಪಟ್ಟ ಎಲ್ಲಾ ಬಗೆಯ ಕುಂದುಕೊರತೆಯನ್ನು ದಾಖಲಿಸಬೇಕಾಗುತ್ತದೆ,
ಪರಿಹಾರವನ್ನು ಪಡೆಯಲು ಯಾವುದೇ ನಿರ್ದಿಷ್ಟವಾದ ವೆಬ್ಸೈಟ್ / ಪೋರ್ಟಲ್‌ಗಳು ಇರಲಿಲ್ಲ ಆದ್ದರಿಂದ ಸಾರ್ವಜನಿಕರಿಗೆ ಸಹಾಯವಾಗುವಂತೆ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಯ ವಿವಿಧ ಮಾಹಿತಿ & ವಿವರವನ್ನು ಪಡೆದುಕೊಳ್ಳಬಹುದಾಗಿದೆ. ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯು ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿರುವ Whatsapp Chat ತಂತ್ರಜ್ಞಾನ ದೇಶದಲ್ಲೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಇನ್ನು ಮುಂದೆ ಗ್ರಾಮ ಪಂಚಾಯತಿಗಳ ಮಾಹಿತಿ & ವಿವರವನ್ನು, ಸೇವೆಗಳಿಗೆ ಅರ್ಜಿ & ಕುಂದುಕೊರತೆಯನ್ನು Whatsapp Chat No. 8277506000 ಮೂಲಕ ದಾಖಲೆ ಮಾಡಬಹುದಾಗಿದೆ.
“ಪಂಚಮಿತ್ರ ಪೋರ್ಟಲ್” ಮೂಖಾಂತರ ಗ್ರಾಮಪಂಚಾಯಿತಿಯ ಮಾಹಿತಿಯಾದ ಚುನಾಯಿತ ಪ್ರತಿನಿಧಿಗಳ ವಿವರ, ಸಿಬ್ಬಂದಿಗಳ ವಿವರ, ಪೂರ್ಣಗೊಂಡ ಗ್ರಾಮ ಪಂಚಾಯತ್ ಸಭೆಗಳ ನಡಾವಳಿ, ಗ್ರಾಮ ಪಂಚಾಯತ್ ಮುಂಬರುವ ಸಭೆಗಳ ಮಾಹಿತಿಗಳು, ಆದಾಯ ಸಂಗ್ರಹ ವಿವರ, ಸೇವೆಗಳ ವಿವರ, ಸ್ವ ಸಹಾಯ ಗುಂಪಿನ ವಿವರ, ಗ್ರಾಮ ಪಂಚಾಯತ್ ಕಾರ್ಯಕ್ರಮಗಳು & ಉಪಕ್ರಮ, 4 (1) (A) & 4 (1) (B) ಆರ್‌ಟಿಐ ದಾಖಲೆಗಳ ವಿವರವನ್ನು ಪಡೆದುಕೊಳ್ಳಬಹುದಾಗಿದೆ.
ಯಾವೆಲ್ಲ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ?
1) ಕಟ್ಟಡ ನಿರ್ಮಾಣ ಲೈಸೆನ್ಸ್.
2) ವ್ಯಾಪಾರ ಪರವಾನಗಿ.
3) ನೀರು ಸರಬರಾಜಿನ ಸಂಪರ್ಕ ಕಡಿತ.
4) ಕುಡಿಯುವ ನೀರಿನ ನಿರ್ವಹಣೆ.
5) ಬೀದಿ ದೀಪದ ನಿರ್ವಹಣೆ.
6) ಗ್ರಾಮ ನೈರ್ಮಲ್ಯದ ನಿರ್ವಹಣೆ.
7) ಹೊಸ ನೀರು ಸರಬರಾಜು ಸಂಪರ್ಕ.
8) ನಿರಾಕ್ಷೇಪಣಾ ಪತ್ರ.
9) ರಸ್ತೆ ಅಗೆಯುವುದಾಕ್ಕಾಗಿ ಅನುಮತಿ.
10) ಕೈಗಾರಿಕಾ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ.
11) ಸ್ವಾಧೀನ ಪ್ರಮಾಣಪತ್ರ.
12) ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ.
13) ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು.
14) ಹೊಸ/ಆಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ.
15) ಹೊಸ or ಅಸ್ತಿತ್ವದಲ್ಲಿರುವ ಓವರ್ ಗೌಂಡ್ ಕೇಬಲ್ ಮೂಲಸೌಕರ್ಯ or ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ.
16) ನಮೂನೆ 11ಬಿ.
17) ನಮೂನೆ 9/1ಎ.
ಸೇವೆಗಳಿಗೆ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಅರ್ಜಿಗಳ ಸ್ಥಿತಿಯನ್ನು ಸಹ ಪರಿಶೀಲಿಲನೆ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದಾಗಿದೆ.
ಪಂಚಮಿತ್ರ ವಾಟ್ಸಾಪ್ ಚಾಟ್ ಬಳಸುವುದು ಹೇಗೆ?
ಈ 8277506000 ಪಂಚಮಿತ್ರ ವಾಟ್ಸಾಪ್ ಚಾಟ್ ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ Save ಮಾಡಿಕೊಂಡು ನಂತರ ಈ ಸಂಖ್ಯೆಗೆ ಹಾಯ್(Hi) ಎಂದು SMS ಕಳುಹಿಸಿದರೆ ಅಧಿಕೃತ ವಾಟ್ಸಾಪ್ ಚಾಟ್ ಫ್ರಾರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಿ. ಅಗತ್ಯ ಮಾಹಿತಿಯನ್ನು ನಿಮ್ಮ ಮೊಬೈಲ್ನಲ್ಲೇ ವಾಟ್ಸಾಪ್ ಅಪ್ಲಿಕೇಶನ್ ಮೂಲಕ ಪಡೆಯಬಹುದಾಗಿದೆ.
ಪಂಚತಂತ್ರ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ : click here
ಇತರೆ ವಿಷಯಗಳು
ಮಾರ್ಚ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಮತ್ತಷ್ಟು ದುಬಾರಿ! ಮತ್ತೆ ಏರಿಕೆಯತ್ತ ಗ್ಯಾಸ್!!
ಕೇಂದ್ರ ಸರ್ಕಾರದ ಈ ಯೋಜನೆಯಡಿ 15,000 ರೂ ಉಚಿತ.! 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಅಪ್ಲೇ ಮಾಡಿ